ಸಿಂಹ-ಕನ್ಯಾ ರಾಶಿಯವರಿಗಿದೆ ಪವರ್‌ಫುಲ್ ಸ್ವಭಾವ; ಆಗಸ್ಟ್​ನಲ್ಲಿ ಹುಟ್ಟಿದವರು ಈ ವಿಚಾರಕ್ಕೆ ತುಂಬಾನೆ ಸ್ಪೆಷಲ್ ಗೊತ್ತಾ?..August Born Personalities

August Born Personalities
August Born Personalities
Published on

ಪ್ರಮುಖ ಮುಖ್ಯಾಂಶಗಳು

  • ಆಗಸ್ಟ್​ನಲ್ಲಿ ಜನಿಸಿದವರ ಗುಣ ಲಕ್ಷಣಗಳು ಹೀಗೆಲ್ಲ ಇರುತ್ತೆ ನೋಡಿ.
  • ಆತ್ಮವಿಶ್ವಾಸ, ಸಂಘಟನಾ ಮನೋಭಾವ ಮತ್ತು ಕಟ್ಟುನಿಟ್ಟಾದ ನಿಯಮ ಪಾಲನೆ ಮಾಡುವವರು.
  • ಮೈಕಲ್ ಜಾಕ್ಸನ್, ಬರಾಕ್ ಒಬಾಮಾ, ನೀಲ್ ಆರ್ಮ್‌ಸ್ಟ್ರಾಂಗ್ ಮತ್ತು ಉಸೇನ್ ಬೋಲ್ಟ್ ಇದೇ ತಿಂಗಳಲ್ಲಿ ಜನಿಸಿದವರು.
August Born Personalities: ಆಗಸ್ಟ್​ ವರ್ಷದ 8ನೇ ತಿಂಗಳಾಗಿದ್ದು, ಈ ಮಾಸದಲ್ಲಿ  ಜನಿಸಿದ ಜನರು ಸಿಂಹ ಮತ್ತು ಕನ್ಯಾರಾಶಿ ಎಂಬ ಎರಡು ರಾಶಿಚಕ್ರ ಚಿಹ್ನೆಗಳ ಅಡಿಯಲ್ಲಿ ಬರುತ್ತಾರೆ.  ಜುಲೈ 23 ರಿಂದ ಆಗಸ್ಟ್ 21 ರ ನಡುವೆ ಜನಿಸಿದವರನ್ನು ಸಿಂಹ ರಾಶಿಯವರು ಎಂದು ಪರಿಗಣಿಸಲಾಗುತ್ತದೆ, ಆದರೆ ಆಗಸ್ಟ್ 19 ರಿಂದ 23 ರ ನಡುವೆ ಜನಿಸಿದವರನ್ನು ಕನ್ಯಾರಾಶಿಗೆ ಸೇರಿದವರು ಎನ್ನಲಾಗುತ್ತದೆ.

ಪ್ರಸಿದ್ಧ ವ್ಯಕ್ತಿಗಳು ಜನಿಸಿದ್ದು ಈ ಮಂತ್​ನಲ್ಲೇ 

ಮೈಕಲ್​ ಜಾಕ್ಸನ್​, ಬರಾಕ್ ಒಬಾಮಾ,  ಕೋಬ್ ಬ್ರ್ಯಾಂಟ್, ನೀಲ್ ಆರ್ಮ್‌ಸ್ಟ್ರಾಂಗ್ ಮತ್ತು ಉಸೇನ್ ಬೋಲ್ಟ್ ಅವರಂತಹ ಪ್ರಸಿದ್ಧ ವ್ಯಕ್ತಿಗಳು ಆಗಸ್ಟ್‌ನಲ್ಲಿ ಜನಿಸಿದರು.

ಅಪಾರ ಆತ್ಮವಿಶ್ವಾಸ ಹೊಂದಿದವರು

ಆಗಸ್ಟ್​ನಲ್ಲಿ ಜನಸಿದ ವ್ಯಕ್ತಿಗಳು ಬಲವಾದ ಇಚ್ಛಾಶಕ್ತಿ ಉಳ್ಳವರು.  ಇವರ ಆತ್ಮವಿಶ್ವಾಸವೇ ಪ್ರಮುಖ ಆಭರಣ. ಯಾವುದೇ ಸಭೆ ಮತ್ತು ಯಾವುದೇ ಗುಂಪಿನಲ್ಲಿದ್ದರು ಇವರ  ಗುಣವು, ಆತ್ಮವಿಶ್ವಾಸವು ಎದ್ದು ಕಾಣುತ್ತದೆ.  ಅತ್ಯಂತ ಹೆಚ್ಚಿನ ಆತ್ಮವಿಶ್ವಾಸ ಹೊಂದಿರುವ ವ್ಯಕ್ತಿಯನ್ನು ನೀವು ಕಂಡರೆ, ಅವರು ಆಗಸ್ಟ್‌ನಲ್ಲಿ ಜನಿಸಿದವರು ಎಂದು ಧೈರ್ಯವಾಗಿ ಹೇಳಬಹುದು.

ಸಂಘಟನಾ ಕೌಶಲ ಉಳ್ಳವರು

ಆಗಸ್ಟ್​​ನಲ್ಲಿ  ಜನಿಸಿದವರು ಅತ್ಯಂತ ಶಿಸ್ತಿನ ಸಿಪಾಯಿಗಳು, ಬಟ್ಟೆ ಹಾಗೂ ಪಾತ್ರೆ ಯಾವುದೇ ವಿಚಾರದಲ್ಲಾದರೂ ಎಲ್ಲವೂ ವ್ಯವಸ್ಥಿತವಾಗಿ ಜೋಡಣೆಯಾಗಿರಬೇಕು. ಅವರಿಗೆ ಅಸ್ತವ್ಯಸ್ತವಾಗಿರಲು ಇಷ್ಟವೇ ಆಗೋದಿಲ್ಲ. ಈ ಅಚ್ಚುಕಟ್ಟುತನವೇ ಇವರನ್ನು ವಿಶೇಷವಾಗಿಸುತ್ತದೆ.

ಹಠಮಾರಿ ಸ್ವಭಾವದವರು 

ಯಾವಾಗಲೂ ನಾನೇ ಮುಂಚೂಣಿಯಲ್ಲಿರಬೇಕು. ಎಲ್ಲಾ ವಿಚಾರಗಳ ಬಗ್ಗೆ ಅರಿವಿರಬೇಕು. ಅವರ ಆಸೆಗಳು ಅವರನ್ನು ಮೊಂಡರನ್ನಾಗಿ ಮಾಡುವ ಸಾಧ್ಯತೆ ಇದೆ. ಇದರಿಂದಾಗಿ ಕೆಲವೊಮ್ಮೆ ಅವರು ತೆಗೆದುಕೊಳ್ಳುವ ನಿರ್ಧಾರಗಳು ಅವರಿಗೆ ಸಮಸ್ಯೆಯಾಗುವಂತೆ ಮಾಡಬಹುದು.  

ಪ್ರಾಕ್ಟೀಕಲ್​ ಆಗಿ ಯೋಚಿಸುವ ಮನೋಭಾವದವರು

ಜೀವನವನ್ನು ಪ್ರಯೋಗಿಕವಾಗಿ ಹೇಗೆ ಎದುರಿಸಬೇಕು ಎಂದು ಯೋಚಿಸಿ ಸುಮ್ಮನಾಗುವುದಕ್ಕಿಂತ ವಾಸ್ತವಿಕವಾಗಿ ಅದನ್ನು ಜಾರಿಗೆ ತರುವ ಕೆಲಸ ಮಾಡುತ್ತಾರೆ. ಭಾವನಾತ್ಮಕವಾಗಿ ಯೋಚಿಸುವುದಕ್ಕಿಂತ, ವಾಸ್ತವಿಕವಾಗಿ ಆಲೋಚಿಸಿ ಕಷ್ಟದ ಪರಿಸ್ಥಿತಿಯನ್ನು ಎದುರಿಸಲು ಇತರರಿಗೆ ಮಾರ್ಗದರ್ಶನ ನೀಡುತ್ತಾರೆ.

ಏಕಾಂತವಾಗಿರಲು ಇಚ್ಛಿಸುತ್ತಾರೆ

ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆತು ಕೆಲಸ ಮಾಡುವವರಾದರೂ ಸಹ ಕೆಲವೊಮ್ಮೆ ಒಬ್ಬಂಟಿಯಾಗಿ ಕಾಲ ಕಳೆಯಲು ಬಯಸುತ್ತಾರೆ. ತಮ್ಮ ಮನಸ್ಸಿನ ಭಾವನೆಗಳನ್ನು ಇತರರೊಂದಿಗೆ ಸುಲಭವಾಗಿ ಹಂಚಿಕೊಳ್ಳುವುದಿಲ್ಲ. ಎಲ್ಲರೊಂದಿಗೆ ಸುಲಭವಾಗಿ ಓಪನಪ್​ ಆಗೋದಿಲ್ಲ. 

ಆಪ್ತರ ಸಂಖ್ಯೆ ಕಡಿಮೆ

ಇವರು ತಮ್ಮ ಜೀವನದಲ್ಲಿ ಹಾಗೂ ಇತರರಿಂದ ಅತ್ಯುನ್ನತ ಮಟ್ಟದ ನಿರೀಕ್ಷೆಗಳನ್ನು ಇಟ್ಟುಕೊಳ್ಳುತ್ತಾರೆ. ಈ ಕಾರಣದಿಂದಾಗಿ ಇವರನ್ನು ಮೆಚ್ಚಿಸುವುದು ಸುಲಭವಲ್ಲ. ಇದರಿಂದಾಗಿ ಇವರ ಆಪ್ತ ಸ್ನೇಹಿತರ ಬಳಗವು ತೀರ ಸಣ್ಣದಾಗಿರುತ್ತದೆ.

ಪಾಸಿಟಿವ್​ ಮೋಟಿವೇಟರ್​

ಯಾರಾದರೂ ಸಂಕಷ್ಟಕ್ಕೆ ಒಳಗಾಗಿದ್ದರೆ ಅವರನ್ನು ಅದ್ರಿಂದ ಹೊರಗೆ ತರುವ ಶಕ್ತಿ ಅವರಿಗೆ ಇದೆ. ಇವು ಅತ್ಯುತ್ತಮ ಪಾಸಿಟಿವ್​ ಮೋಟಿವೇಟರ್​, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net