ಮನೆ ಮಂದಿಯ ತರಬೇತಿ

Home training
Home training
Published on

ಮಾನವನು ತನ್ನ ಕುಟುಂಬ ಹಾಗೂ ಬಂಧುಗಳಿಗೆ ಧರ್ಮವನ್ನು ಕಲಿಸಲು ಮತ್ತು ಅವರನ್ನು ಧರ್ಮನಿಷ್ಠರಾಗಿ ಮಾಡಲು ತನಗೆ ಸಾಧ್ಯವಿದ್ದಷ್ಟು ಪ್ರಯತ್ನ ಮಾಡಿದ್ದರೆ ಅವನು ಅಲ್ಲಾಹನ ನ್ಯಾಯಾಲಯದಲ್ಲಿ ವಿಜಯಿಯಾಗಬಹುದು. ಆದರೆ ಅವನು ಈ ವಿಷಯದಲ್ಲಿ ಅಸಡ್ಡೆ ತೋರಿದರೆ ಮತ್ತು ಅವರ ಸುಧಾರಣೆಯ ಬಗ್ಗೆ ಚಿಂತಿಸದೆ ಇದ್ದರೆ ಭಾರಿ ಸಂಕಷ್ಟಕ್ಕೆ ಸಿಲುಕಿಕೊಳ್ಳುವವನು. ವೈಯಕ್ತಿಕವಾಗಿ ಅವನು ಎಷ್ಟೇ ದೊಡ್ಡ ದೈವಭಕ್ತ ಹಾಗೂ ಧರ್ಮನಿಷ್ಠನಾಗಿದ್ದರೂ ತನ್ನ ಪ್ರಸ್ತುತ ಕರ್ತವ್ಯವನ್ನು ನಿರ್ಲಕ್ಷಿಸಿದ್ದರಿಂದ ಅವನ ಧರ್ಮನಿಷ್ಠೆಯು ಅಪೂರ್ಣವೆನಿಸುವುದು.

‘ಸೂರಃ ಅಲ್ ಮಾಇದ’ದ ಹತ್ತನೇ ಸೂಕ್ತ ಮತ್ತು ಪ್ರವಾದಿ ಮುಹಮ್ಮದ್‌ರ ಅನೇಕ ವಚನಗಳು ಇದನ್ನು ಸಮರ್ಥಿಸುತ್ತವೆ. ಸುನನ್ ಅಬೂ ದಾವೂದ್‌ನಲ್ಲಿ ದಾಖಲಾಗಿರುವ ಅಬ್ದುಲ್ಲಾ ಬಿನ್ ಅಬ್ಬಾಸ್‌ನಿಂದ (ರ) ವರದಿ ಮಾಡಲಾದ ಒಂದು ಪ್ರವಾದಿ ವಚನ ಹೀಗಿದೆ: ಒಬ್ಬನ ಮನೆಯಲ್ಲಿ ಒಂದು ಹೆಣ್ಣು ಮಗು ಜನಿಸಿದಾಗ ಅವನು ಆ ಮಗುವನ್ನು ಜೀವಂತ ದಫನ್ ಮಾಡದೆ, ತಾತ್ಸಾರದಿಂದ ಕಾಣದೆ, ಅದಕ್ಕಿಂತ ಹೆಚ್ಚಿನ ಪ್ರಾಶಸ್ತ್ಯವನ್ನು ಗಂಡು ಮಕ್ಕಳಿಗೆ ನೀಡದೆ ಅದನ್ನು ಪೋಷಿಸಿದರೆ ಅಲ್ಲಾಹನು ಆತನಿಗೆ ಸ್ವರ್ಗ ಪ್ರವೇಶ ನೀಡುವವನು. ಯಾವುದಾದರೂ ಕಾರಣದಿಂದ ನಿಮ್ಮ ಮಗಳು ಅವಿವಾಹಿತಳಾಗಿಯೋ, ವಿವಾಹದ ಬಳಿಕ ವಿಚ್ಛೇದಿತೆಯೋ ಆಗಿದ್ದರೆ ಮತ್ತು ನಿಮ್ಮ ಹೊರತು ಬೇರಾರೂ ಅವಳಿಗೆ ಇಲ್ಲದಿದ್ದರೆ ನೀವು ಅವಳಿಗಾಗಿ ಮಾಡುವ ಪ್ರತಿ ಖರ್ಚನ್ನು ಅಲ್ಲಾಹನು ಅತ್ಯುತ್ತಮ ದಾನವೆಂದೇ ಪರಿಗಣಿಸುತ್ತಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net