

ಗಜೇಂದ್ರ ಬಾಬು
(ಲೇಖಕರು ಜ್ಯೋತಿಷಿಗಳು ಮತ್ತು ವಾಸ್ತುತಜ್ಞರು)
ಅಶ್ವಯುಜ ಮಾಸ ಶುಕ್ಲ ಅಷ್ಟಮಿ ಎಂಟನೇ ರಾತ್ರಿ ಗೌರವರ್ಣ ಜಗತ್ ಸುಂದರಿ ಮಹಾಗೌರಿ. ಯಮಪಾಶ ಜಯಿಸುವ ಕಾಲರಾತ್ರಿಯ ಅವತಾರದಲ್ಲಿ ಮತಂಗಕುಮಾರಿಯ ರೂಪದಲ್ಲಿ ರಾಕ್ಷಸಸಂಹಾರಕ್ಕಾಗಿ ಕಪ್ಪುಬಣ್ಣದಲ್ಲಿ ಜನಿಸಿ ಕಾಳಿಯಾಗಿ, ರಾಕ್ಷಸರ ಸಂಹಾರವಾದ ನಂತರ ಕೃಷ್ಣವರ್ಣಮುಖದೊಂದಿಗೆ ಶಿವನನ್ನು ವರಿಸಲು ಹಿಂಜರಿದಳು. ಗೌರವರ್ಣವನ್ನು ಪಡೆಯಲು ಘೋರ ತಪಸ್ಸನ್ನು ಮಾಡಿ, ಗಂಗಾಸ್ನಾನದಿಂದ ಗೌರವರ್ಣವಾದಳು. ಶಂಖ, ಚಂದ್ರ, ಕುಂದದಂತೆ ಬಿಳಿವರ್ಣದವಳಾದ್ದರಿಂದ ಇವಳನ್ನು ಮಹಾಗೌರಿ ಎಂದು ಕರೆಯುತ್ತಾರೆ ಹಾಗೂ ಕಾಳಿರೂಪದಲ್ಲಿದ್ದ ದೇವಿಯು ಗೌರವರ್ಣವಾಗಿ, ಜಗತ್ ಸುಂದರಿಯಾಗಿ, ಮಹಾಗೌರಿಯಾಗಿ ಶಿವನನ್ನು ವರಿಸಿದಳು.
ಬಿಳಿ ಬಸವನ ಮೇಲೆ ಕುಳಿತವಳು, ಬಿಳಿ ವಸ್ತ್ರ ಧರಿಸಿದವಳು, ಪವಿತ್ರಳು, ಮಹಾದೇವನಿಗೆ ಸಂತೋಷ ಕೊಡುವವಳು, ಶಂಖ, ಚಂದ್ರ, ಮಲ್ಲಿಗೆ ಹೂವಿನಂತೆ ಬಿಳಿ, ಹೊಳೆಯುವವಳು ಎಂದು ವರ್ಣನೆ. ತ್ರಿಶೂಲ ಧಾರಿಣಿ, ಡಮರು ಶಸ್ತ್ರಧಾರಿಣಿ, ಅಭಯ ಮುದ್ರೆ, ವರದ ಮುದ್ರೆಯೊಂದಿಗೆ ಭಕ್ತರ ಪಾಪನಾಶಿನಿ, ಶುಭ್ರತೆ, ಅತ್ಯಂತ ಶಾಂತರೂಪಿಣಿ. ರಾಹುವಿನ ಅಧಿದೇವತೆ ಮಹಾಗೌರಿ. ರಾಹು ದೋಷ, ಕರ್ಮದೋಷ, ಮಾನಸಿಕ ರೋಗ, ಭ್ರಮೆ, ಚರ್ಮರೋಗದ ಸಮಸ್ಯೆಗಳು ಇರುವವರಿಗೆ ಮಹಾಗೌರಿಯ ಪೂಜೆ ಅತ್ಯಂತ ಶುಭಕರ. ಪಿತೃದೋಷಗಳ ನಾಶಕ್ಕೂ ಇವಳೇ ಅಧಿದೇವತೆ. ದುರ್ಗಾಷ್ಟಮಿ ಬಹು ಶ್ರೇಷ್ಠಕಾಲ. ಅಷ್ಟಮಿಯು ಮುಗಿದು ನವಮಿ ಕಾಲದ ಪ್ರಾರಂಭವನ್ನು ಸಂಧಿಕಾಲವೆಂದು ಕರೆಯುತ್ತಾರೆ, ಅಷ್ಟಮಿ & ನವಮಿ ಸಂಧಿ ಎಲ್ಲ ದುರ್ಗಾ ಪೂಜೆಯಲ್ಲೂ ಅತ್ಯಂತ ಮುಖ್ಯ.
ಬಂಗಾಳದಲ್ಲಿ ದುರ್ಗಾ ಪೂಜೆಯಲ್ಲಿ ಸಂಧಿ ಪೂಜೆಯನ್ನು ನೋಡಲು ಲಕ್ಷಾಂತರ ಜನರು ಸೇರುತ್ತಾರೆ. ಅಷ್ಟಮಿಯ ಕೊನೆಯ 24 ನಿಮಿಷ, ನವಮಿಯ ಮೊದಲ 24 ನಿಮಿಷ ಸಂಧಿಕಾಲ. ಈ 48 ನಿಮಿಷವು ಚಾಮುಂಡಿಯ ಪ್ರಕಟ ಕಾಲ. ಎಲ್ಲ ಶಕ್ತಿ ಸಂಗಮ. ಚಂಡ ಮುಂಡ & ಶುಂಭ & ನಿಶುಂಭರ ಸೇನಾಪತಿ & ದೇವಿ ಅಂಬಿಕಾ ಜೊತೆ ಯುದ್ಧ & ಅಂಬಿಕಾ ರೂಪದಿಂದ ಹಣೆಯಿಂದ & ಕಾಳಿ/ಚಾಮುಂಡಿ ಬಂದಳು, ಚಂಡ & ಮುಂಡರನ್ನು ಸಂಹಾರ ಮಾಡಿದರು. ಅದಕ್ಕೆ ಚಾಮುಂಡಾಗೆ ಚಂಡ & ಮುಂಡ ನಾಶಿನಿ ಎಂಬ ಹೆಸರು. ರಕ್ತಬೀಜ & ಒಂದು ಹನಿ ರಕ್ತದಿಂದ ಇನ್ನೊಂದು ಹನಿ ರಕ್ತಬೀಜ & ಕಾಲರಾತ್ರಿ, ಚಾಮುಂಡಿ ಸೇರಿ ರಕ್ತಬೀಜನ ರಕ್ತ ಕುಡಿದು ಕೊಂದರು. ಸಂಧಿಕಾಲವು ರಕ್ತಬೀಜನ ವಧೆಯ ಕಾಲ. ಸಂಧಿಕಾಲದಲ್ಲಿ ತ್ರಿದೇವಿ ಸಂಗಮ. ಆದುದರಿಂದ ಸಂಧಿಕಾಲದಲ್ಲಿ ಮಾಡಿದ ಪೂಜೆ, ವ್ರತದಿಂದ ಮೂರೂ ದೇವಿಯರ ಅನುಗ್ರಹ ಪ್ರಾಪ್ತವಾಗುತ್ತದೆ. ಸಂಧಿಯ ಕಾಲ ಮಹಾಫಲ & ಅಷ್ಟಮಿ. ಮಹಾಗೌರಿ & ರಾಹುದೋಷ ನಿವಾರಣೆ. ನವಮಿ & ಸಿದ್ಧಿದಾತ್ರಿ & ಕೇತು ದೋಷ ನಿವಾರಣೆ. ಮಧ್ಯದಲ್ಲಿ ಚಾಮುಂಡಿ. ರಾಹು/ಕೇತು ಹಾಗೂ ಕರ್ಮದೋಷದ ನಿವಾರಣೆ, ಕ್ಯಾನ್ಸರ್ & ರಕ್ತದೋಷಕ್ಕೆ ಉತ್ತಮ ಪರಿಹಾರ ಪೂಜೆ. ಸರ್ವದೋಷ ನಾಶ. (ಭಾನುವಾರ ಅಷ್ಟಮಿ & ನವಮಿ ಸಂಧಿಕಾಲ ಬೆಳಿಗ್ಗೆ 8.04ರಿಂದ 8.44) ಮೂರು ದೇವಿಗಳ ಸಂಗಮ, ಉತ್ತಮ ಫಲ.
ಗ್ರಹ: ರಾಹು, ಬಣ್ಣ: ಬೂದು, ಧಾನ್ಯ: ಕರಿಉದ್ದು, ನೈವೇದ್ಯ: ಬಾಳೆಹಣ್ಣು, ಸಂಗೀತ : ಹಂಸಧ್ವನಿ/ಶಂಕರಾಭರಣಂ, ಮಂತ್ರ: ಓಂ ಹ್ರೀಂ ಮಹಾಗೌರ್ಯೈ ನಮಃ.