ಚೆಂಡು, ಗುಲಾಬಿ, ಸೇವಂತಿ ಸೇರಿದಂತೆ ಒಣಗಲು ಹಾಕಿದ ಹೂಗಳನ್ನು ಈಗ ಗ್ರೈಂಡ್ ಮಾಡಿಕೊಂಡು ಪಕ್ಕಕ್ಕೆ ಇಡಿ, ಮತ್ತೊಂದು ಮಿಕ್ಸಿಗೆ ತೆಂಗಿನ ನಾರು, ದಾಲ್ಚಿನ್ನಿ, ಕರ್ಪೂರ, ಸುವಾಸನೆಗೆ ಶ್ರೀಗಂಧದ ಪುಡಿ, ರೋಸ್ ವಾಟರ್, ಸಾಂಬ್ರಾಣಿ ಪುಡಿ, ಹಸುವಿನ ಒಣಗಿದ ಸಗಣಿಯನ್ನು ಗ್ರೈಂಡ್ ಮಾಡಿ ಅದನ್ನು ಜರಡಿಯಲ್ಲಿ ಸೋಸಿ ಇಡಿ. ಈಗ ಮೊದಲು ತಯಾರಿಸಿಟ್ಟ ಹೂವಿನ ಪುಟಿಯನ್ನು ಬಟ್ಟಲಿಗೆ ಹಾಕಿ ತುಪ್ಪವನ್ನು ಸೇರಿಸಿ ಉಂಡೆ ಮಾಡಿ ಕೋನ್ ಆಕಾರ ಅಥವಾ ನಿಮಗೆ ಬೇಕಾದ ರೀತಿಯಲ್ಲಿ ಶೇಪ್ ಕೊಡಿ.