ರುಚಿಗಷ್ಟೇ ಅಲ್ಲ ನಕರಾತ್ಮಕ ಶಕ್ತಿ ಮುಕ್ತಿಗೂ ಬಿರಿಯಾನಿ ಎಲೆ ಬೆಸ್ಟ್; ಪ್ರಯೋಜನ ಪಡೆದುಕೊಳ್ಳೋದು ಹೀಗೆ.. Bay Leaf

Bay Leaf benefits and traditions,
Bay Leaf benefits and traditions,
Published on

ಪ್ರಮುಖ ಮುಖ್ಯಾಂಶಗಳು

  • ಅಡುಗೆಮನೆಯಲ್ಲಿ ಒಂದು ಬಿರಿಯಾನಿ ಎಲೆ ಇಡುವುದರಿಂದ ಶಾಂತಿ ಹಾಗೂ ಸಮೃದ್ಧಿ ನೆಲೆಸುತ್ತದೆ
  • ಬಿರಿಯಾನಿ ಎಲೆ ಮತ್ತು ಕಾಳುಮೆಣಸನ್ನು ಸುಡುವುದರಿಂದ ಮನೆಯ ನಕಾರಾತ್ಮಕ ಶಕ್ತಿ ದೂರವಾಗುತ್ತದೆ.
  • ಸಿಂಧೂರದಿಂದ ಎಲೆಯ ಮೇಲೆ ಆಸೆಗಳನ್ನು ಬರೆದು ಪೂಜಿಸುವುದರಿಂದ ಇಷ್ಟಾರ್ಥಗಳು ನೆರವೇರುತ್ತವೆ.

Bay Leaf benefits and traditions:

ಬಿರಿಯಾನಿ ಎಲೆ ಕಂಡ ಕೂಡಲೇ ನಮಗೆ ನೆನಪಾಗೋದು ಪಲಾವ್​ ಹಾಗೂ ಬಿರಿಯಾನಿ ಮಾಡಲು ಬಳಕೆ ಮಾಡುವ ಬಗ್ಗೆ. ಆದರೆ ಇದು ಕೇವಲ ರುಚಿಗೆ ಮಾತ್ರವಲ್ಲ..ಮನೆಯ ಪರಿಮಳ ಹೆಚ್ಚಿಸಲು, ಕೀಟ ನಾಶಕ ದೂರ ಮಾಡಲು ಸಹಾಯ ಮಾಡುತ್ತದೆ. ಇಷ್ಟೇ ಅಲ್ಲದೇ ನಮ್ಮ ಸಂಸ್ಕೃತಿ ಮತ್ತು ಪರಂಪರೆಗಳಲ್ಲಿ ಬಿರಿಯಾನಿ ಎಲೆಯನ್ನು ಶಾಂತಿ, ಸಮೃದ್ಧಿ ಹಾಗೂ ಆರ್ಥಿಕ ಅಭಿವೃದ್ಧಿಯ ಸಂಕೇತ ಎಂದು ನಂಬಲಾಗಿತ್ತು.

ಕೆಲವರು ಕಾರ್ಯಕ್ರಮದಂದು, ವಿಶೇಷ ದಿನಗಳಂದು, ಪೂಜೆ ಸಂದರ್ಭದಲ್ಲಿ ಬಿರಿಯಾನಿ ಎಲೆಯನ್ನು ಬಳಕೆ ಮಾಡುವ ಪದ್ಧತಿ ಇತ್ತು. ಕಾಲಕ್ರಮೇಣ ಈ ಬಗ್ಗೆ ಯಾರಿಗೂ ಅರಿವಿಲ್ಲದ ಕಾರಣ ಬಳಕೆ ಕಡಿಮೆ ಮಾಡಲಾಗಿದೆ. ಮನೆಯಲ್ಲಿ ಶಾಂತಿ-ನೆಮ್ಮದಿ ಹಾಗೂ ಅನ್ಯೋನ್ಯತೆ ಹೆಚ್ಚಾಗಲು ಈ ಪದ್ಧತಿಯನ್ನು ಅಂದಿನ ಕಾಲದವರು ಪಾಲನೆ ಮಾಡುತ್ತಿದ್ದರು,. ಆದರೆ ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ.

ನಕರಾತ್ಮಕ ಶಕ್ತಿ ದೂರಾಗುತ್ತೆ

ಬಿರಿಯಾನಿ ಎಲೆಗೆ ನಿಮ್ಮ ನಿವಾಸದಲ್ಲಿ ಅಂಟಿಕೊಂಡಿರುವ ನಕರಾತ್ಮಕ ಶಕ್ತಿಯನ್ನು ಹೋಗಲಾಡಿಸುವ ಶಕ್ತಿ ಇದೆ. ವಾಸ್ತು ಶಾಸ್ತ್ರದ ಪ್ರಕಾರ, ಐದು ಬಿರಿಯಾನಿ ಎಲೆಗಳು ಮತ್ತು ಐದು ಕಾಳುಮೆಣಸನ್ನು ಒಟ್ಟಿಗೆ ಸೇರಿಸಿ ಸುಟ್ಟು, ಆ ಹೊಗೆಯನ್ನು ಪೂಜಾ ಕೋಣೆಯಲ್ಲಿ ಇಟ್ಟು ಹೊಗೆ ಹರಡಬೇಕು. ಈ ಅಭ್ಯಾಸವು ಉಳಿದುಕೊಂಡಿರುವ ನಕಾರಾತ್ಮಕ ಶಕ್ತಿಯನ್ನು ಸಂಪೂರ್ಣವಾಗಿ ಹೋಗಲಾಡಿಸುತ್ತದೆ ಎನ್ನುವ ನಂಬಿಕೆ ಇದೆ.

ವೈವಾಹಿಕ ಕಲಹಕ್ಕೆ ಮುಕ್ತಿ

ನಿಮಗೆ ಇಲ್ಲಿಯವರೆಗೂ ಈಡೆರದ ಆಸೆಗಳೇನಾದರೂ ಇದ್ದರೆ, ಕುಂಕುಮದೊಂದಿಗೆ ಬಿರಿಯಾನಿ ಎಲೆ ಮೇಲೆ ನಿಮ್ಮ ಆಸೆ ಬರೆದು ನಿಮ್ಮ ದೇವರಕೋಣೆಯಲ್ಲಿ ಇಟ್ಟರೆ, ಅಂತಹ ಆಸೆ ನೆರವೇರುತ್ತದೆ ಎನ್ನುವ ನಂಬಿಕೆ ಇದೆ ಗಂಡ-ಹೆಂಡತಿ ನಡುವಿನ ನಿರಂತರ ಜಗಳಗಳು ನಿಮ್ಮ ಶಾಂತಿಯನ್ನು ಭಂಗಗೊಳಿಸುತ್ತಿದ್ದರೆ, ವಾಸ್ತು ಪ್ರಕಾರ ವಾರವಿಡೀ ಪ್ರತಿದಿನ ಎರಡು ಬಿರಿಯಾನಿ ಎಲೆಗಳನ್ನು ಬಳಸಬೇಕು. ಏಳು ದಿನಗಳವರೆಗೆ ಪ್ರತಿದಿನ ಮನೆಯಲ್ಲಿ ಎಲೆಗಳನ್ನು ಸುಟ್ಟುಹಾಕಿ. ಇದು ವೈವಾಹಿಕ ಜೀವನದಲ್ಲಿ ಸಾಮರಸ್ಯವನ್ನು ತಂದು ಸಂಬಂಧವನ್ನು ಬಲಪಡಿಸುತ್ತದೆ ಎನ್ನಲಾಗಿದೆ.
ನಿಮ್ಮ ಕುಟುಂಬದಲ್ಲಿ ಯಾರಾದರೂ ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ ಅಥವಾ ಮನೆ ಅಹಿತಕರ ವಾತಾವರಣದಿಂದ ಕೂಡಿದ್ದರೆ, ನೀವು ನಿದ್ರೆಗೆ ಜಾರುವ ಮುನ್ನ ಮುನ್ನ ಮಲಗುವ ಕೋಣೆಯಲ್ಲಿ ಬಿರಿಯಾನಿ ಎಲೆಯನ್ನು ಸುಡಿ. ಇದು ನಿಮ್ಮ ಮನೆಗೆ ಅಂಟಿರುವ ಕೆಟ್ಟ ದೃಷ್ಟಿಯನ್ನು ದೂರ ಮಾಡಿ ಸಮಸ್ಯೆಗಳಿಂದ ಮನೆಯನ್ನು ರಕ್ಷಿಸುತ್ತದೆ, (ಏಜೆನ್ಸೀಸ್).

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net