ಮನೆಯಲ್ಲಿ ಆರ್ಥಿಕ ಸಮಸ್ಯೆ ಕಾಡುತ್ತಿದೆಯೇ?; ಇಂದಿನಿಂದ ಈ 4 ಸ್ಥಳದಲ್ಲಿ ಆಹಾರ ಸೇವಿಸುವುದನ್ನು ನಿಲ್ಲಿಸಿ..Vastu Tips

Avoid eating in these places home Vastu
Avoid eating in these places home Vastu
Published on

ಪ್ರಮುಖ ಮುಖ್ಯಾಂಶಗಳು

  • ಈ ನಾಲ್ಕು ಸ್ಥಳದಲ್ಲಿ ಎಂದಿಗೂ ಆಹಾರ ಸೇವನೆ ಮಾಡಬೇಡಿ
  • ಹಾಸಿಗೆ ಮೇಲೆ, ಕೊಳಕಾದ ಸ್ಥಳ ಗ್ಯಾಸ್​ ಬಳಿ, ಮನೆಯ ಹೊಸ್ತಿಲ ಮೇಲೆ ತಿನ್ನಬೇಡಿ
  • ಮಾನಸಿಕ ನೆಮ್ಮದಿ, ಆರ್ಥಿಕ ಸ್ಥಿತಿ ಸುಧಾರಿಸಲು ಸರಿಯಾದ ಸ್ಥಳದಲ್ಲಿ ಆಹಾರ ಸೇವಿಸೋದು ಒಳ್ಳೆಯದು
Avoid eating in these places home Vastu: ಭಾರತೀಯ ಹಿಂದೂ ಸಂಪ್ರದಾಯದ ಪ್ರಕಾರ ಎಲ್ಲೇ ಹೋದರೂ ಅನ್ನಕ್ಕೆ ಬೆಲೆ ಕೊಟ್ಟು ಅನ್ನಪೂರ್ಣೆ ಸದಾ ಪೂರ್ಣೆ ಎಂದು ಶ್ಲೋಕ ಜಪಿಸುತ್ತಾ ಆಹಾರ ಸ್ವೀಕರಿಸುತ್ತೇವೆ. ಇಲ್ಲಿ ಆಹಾರವನ್ನು ದೇವರಂತೆ ಪೂಜೆ ಮಾಡಲಾಗುತ್ತದೆ. ಆದರೆ, ಕೆಲವೊಮ್ಮೆ ನಮಗೆ ತಿಳಿಯದೇ ತಪ್ಪು ಮಾಡಿಬಿಡುತ್ತೇವೆ.ವಾಸ್ತು ಪ್ರಕಾರ ಆಹಾರ ಸೇವನೆ ಮಾಡುವ ಸ್ಥಳಗಳು ನಮ್ಮ ಆರ್ಥಿಕ ಸ್ಥಿತಿ ಹಾಗೂ ಮಾನಸಿಕ ಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳುತ್ತದೆ.
ವಾಸ್ತುಶಾಸ್ತ್ರದ ಪ್ರಕಾರ ಎಲ್ಲಿ ಆಹಾರ ಸೇವನೆ ಮಾಡಿದರೆ ಉತ್ತಮ, ಎಲ್ಲಿ ಆಹಾರ ಸೇವನೆ ಮಾಡಬಾರದು ಎನ್ನುವದಕ್ಕೆ ಕೆಲವೊಂದು ಮಾಹಿತಿ ಈ ಲೇಖದಲ್ಲಿ ಇದೆ.

ಎಲ್ಲೆಲ್ಲಿ ಕುಳಿತು ಊಟ ಮಾಡಬಾರದು?

ಹಾಸಿಗೆ ಮೇಲೆ ಊಟಮಾಡಬೇಡಿ!

ಹಾಸಿಗೆ ಮೃದುವಾಗಿರುತ್ತದೆ ಕೂರಲು ಉತ್ತಮ ಹಾಗೆಯೇ ಗೋಡೆಗೆ ಒರಗಿ ತಿನ್ನುವುದು ಚಂದ ಎಂದು ಹಲವರ ಹಾಸಿಗೆ ಮೇಲೆ ಕುಳಿತು ಊಟ, ತಿಂಡಿ, ನಿದ್ದೆ, ಸಂಜೆ ಕಾಫಿ ಸ್ನ್ಯಾಕ್ಸ್ ಸೇವನೆ ಮಾಡಿಬಿಡುತ್ತೇವೆ. ಆದರೆ ಇದು ವಾಸ್ತುಶಾಸ್ತ್ರದ ಪ್ರಕಾರ ಸರಿಯಾದ ಕ್ರಮವಲ್ಲ. ಇದು ಆರೋಗ್ಯ ಹಾಗೂ ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ. ಇಷ್ಟೇ ಅಲ್ಲದೆ ಆರ್ಥಿಕ ಸಮಸ್ಯೆಗೂ ಎಡೆಮಾಡಿಕೊಡುತ್ತದೆ ಎನ್ನಲಾಗಿದೆ.

ಕೊಳಕಾದ ಸ್ಥಳ ಅವಾಯ್ಡ್​ ಮಾಡಿ

ಹಾಲ್​ನಲ್ಲಿ ಕೊಳಕಾಗಿದ್ದರೆ, ಅಥವಾ ಡೈನಿಂಗ್​ ಟೇಬಲ್​ ಬಳಿ ಕೊಳಕಾಗಿದ್ದರೆ ಅಲ್ಲಿ ಊಟವೇ ಮಾಡಬೇಡಿ. ಇದು ನಿಮ್ಮ ಮನಸ್ಸು ಹಾಗೂ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮೇಜಿನ ಮೇಲೆ ಸ್ವಚ್ಛವಾಗಿದ್ದರಷ್ಟೇ ಆಹಾರ ಸೇವನೆ ಮಾಡಿ.


ಗ್ಯಾಸ್ ಬಳಿ ತಿನ್ಬೇಡಿ

ವಾಸ್ತು ಶಾಸ್ತ್ರದ ಪ್ರಕಾರ ಒಲೆ ಅಥವಾ ಗ್ಯಾಸ್​ ಮುಂದೆ ಆಹಾರ ಸೇವಿಸಿದರೆ, ಇದು ನಿಮ್ಮ ಜೀವನ ಹಾಗೂ ನಿಮ್ಮ ಕುಟುಂಬಸ್ಥರಲ್ಲಿ ಸಂಘರ್ಷವನ್ನುಂಟು ಮಾಡುತ್ತದೆ. ಹೀಗಾಗಿ ಡೈನಿಂಗ್​ ಹಾಲ್​, ಅಥವಾ ಇರುವ ಜಾಗದಲ್ಲೇ ಆಹಾರ ಸೇವನೆಗೆ ಒಂದು ಪ್ರದೇಶವನ್ನು ಗೊತ್ತು ಮಾಡಿ ಸ್ವಚ್ಛವಾಗಿಡಿ.

ಮುಖ್ಯದ್ವಾರದ ಬಳಿ ಆಹಾರ ಸೇವಿಸಬೇಡಿ

ನಿಮ್ಮ ಮನೆಯ ಹೊಸ್ತಿನ ಬಳಿ ಅಥವಾ ಅದರ ಮೇಲೆ ನಿಂತು ಊಟ ಮಾಡುವುದು ಹಾಗೂ ಮುಖ್ಯದ್ವಾರದ ಬಳಿ ಊಟ ಮಾಡಬೇಡಿ. ಇದು ಮನೆಯಲ್ಲಿ ನಕರಾತ್ಮಕ ಶಕ್ತಿ ತುಂಬುವಂತೆ ಮಾಡುತ್ತದೆ. ಆಹಾರವು ನಿಮ್ಮ ದೇಹದ ಆರೋಗ್ಯಕ್ಕೆ ಬೇಕಾದದ್ದು ಹೀಗಾಗಿ ಅದಕ್ಕೆಂದು ನಿಗದಿ ಪಡಿಸಿದ ಶಾಂತ ವಾತಾವರಣದಲ್ಲಿ ಆಹಾರ ಸೇವಿಸಿ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net