ಗುರುಗಳು ಅವರಿಗೆ, ‘ನೀವು ಬಂದಿರುವುದು ನನಗೆ ತುಂಬಾ ಸಂತೋಷವಾಗಿದೆ. ನನ್ನ ಸಲುವಾಗಿ ಈ ಮಗುವನ್ನು ನೀವು ಆಶೀರ್ವದಿಸುತ್ತೀರಾ?’ ಎಂದರು. ಆದರೆ ಹುಡುಗನು,‘ನನಗೆ ನಿಮ್ಮ ಆಶೀರ್ವಾದ ಬೇಕಿಲ್ಲ. ನನಗೆ ಆಹಾರ ಬೇಕು. ನನಗೆ ಹಸಿವಾಗಿದೆ’ ಎಂದನು. ಗುರುಗಳು ಹೇಳಿದರು, ‘ಈ ದುರ್ಬಲ ಕ್ಷಣದಲ್ಲಿ ನೀನು ನಿಯಂತ್ರಣ ಕಳೆದುಕೊಂಡರೆ, ನೀನು ಜೀವನದ ಯುದ್ಧದಲ್ಲಿ ಸೋಲುವೆ. ದಯವಿಟ್ಟು ಸ್ವಾಮಿಯವರಿಗೆ ನಿನ್ನ ಆಹಾರವನ್ನು ಅರ್ಪಿಸು. ಮೊದಲು ಅವರಿಗೆ ನೀರು ಕೊಡು ಮತ್ತು ನಂತರ ಅವರ ಪಾದಗಳನ್ನು ತೊಳೆ’ ಎಂದಾಗ ಹುಡುಗ ಹಾಗೆಯೇ ಮಾಡಿದ. ಆದರೆ ಅವನಿಗೆ ಅದು ಇಷ್ಟವಾಗಲಿಲ್ಲ, ಅಥವಾ ಅದರ ಅರ್ಥವೂ ತಿಳಿಯಲಿಲ್ಲ.