ಎಲ್ಲವೂ ಅನಂತ...

Everything is infinite
Everything is infinite
Published on
ಅದು ನಿಜವೇ?’. ಭೀಷ್ಮಕರಾಜ ಹೌದು ಎಂದ. ಆಗ ಶ್ರೀಕೃಷ್ಣ, ನೀನು ಮಾಡುತ್ತಿರುವುದು ಸರಿಯಲ್ಲ. ರುಕ್ಮಿಣಿ ಸಾಕ್ಷಾತ್ ಲಕ್ಷ್ಮೀಯ ಅವತಾರ.ನಾನು ಸಾಕ್ಷಾತ್ ನಾರಾಯಣನ ಅವತಾರ. ಸಂದೇಹ ಇದ್ದರೆ ನೋಡು ಎಂದು ಭೀಷ್ಮಕ ರಾಜನಿಗೆ ಸಮಗ್ರ ಬ್ರಹ್ಮಾಂಡವನ್ನೇ ತೋರಿಸುತ್ತಾನೆ. ಹರಿವಂಶದಲ್ಲಿ ಈ ವರ್ಣನೆ ಇದೆ.
‘ಸಹಸ್ರಪಾತ್ ಸಹಸ್ರಾಕ್ಷಂ ಸಹಸ್ರಭುಜವಿಗ್ರಹಂ| ಸಹಸ್ರಶಿರಸಂ ದೇವಂ ಸಹಸ್ರಮುಕುಟೋಜ್ವಲಂ|| -ಅನಂತ ತಲೆಗಳು ಅನಂತ ಕೈಗಳು ಅನಂತ ಕಾಲುಗಳು ಅನಂತ ಕಣ್ಣುಗಳು ಅನಂತ ಕಿವಿಗಳು ಸಮಗ್ರ ಜಗತ್ತಿನ ತುಂಬೆಲ್ಲ ವ್ಯಾಪ್ತವಾದ ಅದ್ಭುತವಾದ ಎಲ್ಲ ದೇವತೆ ಗಳು ದಾನವರು ಮನುಷ್ಯರು ಸಮಗ್ರವಾದ ಬ್ರಹ್ಮಾಂಡವನ್ನು ತನ್ನೊಳಗೆ ಹೊತ್ತಂತಹ ಆ ಅದ್ಭುತವಾದ ವಿಶ್ವರೂಪವನ್ನು ತೋರಿಸಿದ್ದಾನೆ. ನಂತರ, ರುಕ್ಮಿಣಿಯನ್ನು ಯಾರು ಎಂದುಕೊಂಡಿದ್ದೀಯಾ? ಅವಳು ಅನಂತರೂಪಗಳಿಂದ ಕೂಡಿದವಳು, ಅನಂತ ಸೌಂದರ್ಯದಿಂದ ಯುಕ್ತಳಾದ ವಳು. ಸಾಕ್ಷಾತ್ ಲಕ್ಷ್ಮೀದೇವಿಯ ಅವತಾರ. ಅವಳನ್ನು ನಿನ್ನ ಮಗಳು ಎಂದು ಮಾತ್ರ ತಿಳಿಯಬೇಡ. ನಮ್ಮಿಬ್ಬರನ್ನು ಸರಿಯಾಗಿ ನೋಡು. ಇಷ್ಟಿದ್ದರೂ ನೀನು ಅವಳನ್ನು ಇನ್ನು ಯಾರಾದರೂ ಮದುವೆ ಆಗುತ್ತಿದ್ದರೆ ಆಗಲಿ ಎಂದು ಸ್ವಯಂವರವನ್ನು ಏರ್ಪಡಿಸಿದರೆ ನೀನು ಮಹಾಪಾಪಿಷ್ಠನಾಗುತ್ತೀಯಾ? ಅವಳು ನನ್ನನ್ನೇ ಮದುವೆ ಮಾಡಿಕೊಳ್ಳುವುದು ನಿಶ್ಚಯ.
ವಿವಾಹಕಾಲದಲ್ಲಿ ಅವಳನ್ನು ಕರೆದುಕೊಂಡು ಹೋಗುವುದು ನಿಶ್ಚಿತ. ಇದರಲ್ಲಿ ಯಾವ ಸಂದೇಹವೂ ಇಲ್ಲ. ಆದರೆ ನಿನ್ನ ಮನಸ್ಸಿನಲ್ಲಿ ಯಾರಿ ಗಾದರೂ ಇವಳನ್ನು ಕೊಡಬೇಕು ಎಂದು ಬಂದು ಹೋದರೂ ಮಹಾ ಅನರ್ಥವಾಗುತ್ತದೆ. ಭೀಷ್ಮಕ ನೀನುಸಜ್ಜನ. ಸಜ್ಜನನಾದ ನಿನಗೆ ಒಳ್ಳೆಯ ದಾಗಲೀ ಎನ್ನುವುದಕ್ಕೆ ಇಷ್ಟೆಲ್ಲ ಮಾತುಗಳನ್ನು ಹೇಳಿದ್ದೇನೆ ಎನ್ನುತ್ತಾನೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net