ಮದುವೆಯ ಕನಸು ಪದೇ ಪದೇ ಬೀಳುತ್ತಿದೆಯೇ? ಇದರ ಹಿಂದೆ ಅಡಗಿದೆ ವಿಜ್ಞಾನದ ರಹಸ್ಯ! Dream Science

Dream Science ಸಾಂದರ್ಭಿಕ ಚಿತ್ರ
Dream Science ಸಾಂದರ್ಭಿಕ ಚಿತ್ರ
Published on
Dream Science: ಸ್ವಪ್ನ ಶಾಸ್ತ್ರದ ಪ್ರಕಾರ, ರಾತ್ರಿಯ ನಿದ್ರೆಯಲ್ಲಿ ನಾವು ಕಾಣುವ ಪ್ರತಿಯೊಂದು ಕನಸಿಗೂ ಅದರದ್ದೇ ಆದ ಆಳವಾದ ಅರ್ಥ ಮತ್ತು ಭವಿಷ್ಯದ ಮುನ್ಸೂಚನೆ ಇರುತ್ತದೆ. ಕನಸುಗಳು ಕೇವಲ ಮನಸ್ಸಿನ ಕಲ್ಪನೆಗಳಲ್ಲ, ಅವು ನಮ್ಮ ಉಪಪ್ರಜ್ಞೆ ಮನಸ್ಸು ನೀಡುವ ವಿಶೇಷ ಸಂದೇಶಗಳು ಎಂದು ಹೇಳಲಾಗುತ್ತದೆ. ಇಂತಹ ಕನಸುಗಳಲ್ಲಿ 'ಮದುವೆ'ಯನ್ನು ನೋಡುವುದು ಅತ್ಯಂತ ಸಾಮಾನ್ಯವಾದರೂ, ಆಧ್ಯಾತ್ಮಿಕವಾಗಿ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದು ವಿಭಿನ್ನ ಅರ್ಥಗಳನ್ನು ಹೊಂದಿರುತ್ತದೆ. ಕನಸಿನಲ್ಲಿ ಮದುವೆಯನ್ನು ನೋಡುವುದರಿಂದ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳು ಆಗಬಹುದು ಎಂಬುದನ್ನು ನಾವಿಂದು ತಿಳಿಸಲಿದ್ದೇವೆ. 
ಹುಡುಗಿಯ ಕನಸಿನಲ್ಲಿ ಆಕೆಯ ಪ್ರೇಮಿ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗುತ್ತಿರುವಂತೆ ಕನಸು ಕಾಣುವುದನ್ನು ಶುಭ ಶಕುನವೆಂದು ಪರಿಗಣಿಸಲಾಗುತ್ತದೆ. ಒಂದು ವೇಳೆ ಹುಡುಗಿಗೆ ಮದುವೆಯ ವಯಸ್ಸಾಗಿದ್ದರೆ, ವಿವಾಹದ ಮಾತುಕತೆಗಳು ಯಶಸ್ವಿಯಾಗಿ ಮುಗಿದು ಶೀಘ್ರದಲ್ಲೇ ಅವಳು ವೈವಾಹಿಕ ಜೀವನಕ್ಕೆ ಕಾಲಿಡುತ್ತಾಳೆ ಎಂಬುದನ್ನು ಇದು ಸೂಚಿಸುತ್ತದೆ.
ಸ್ವಪ್ನ ಶಾಸ್ತ್ರದ ಪ್ರಕಾರ, ಮಹಿಳೆಯೊಬ್ಬಳು ಕನಸಿನಲ್ಲಿ ತಾನು ಮದುಮಗಳಾಗಿ ಸಿದ್ದಗೊಂಡಿರುವುದನ್ನು ಅಥವಾ ಸುಂದರವಾದ ಬಟ್ಟೆಗಳು ಮತ್ತು ಒಡವೆಯನ್ನು ಧರಿಸಿರುವುದನ್ನು ಕಂಡುಬಂದರೆ ಅವಳು ದೀರ್ಘಕಾಲದಿಂದ ಮನಸ್ಸಿನಲ್ಲಿ ಅಂದುಕೊಂಡಿದ್ದ ದೊಡ್ಡ ಆಸೆಯೊಂದು ಶೀಘ್ರದಲ್ಲೇ ಈಡೇರಲಿದೆ ಎಂದರ್ಥ. ಅದು ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ್ದರಬಹುದು ಅಥವಾ ವೃತ್ತಿಗೆ ಸಂಬಂಧಿಸಿದ್ದಾಗಿರಬಹುದು. 
ಏತನ್ಮಧ್ಯೆ, ವಧು ಅಳುತ್ತಿರುವಂತೆ ಅಥವಾ ಕೆಲಸದಿಂದ ತೆಗೆದುಹಾಕಲ್ಪಟ್ಟಂತೆ ನೀವೇನಾದರೂ ಕನಸು ಕಂಡರೆ ಅದರಿಂದ ಭಯ ಪಡುವುದೇನು ಬೇಡ ಅದನ್ನು ಶುಭವೆಂದು ಹೇಳಲಾಗುತ್ತದೆ. ಇದರರ್ಥ ನೀವು ನಿರಂತರ ಉದ್ಯೋಗ ನಷ್ಟ ಅಥವಾ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ನಿರ್ಧಾರಗಳನ್ನು ಮರುಪರಿಶೀಲಿಸಬೇಕು.
ವಧು-ವರರು ಪರಸ್ಪರ ಓಡಾಡುತ್ತಿರುವಂತಹ ದೃಶ್ಯ ಕನಸಿನಲ್ಲಿ ಕಂಡರೆ ಅದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಇದು ನೀವು ಕೆಲಸದಲ್ಲಿ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ ಅಥವಾ ಸ್ಪರ್ಧೆಯಲ್ಲಿ ಸೋಲನ್ನು ಎದುರಿಸಬೇಕಾಗುತ್ತದೆ ಎಂದು ಸೂಚಿಸುತ್ತದೆ.
ಕನಸಿನಲ್ಲಿ ವಿವಾಹದ ಸಂಕೇತಗಳು ಅತಿಯಾಗಿ ಅಥವಾ ವಿಚಿತ್ರವಾದ ಸನ್ನಿವೇಶದಲ್ಲಿ ಕಾಣಿಸಿಕೊಂಡರೆ ಉದಾಹರಣೆಗೆ ಮಂಗಳಸೂತ್ರ ಒಡೆಯುವುದು ಅಥವಾ ಸಿಂಧೂರ ಚೆಲ್ಲುವುದು, ಅದನ್ನು ಎಚ್ಚರಿಕೆಯ ಮುನ್ಸೂಚನೆ ಎಂದೇ ಪರಿಗಣಿಸಲಾಗುತ್ತದೆ. ಯಾರಾದರೂ ನಿಮ್ಮ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ ಅಥವಾ ನಿಮ್ಮ ಕೆಲಸಕ್ಕೆ ಅಡ್ಡಿಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಇದು ತಿಳಿಸುತ್ತದೆ. 
ಕನಸಿನಲ್ಲಿ ಮದುವೆ ಮೆರವಣಿಗೆಯನ್ನು ನೋಡುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯ ಸೂಚನೆಯಲ್ಲ. ಇದು ನಿಮ್ಮ ಕುಟುಂಬ ಸದಸ್ಯರಲ್ಲಿ ಒಬ್ಬರಿಗೆ ಅನಾರೋಗ್ಯ ಅಥವಾ ಸಮಸ್ಯೆಗಳಿಂದ ಬಳಲುತ್ತಾರೆ ಎಂದು ಹೇಳಲಾಗುತ್ತದೆ.
ವರನ ಕನಸು ಕಾಣುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ನೀವು ಈಗಾಗಲೇ ವಿವಾಹಿತರಾಗಿದ್ದು ಮರುಮದುವೆಯಾಗುವ ಕನಸು ಕಂಡರೆ, ಅದು ನಿಮ್ಮ ವೈವಾಹಿಕ ಜೀವನದಲ್ಲಿ ಉದ್ವಿಗ್ನತೆ ಮತ್ತು ಸಂಘರ್ಷದ ಸಂಕೇತವಾಗಿರಬಹುದು.

ಇತರ ಕನಸುಗಳು

ಕೆಲವು ಕನಸುಗಳು ಸಹ ಶುಭಕರವಾಗಿರುತ್ತವೆ. ಉದಾಹರಣೆಗೆ, ನೀಲಿ ಗಂಟಲಿನ ಗುಬ್ಬಚ್ಚಿ (ಕಾಡು ಹಕ್ಕಿ/ನೀಲಕಂಠ) ಅಥವಾ ಕೊಕ್ಕರೆಯನ್ನು ಕನಸಿನಲ್ಲಿ ನೋಡುವುದು ಅಪರೂಪ ಹಾಗೂ ಅತ್ಯಂತ ಪವಿತ್ರ ಶಕುನ ಎಂದು ಪರಿಗಣಿಸಲಾಗಿದೆ. ಅಲ್ಲದೆ, ನಿಮ್ಮ ಸಂಗಾತಿಯೊಂದಿಗೆ ಪ್ರೀತಿ ಅಥವಾ ಅನ್ಯೋನ್ಯತೆಯ ಕ್ಷಣಗಳನ್ನು ಕನಸು ಕಾಣುವುದು ಶುಭವೆಂದು ಪರಿಗಣಿಸಲಾಗುತ್ತದೆ. ಇದು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಮತ್ತು ಸಂತೋಷವನ್ನು ಸೂಚಿಸುತ್ತದೆ. ಆದ್ದರಿಂದ, ಮುಂದಿನ ಬಾರಿ ನೀವು ಕನಸು ಕಂಡಾಗ, ಅದನ್ನು ನಿರ್ಲಕ್ಷಿಸಬೇಡಿ. ಅದು ನಿಮ್ಮ ಭವಿಷ್ಯದ ಬಗ್ಗೆ ನಿಮಗೆ ಪ್ರಮುಖ ಸುಳಿವು ನೀಡುತ್ತಿರಬಹುದು (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net