ಕೋಪನಾಶಕ್ಕೆ ಬ್ರಹ್ಮಚಾರಿಣಿ ಪೂಜೆ

ಮಾರ್ಕಂಡೇಯ ಪುರಾಣದಲ್ಲಿ "ದ್ವೀತಿಯಂ ಬ್ರಹ್ಮಚಾರಿಣಿ', ಅಂದರೆ ಬ್ರಹ್ಮ-ವೇದ, ತಪಸ್ಸು, ಜ್ಞಾನ, ಚಾರಿಣಿ ಅಂದರೆ ಆಚರಿಸುವವಳು, ತಪಸ್ಸನ್ನು ಆಚರಿಸುವವಳು ಎಂದರ್ಥ. ತಪಸ್ವಿನಿ-ಶಿವನನ್ನು ವರವಾಗಿ ಪಡೆಯಲು ಕೇವಲ ಬಿಲ್ವ ಪತ್ರೆ, ಎಲೆಗಳನ್ನು ತಿಂದು ಕೊನೆಗೆ ಎಲೆ, ನೀರು ಎಲ್ಲವನ್ನೂ ತ್ಯಜಿಸಿ ನಿರಾಹಾರವಾಗಿ ತಪಸ್ಸು, ಇವಳ ತಪಸ್ಸಿಗೆ ಮೆಚ್ಚಿ ಬ್ರಹ್ಮ, ವಿಷ್ಣು, ಶಿವ ಮೂವರೂ ಬಂದು ವರ ಕೊಟ್ಟರು. ಶಿವನೇ ಪತಿಯಾದ
ಕೋಪನಾಶಕ್ಕೆ ಬ್ರಹ್ಮಚಾರಿಣಿ ಪೂಜೆ
WEB
Published on: 

ಗಜೇಂದ್ರ ಬಾಬು

(ಲೇಖಕರು ಜ್ಯೋತಿಷ್ಯರು ಹಾಗೂ ವಾಸ್ತು ತಜ್ಞರು)

ಮಾರ್ಕಂಡೇಯ ಪುರಾಣದಲ್ಲಿ "ದ್ವೀತಿಯಂ ಬ್ರಹ್ಮಚಾರಿಣಿ', ಅಂದರೆ ಬ್ರಹ್ಮ-ವೇದ, ತಪಸ್ಸು, ಜ್ಞಾನ, ಚಾರಿಣಿ ಅಂದರೆ ಆಚರಿಸುವವಳು, ತಪಸ್ಸನ್ನು ಆಚರಿಸುವವಳು ಎಂದರ್ಥ. ತಪಸ್ವಿನಿ-ಶಿವನನ್ನು ವರವಾಗಿ ಪಡೆಯಲು ಕೇವಲ ಬಿಲ್ವ ಪತ್ರೆ, ಎಲೆಗಳನ್ನು ತಿಂದು ಕೊನೆಗೆ ಎಲೆ, ನೀರು ಎಲ್ಲವನ್ನೂ ತ್ಯಜಿಸಿ ನಿರಾಹಾರವಾಗಿ ತಪಸ್ಸು, ಇವಳ ತಪಸ್ಸಿಗೆ ಮೆಚ್ಚಿ ಬ್ರಹ್ಮ, ವಿಷ್ಣು, ಶಿವ ಮೂವರೂ ಬಂದು ವರ ಕೊಟ್ಟರು. ಶಿವನೇ ಪತಿಯಾದ. ಎಲೆಗಳನ್ನು ತ್ಯಜಿಸಿದವಳಾದ್ದರಿಂದ ಈ ದೇವಿಗೆ "ಅಪರ್ಣಾ' ಎಂಬ ಹೆಸರುಂಟು. ಬಲಗೈಯಲ್ಲಿ ಜಪಮಾಲೆ, ಎಡಗೈಯಲ್ಲಿ ಕಮಂಡಲ (ನೀರಿನ ಪಾತ್ರೆ) ಬಿಳಿ ಸೀರೆ, ಅತ್ಯಂತ ಸರಳ, ತಪಸ್ವಿನಿ ವೇಷ, ಯಾವುದೇ ಆಭರಣ ಇಲ್ಲ. ಕೇವಲ ರುದ್ರಾಕ್ಷಿ ಮಾಲೆ, ಅತ್ಯಂತ ಶಾಂತ, ಕರುಣಾಮಯಿ, ಕಣ್ಣು ಮುಚ್ಚಿ ಜಪ ಮಾಡುತ್ತಿರುವಂತೆ, ತಪಸ್ಸಿನ ತೇಜಸ್ಸು ಮುಖದಲ್ಲಿ. ಯಾವುದೇ ವಾಹನ ಇಲ್ಲ. ಚಾರಿಣಿ ಎಂದರೆ ನಡೆಯುವವಳು, ಬ್ರಹ್ಮಚಾರಿಣಿ ಸ್ವರೂಪ. ವೇದಕಾಲದಲ್ಲಿ ಸ್ತ್ರೀಯರು ಕೂಡ ಬ್ರಹ್ಮಚರ್ಯವನ್ನು ಅನುಸರಿಸಿ ವೇದಗಳನ್ನು ಅಧ್ಯಯನ ಮಾಡುತ್ತಿದ್ದರು. ಮತ್ತು ಧಾರ್ಮಿಕ ವಿಧಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು ಎಂಬುದಕ್ಕೆ ನಿದರ್ಶನ. ದೇವಿಯು ಆಚರಿಸಿದ ಕಠೋರ ತಪಸ್ಸಿನಿಂದ ಶಕ್ತಿಹೀನತೆಯಾದಾಗ ಎಲ್ಲ ದೇವತೆಗಳು ತಮ್ಮಲ್ಲಿದ್ದ ಆಯುಧಗಳನ್ನು ನೀಡಿದ ಪರಿಣಾಮವಾಗಿ ದೇವಿಯು ಸರ್ವಶಕ್ತಳಾಗಿ ಜಗತ್ತನ್ನು ಕಾಪಾಡಲು ಮತ್ತು ಬೆಳಗಲು ಮುಂದಾಗುತ್ತಾಳೆ. ಬಿಳಿ ಬಣ್ಣದ ವಸವನ್ನು ಧರಿಸಿ ಜ್ಞಾನದ ಪ್ರತೀಕವಾಗಿದ್ದಾಳೆ. ಮಾನವಕುಲಕ್ಕೆ ನೀತಿ ಪಾಠವನ್ನು ಬೋಧಿಸುವುದಲ್ಲದೆ ಧನ-ಸಂಪತ್ತಿನ ಧಾತ್ರಿಯೂ ಮೋಕ್ಷದಾಯಿನಿಯೂ ಆಗಿರುವಳು. ಜ್ಯೋತಿಷದಲ್ಲಿ ಈ ದೇವಿಗೆ ಕುಜನು/ಮಂಗಳನು ಅಧಿಪತಿಯಾಗಿರುವುದರಿಂದ ಹೆಣ್ಣುಮಕ್ಕಳಿಗೆ ಕುಜದೋಷ ನಿವಾರಣೆ, ಶ್ರೀ ಹಾಗೂ ಉತ್ತಮ ವಿವಾಹ, ಧೈರ್ಯ, ಸಾಹಸ, ಸೋದರರಿಂದ ಸಹಾಯ, ರಕ್ತಶುದ್ಧಿ, ಚಕ್ರ-ಸ್ವಾದಿಷ್ಠಾನ ಹೊಟ್ಟೆಯ ಕೆಳಭಾಗ ಸೃಜನಶೀಲತೆ, ಸಹನೆ, ಎರಡನೇ ಹಂತದ ಕುಂಡಲಿನಿ ಜಾಗೃತಿ. ತಪಸ್ಸು, ಮಂಗಳ, ಧೈರ್ಯ, ವಿವಾಹ ವಿಳಂಬ, ಕೋಪನಾಶಕ್ಕೆ ಬ್ರಹ್ಮಚಾರಿಣಿ ಪೂಜೆ. ದೇವಿಗೆ ಕಬ್ಬಿನ ಹಾಲಿನ ಅಭಿಷೇಕ, ಸಕ್ಕರೆ ನೈವೇದ್ಯದಿಂದ ಆಯುಷ್ಯವೃದ್ಧಿ.

ಮಂತ್ರ: ಓಂ ಶ್ರೀ ಬ್ರಹ್ಮಚಾರಿಣ್ಯೆ ನಮಃ; ಸಂಗೀತ: ಪುರಂದರದಾಸರ ಬ್ರಹ್ಮಚಾರಿಣಿ ನಮೋಸ್ತುತೆ. ದಾನ: ತೊಗರಿ ಬೇಳೆ, ಹೂವು: ದಾಸವಾಳ ಹಾಗೂ ಕಮಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net