ವಾಸ್ತು ಟಿಪ್ಸ್: ಮರೆತು ಶಂಖಪುಷ್ಪ ಗಿಡವನ್ನು ಈ ದಿಕ್ಕಿನಲ್ಲಿ ನೆಡಬೇಡಿ; ಆರ್ಥಿಕ ನಷ್ಟ ಗ್ಯಾರಂಟಿ!..Aparajita Plant Vastu

Aparajita Plant Vastu
Aparajita Plant Vastu
Published on

ಪ್ರಮುಖ ಮುಖ್ಯಾಂಶಗಳು

  • ಮನೆಯಲ್ಲಿ ಸುಖ-ಸಮೃದ್ಧಿ ಹೆಚ್ಚಿಸಲು ಶಂಖಪುಷ್ಪ ಗಿಡವನ್ನು ಈ ದಿಕ್ಕಿನಲ್ಲಿ ನೆಡಿ!
  • ಈಶಂಖಪುಷ್ಪವನ್ನು ವಾಸ್ತು ನಿಯಮಗಳ ಪ್ರಕಾರ ಸರಿಯಾದ ದಿಕ್ಕಿನಲ್ಲಿ ನೆಡುವುದು ಅತಿ ಮುಖ್ಯ.
  • ತಪ್ಪು ದಿಕ್ಕಿನಲ್ಲಿ ಶಂಖಪುಷ್ಪ ಗಿಡ ನೆಡುವುದರಿಂದ ಆರ್ಥಿಕ ನಷ್ಟ ಹಾಗೂ ಮಾನಸಿಕ ಒತ್ತಡ ಎದುರಾಗಬಹುದು.
Aparajita Plant Vastu: ಹಿಂದೂ ಧರ್ಮದ ಪ್ರಕಾರ ಹಾಗೂ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕೆಲವು ಗಿಡವನ್ನು ಬೆಳೆಸುವುದು ವಿಶೇಷವಾದ ಮಹತ್ವವನ್ನು ನೀಡುತ್ತದೆ, ಅಂತಹದರಲ್ಲಿ ಶಂಖಪುಷ್ಪ ಹೂ ಕೂಡ ಒಂದು. ಈ ಹೂವನ್ನು ಸಾಮಾನ್ಯವಾಗಿ ಹಲವರು ಚಹಾಕ್ಕಾಗಿ ಬಳಕೆ ಮಾಡುತ್ತಾರೆ. ಆದರೆ ಇದು ನಿಮ್ಮ ಮನೆಯಲ್ಲಿ ಆರ್ಥಿಕವಾಗಿ ಸಮೃದ್ಧರಾಗಿರಲು ಹಾಗೂ ಸಕಾರಾತ್ಮಕ ಶಕ್ತಿಗೆ ಸಹಕಾರಿ ಎನ್ನುವ ನಂಬಿಕೆ ಅನಾದಿಕಾಲದಿಂದಲೂ ಇದೆ.
ಆದರೆ, ಮುಖ್ಯವಾಗಿ ಗಮನಿಸಬೇಕಾದ ವಿಚಾರ ಎಂದರೆ, ಮನೆಗೆ ಒಳಿತನ್ನು ತರುವ ಗಿಡಗಳನ್ನು ವಾಸ್ತು ಶಾಸ್ತ್ರದ ಪ್ರಕಾರ ಯಾವ ದಿಕ್ಕಿನಲ್ಲಿ ನೆಟ್ಟರೆ ಒಳ್ಳೆಯದು ಎನ್ನುವುದನ್ನು ಕಂಡುಕೊಳ್ಳಬೇಕಾಗುತ್ತದೆ. ಅದರಂತೆ, ಈ ಶಂಖ ಪುಷ್ಪವನ್ನು ಎಲ್ಲಿ ನೆಡಬೇಕು. ಎಲ್ಲಿ ನೆಟ್ಟರೆ ಒಳಿತು ಎನ್ನುವುದನ್ನು ತಿಳಿದುಕೊಳ್ಳೋಣ.

ಯಾವ ದಿಕ್ಕಿನಲ್ಲಿ ಶಂಖಪುಷ್ಪ ಹೂ ನೆಡಬೇಕು?

ವಾಸ್ತು ತಜ್ಞರ ಪ್ರಕಾರ, ಅಪರಾಜಿತಾ ಗಿಡವನ್ನು ಮನೆಯ ಈಶಾನ್ಯ, ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ನೆಡುವುದು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗಿದೆ. ಈ ದಿಕ್ಕುಗಳನ್ನು ದೇವತೆಗಳ ಮತ್ತು ಕುಬೇರನ ಸ್ಥಾನವೆಂದು ನಂಬಲಾಗುವುದರಿಂದ, ಇಲ್ಲಿ ಈ ಗಿಡವನ್ನು ಇಡುವುದರಿಂದ ಮನೆಯಲ್ಲಿ ಐಶ್ವರ್ಯ ವೃದ್ಧಿಯಾಗುತ್ತದೆ.

ಯಾವ ದಿನ ಈ ಗಿಡ ನೆಡಬೇಕು

ಶಂಖಪುಷ್ಟ ಗಿಡವನ್ನು ಗುರುವಾರ ಅಥವಾ ಶುಕ್ರವಾರ ನೆಟ್ಟರೆ ಪ್ರಶಸ್ತ. ಗುರುವಾರವು ಜಗತ್ಪಾಲಕ ಮಹಾವಿಷ್ಣುವಿಗೆ ಮತ್ತು ಶುಕ್ರವಾರವು ಮಹಾಲಕ್ಷ್ಮಿ ದೇವಿಗೆ ಪ್ರಿಯವಾದ ದಿನಗಳಾಗಿರುವುದರಿಂದ, ಈ ದಿನಗಳಲ್ಲಿ ಅಪರಾಜಿತಾ ಗಿಡವನ್ನು ನೆಡುವುದರಿಂದ ವಿಷ್ಣು ಮತ್ತು ಲಕ್ಷ್ಮಿಯ ಕೃಪೆ ಸದಾ ಮನೆ ಮಂದಿಯ ಮೇಲಿರುತ್ತದೆ.

ಎಲ್ಲಿದ್ದರೆ ಬೆಸ್ಟ್​​

ಮನೆಯ ಮುಖ್ಯ ದ್ವಾರದ ಬಲಗಡೆ ಅಪರಾಜಿತಾ ಗಿಡವನ್ನು ಪಾಟ್​​ನಲ್ಲಿ ಇಡುವುದು ಅತ್ಯಂತ ಶ್ರೇಷ್ಠ. ಹೀಗೆ ಮಾಡುವುದರಿಂದ ಮನೆಗೆ ಪ್ರವೇಶಿಸುವ ಯಾವುದೇ ರೀತಿಯ ನಕಾರಾತ್ಮಕ ಶಕ್ತಿಗಳು ಅಥವಾ ಕೆಟ್ಟ ದೃಷ್ಟಿಗಳು ಹೊರಗಡೆಯೇ ನಾಶವಾಗಿ, ಕೇವಲ ಸಕಾರಾತ್ಮಕತೆ ಮಾತ್ರ ಮನೆಗೆ ಪ್ರವೇಶಿಸುತ್ತದೆ.

ಇಲ್ಲಿ ನೆಡಬೇಡಿ

ವಾಸ್ತು ನಿಯಮಗಳ ಪ್ರಕಾರ, ಶಂಖಪುಷ್ಪ ಗಿಡವನ್ನು ಎಂದಿಗೂ ಮನೆಯ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ನೆಡಬಾರದು. ಈ ದಿಕ್ಕುಗಳಲ್ಲಿ ಇಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿ, ಆರ್ಥಿಕ ನಷ್ಟ ಎದುರಾಗಬಹುದು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net