ಮನೆಯಲ್ಲಿ ಎಲ್ಲೆಂದರಲ್ಲಿ ಕನ್ನಡಿ ಇಡ್ತೀರಾ? ಹಾಗಾದರೆ ನೀವು ಈ ವಾಸ್ತು ನಿಯಮಗಳನ್ನು ತಿಳಿದುಕೊಳ್ಳಲೇಬೇಕು... Mirror Vastu

ಇತ್ತೀಚಿನ ದಿನಗಳಲ್ಲಿ ಮೇಕ್ ಅಪ್ ಮಾಡಿಕೊಂಡು ಕನ್ನಡಿಯನ್ನು ಮನಬಂದಂತೆ ಎಲ್ಲೆಂದರಲ್ಲಿ ಇಡುವುದು ಕಂಡು ಬರುತ್ತಿದೆ. ಇದರಿಂದ ವಾಸ್ತು ದೋಷ ಉಂಟಾಗಬಹುದು ಎಂದು ಹೇಳಲಾಗುತ್ತದೆ.
Mirror Vastu
ಸಾಂದರ್ಭಿಕ ಚಿತ್ರ
Published on

Mirror Vastu: ಮನೆಯ ಅಂದವನ್ನು ಹೆಚ್ಚಿಸುವ ಕನ್ನಡಿಗಳು ಕೇವಲ ಮುಖ ನೋಡಿಕೊಳ್ಳಲು ಮಾತ್ರವಲ್ಲ, ವಾಸ್ತು ಶಾಸ್ತ್ರದ ಪ್ರಕಾರ ಮನೆಯ ವಾತಾವರಣದ ಮೇಲೂ ಪ್ರಭಾವ ಬೀರುತ್ತವೆ ಎನ್ನುತ್ತಾರೆ. ಮನೆಯ ಸಕಾರಾತ್ಮಕತೆ ಮತ್ತು ಸುಖ-ಸಮೃದ್ಧಿಗೆ ಸಂಬಂಧಿಸಿದೆ ಎಂಬ ನಂಬಿಕೆಯೂ ಇದೆ. ಆದರೆ, ಇತ್ತೀಚಿನ ದಿನಗಳಲ್ಲಿ ಮೇಕ್ ಅಪ್ ಮಾಡಿಕೊಂಡು ಕನ್ನಡಿಯನ್ನು ಮನಬಂದಂತೆ ಎಲ್ಲೆಂದರಲ್ಲಿ ಇಡುವುದು ಕಂಡು ಬರುತ್ತಿದೆ. ಇದರಿಂದ ವಾಸ್ತು ದೋಷ ಉಂಟಾಗಬಹುದು ಎಂದು ಹೇಳಲಾಗುತ್ತದೆ. ವಿಶೇಷವಾಗಿ ಮನೆಯ ಮುಖ್ಯ ದ್ವಾರ, ಮಲಗುವ ಕೋಣೆ, ಅಡುಗೆಮನೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಕನ್ನಡಿಯನ್ನು ಇಡುವಾಗ ಕೆಲವು ನಿಯಮಗಳನ್ನು ಪಾಲಿಸಬೇಕು. ಹಾಗಾದರೆ ಮನೆಯಲ್ಲಿ ಕನ್ನಡಿ ಯಾವ ದಿಕ್ಕಿನಲ್ಲಿರಬೇಕು? ಕನ್ನಡಿ ಇಡುವಾಗ ಯಾವ ಮುನ್ನೆಚ್ಚರಿಕೆ ವಹಿಸಬೇಕು? ಒಡೆದ ಕನ್ನಡಿಯನ್ನು ಮನೆಯಲ್ಲಿ ಇಡಬಹುದೇ? ಕನ್ನಡಿಗೆ ಸಂಬಂಧಿಸಿದ ವಾಸ್ತು ನಿಯಮಗಳ ಬಗ್ಗೆ ತಿಳಿದುಕೊಳ್ಳೋಣ.

ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಕನ್ನಡಿ ಇಡಿ

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಕನ್ನಡಿಯನ್ನು ಇಡುವುದು ಶುಭಕರ ಎಂದು ನಂಬಲಾಗುತ್ತದೆ. ಈ ದಿಕ್ಕುಗಳು ಸಕಾರಾತ್ಮಕ ಶಕ್ತಿ, ಪ್ರಗತಿ ಮತ್ತು ಸಮೃದ್ಧಿಗೆ ಸಂಬಂಧಿಸಿವೆ ಎಂಬ ನಂಬಿಕೆಯಿದೆ. ಆದ್ದರಿಂದ ಮನೆಯ ಗೋಡೆಗೆ ಕನ್ನಡಿ ಹಾಕುವಾಗ ಈ ದಿಕ್ಕುಗಳನ್ನೇ ಆಯ್ಕೆ ಮಾಡುವುದು ಸೂಕ್ತ. ಮನೆಯ ಒಳಾಂಗಣಕ್ಕೆ ಹೆಚ್ಚು ಬೆಳಕು ಬರುವಂತೆ ಕನ್ನಡಿ ಇರಿಸಿದರೆ ಕೋಣೆ ವಿಶಾಲವಾಗಿ ಮತ್ತು ಪ್ರಕಾಶಮಾನವಾಗಿ ಕಾಣಲು ಸಹಾಯವಾಗುತ್ತದೆ. ಆದರೆ ಕನ್ನಡಿ ಅಳವಡಿಸುವಾಗ ಮನೆಯ ವಿನ್ಯಾಸ ಹಾಗೂ ಅನುಕೂಲತೆಗೂ ಆದ್ಯತೆ ನೀಡಬೇಕು.

Also Read
ನಿದ್ದೆಯಲ್ಲಿ ಬರುವ ಕನಸುಗಳು ಭಯ ಹುಟ್ಟಿಸುತ್ತಾ? ಹಾಗಿದ್ರೆ, ಯಾವ ಕನಸು ಅಪಾಯದ ಮುನ್ಸೂಚನೆ? ಇಲ್ಲಿದೆ ಮಾಹಿತಿ | Scary Dreams
Mirror Vastu

ಮಲಗುವ ಕೋಣೆಯಲ್ಲಿ ಕನ್ನಡಿ ಇಡುವಾಗ ಎಚ್ಚರ

ಮಲಗುವ ಕೋಣೆಯಲ್ಲಿ ಕನ್ನಡಿ ಇಡುವಾಗ ಕೆಲವು ವಾಸ್ತು ನಿಯಮಗಳನ್ನು ಪಾಲಿಸುವುದು ಅಗತ್ಯ . ವಿಶೇಷವಾಗಿ ಹಾಸಿಗೆಯ ಎದುರು ನೇರವಾಗಿ ಕನ್ನಡಿ ಇಡುವುದನ್ನು ತಪ್ಪಿಸುವುದು ಒಳ್ಳೆಯದು. ಮಲಗಿರುವ ವ್ಯಕ್ತಿಯ ಪ್ರತಿಬಿಂಬ ಕನ್ನಡಿಯಲ್ಲಿ ಕಾಣಿಸುವುದು ನೆಮ್ಮದಿಯ ನಿದ್ರೆಗೆ ಅಡ್ಡಿಯಾಗಬಹುದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಆದ್ದರಿಂದ ಕನ್ನಡಿಯನ್ನು ಹಾಸಿಗೆಯ ಪಕ್ಕದ ಗೋಡೆಯ ಮೇಲೆ ಅಳವಡಿಸಬಹುದು ಅಥವಾ ಅಗತ್ಯವಿದ್ದಾಗ ಮಾತ್ರ ಬಳಸುವಂತೆ ವ್ಯವಸ್ಥೆ ಮಾಡಬಹುದು.

ಮನೆಯ ಮುಖ್ಯ ಬಾಗಿಲಿನ ಎದುರು ಕನ್ನಡಿ ಇಡಬೇಡಿ

ಮನೆಯ ಮುಖ್ಯ ಬಾಗಿಲಿಗೆ ನೇರವಾಗಿ ಎದುರಾಗುವಂತೆ ಕನ್ನಡಿಯನ್ನು ಇಡುವುದನ್ನು ಪ್ರಮುಖವಾಗಿದೆ. ಮುಖ್ಯ ಬಾಗಿಲಿನ ಮೂಲಕ ಮನೆಯೊಳಗೆ ಪ್ರವೇಶಿಸುವ ಸಕಾರಾತ್ಮಕ ಶಕ್ತಿಯು ಕನ್ನಡಿಯಿಂದ ಪ್ರತಿಬಿಂಬಿಸಿ ಹೊರಹೋಗುತ್ತದೆ ಎಂಬ ನಂಬಿಕೆ ಇದಕ್ಕೆ ಕಾರಣವಾಗಿದೆ. ಹೀಗಾಗಿ ಮುಖ್ಯ ಬಾಗಿಲಿನ ಎದುರಿನ ಗೋಡೆಯ ಬದಲಿಗೆ ಪಕ್ಕದ ಗೋಡೆಯ ಮೇಲೆ ಕನ್ನಡಿಯನ್ನು ಅಳವಡಿಸಬಹುದು. ಇದರಿಂದ ಮನೆಯ ಪ್ರವೇಶದ್ವಾರವೂ ಅಚ್ಚುಕಟ್ಟಾಗಿ ಕಾಣುತ್ತದೆ.

ಒಡೆದ ಕನ್ನಡಿಯನ್ನು ಮನೆಯಲ್ಲಿ ಇಡಬೇಡಿ

ಒಡೆದ, ಬಿರುಕು ಬಿಟ್ಟ ಅಥವಾ ಮಸುಕಾದ ಕನ್ನಡಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ವಾಸ್ತು ಶಾಸ್ತ್ರದ ಪ್ರಕಾರ ಅಶುಭವೆಂದು ಹೇಳುತ್ತಾರೆ. ಇಂತಹ ಕನ್ನಡಿಗಳು ಮನೆಯ ವಾತಾವರಣದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ ಎಂಬ ನಂಬಿಕೆಯೂ ಇದೆ. ಆದ್ದರಿಂದ ಕನ್ನಡಿ ಹಾನಿಗೊಳಗಾಗಿದ್ದರೆ ಅದನ್ನು ಬದಲಾಯಿಸುವುದು ಸೂಕ್ತ.

Also Read
ಶಂಖಪುಷ್ಪ ಹೂವಿನಲ್ಲಿ ಅಡಗಿದೆ ಅಚ್ಚರಿಯ ರಹಸ್ಯ! ಸಕ್ಕರೆ ಕಾಯಿಲೆ, ಕ್ಯಾನ್ಸರ್ ಬಗ್ಗೆ ವಿಜ್ಞಾನ ಹೇಳೋದೇನು? Shankhupushpam
Mirror Vastu

ಅಡುಗೆ ಮನೆಯಲ್ಲಿ ಕನ್ನಡಿ ಇಡುವುದನ್ನು ತಪ್ಪಿಸಿ

ಪ್ರಕಾರ ಅಡುಗೆಮನೆಯಲ್ಲಿ, ವಿಶೇಷವಾಗಿ ಗ್ಯಾಸ್ ಒಲೆ ಅಥವಾ ಅಡುಗೆ ಮಾಡುವ ಸ್ಥಳದ ಎದುರು ಕನ್ನಡಿ ಇಡುವುದನ್ನು ತಪ್ಪಿಸಬೇಕು. ಬೆಂಕಿಯ ಪ್ರತಿಬಿಂಬ ಕನ್ನಡಿಯಲ್ಲಿ ಕಾಣಿಸುವುದು ಸೂಕ್ತವಲ್ಲ ಎಂಬ ನಂಬಿಕೆ ಇದಕ್ಕೆ ಕಾರಣವಾಗಿದೆ. ಅಡುಗೆಮನೆಯು ಮನೆಯ ಪ್ರಮುಖ ಭಾಗವಾಗಿರುವುದರಿಂದ ಅಲ್ಲಿ ವಸ್ತುಗಳನ್ನು ಜೋಡಿಸುವಾಗ ಸ್ವಚ್ಛತೆ ಮತ್ತು ಸುರಕ್ಷತೆಗೆ ಆದ್ಯತೆ ನೀಡಬೇಕು. ಕನ್ನಡಿ ಅಳವಡಿಸುವುದರಿಂದ ಅಡುಗೆ ಮಾಡುವಾಗ ಗಮನ ಬೇರೆಡೆಗೆ ಸೆಳೆಯುವಂತಿರಬಾರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net