ಅಲ್ಲಾಹನ ನಿಷ್ಠಾವಂತ ದಾಸರು ಆತನ ಕರೆ ಬಂದಾಗ ತಮ್ಮ ಮಧುರ ನಿದ್ರೆಯನ್ನು ತ್ಯಾಗ ಮಾಡಿ, ತಮ್ಮೆಲ್ಲ ವ್ಯಾಪಾರ ವಹಿವಾಟುಗಳನ್ನು ತ್ಯಜಿಸಿ ಎರಡೂ ನಮಾಜ್ಗಳನ್ನು ನಿರ್ವಹಿಸುವ ಜಮಾಯತ್ಗಳಲ್ಲಿ(ಸಾಮೂಹಿಕ) ಸೇರಿಕೊಳ್ಳುತ್ತಾರೆ. ಇಂತಹ ದಾಸರನ್ನೇ ಕುರಾನ್ನ ಅನ್ಸೂರ್ ಅಧ್ಯಾಯದಲ್ಲಿ ಪ್ರಶಂಸಿಸಲಾಗಿದೆ. ಮೈಮರೆಸುವ ವಸ್ತುಗಳೆಲ್ಲ ಅವರು ನಮಾಜನ್ನು ಮರೆಯುವಂತೆ ಮಾಡುವುದಿಲ್ಲ. ಏಕೆಂದರೆ, ನಾವು ಅಲ್ಲಾಹನ ಸ್ಮರಣೆಯನ್ನು ಕಡೆಗಣಿಸಿಬಿಟ್ಟರೆ ನಾಳೆ ಅವನಿಗೆ ಮುಖ ತೋರಿಸುವುದು ಹೇಗೆ ? ಎಂಬ ಚಿಂತೆ ಅವರನ್ನು ಕಾಡುತ್ತದೆ. ಈ ಚಿಂತೆಯಿಂದಾಗಿ ಅವರೆಂದೂ ಅಲ್ಲಾಹನ ಸ್ಮರಣೆಯಿಂದ ವಿಮುಖರಾಗುವುದಿಲ್ಲ.