

ವಿವಾಹವು ಆರ್ಥಿಕತೆ ಮತ್ತು ಸಾಮಾಜಿಕ ಸ್ಥಾನಮಾನದ ಮೇಲೂ ಪ್ರಭಾವ ಬೀರುತ್ತದೆ
ಕುಂಡಲಿಯ ಗ್ರಹ-ಭಾವಗಳ ಆಧಾರದ ಮೇಲೆ ಸಂಗಾತಿಯ ಸಂಪತ್ತನ್ನು ಅಂದಾಜಿಸಲಾಗುತ್ತದೆ.
ವೈದಿಕ ಜ್ಯೋತಿಷ್ಯಶಾಸ್ತ್ರದ ಪ್ರಕಾರ ನಿಮಗೆ ಯಾವ ರೀತಿಯ ಸಂಗಾತಿ ಸಿಗುತ್ತಾರೆ ಎಂದು ಪರಿಶೀಲಿಸಿ.
ವಿವಾಹ ಕೇವಲ ಪ್ರೀತಿ, ಬಾಂಧವ್ಯದ ಮೇಲೆ ನಿಲ್ಲುವುದಿಲ್ಲ. ಆರ್ಥಿಕ ಸದೃಢತೆಯು ಇಬ್ಬರು ಒಟ್ಟಾಗಿ ಕೊನೆಯವರೆಗೂ ಬದುಕುವಂತೆ ಮಾಡುತ್ತದೆ. ಹೀಗಾಗಿ ಇಬ್ಬರಲ್ಲಿ ಒಬ್ಬರು ಹಣವಂತರಾಗಿರುವುದು ಬಹುಮುಖ್ಯ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, .ಜನ್ಮಕುಂಡಲಿಯ ನಿರ್ದಿಷ್ಟ ಗ್ರಹಗಳು ಮತ್ತು ಭಾವಗಳ ನಡುವಿನ ಸಂಬಂಧವನ್ನು ಗಮನಿಸಿ, ಭವಿಷ್ಯದ ಸಂಗಾತಿಯ ಆರ್ಥಿಕ ಸ್ಥಿತಿಯ ಬಗ್ಗೆ ತಿಳಿಯಬಹುದು ಎಂದು ಜ್ಯೋತಿಷಿಗಳು ಹೇಳುತ್ತಾರೆ.
ಕುಂಡಲಿಯಲ್ಲಿ ಶ್ರೀಮಂತ ಸಂಗಾತಿ ಯೋಗ ವೈದಿಕ ಜ್ಯೋತಿಷ್ಯದ ಪ್ರಕಾರ ಹಣಕಾಸು, ಸಂಪತ್ತು ಮತ್ತು ವಿವಾಹದ ನಡುವಿನ ಸಂಬಂಧವನ್ನು ವಿವರಿಸುವ ಸಮಗ್ರ ವರದಿ ಇಲ್ಲಿದೆ.
ಜನ್ಮಕುಂಡಲಿಯಲ್ಲಿರುವ ನಿರ್ದಿಷ್ಟ ಗ್ರಹಗಳು ಮತ್ತು ಭಾವಗಳ ಪರಸ್ಪರ ಸಂಬಂಧವನ್ನು ಗಮನಿಸಿ, ಭವಿಷ್ಯದ ಸಂಗಾತಿಯ ಆರ್ಥಿಕ ಸ್ಥಿತಿಯ ಬಗ್ಗೆ ಜ್ಯೋತಿಷಿಗಳು ಮಾಹಿತಿ ನೀಡುತ್ತಾರೆ. ಹಿಂದೆ ಶ್ರೀಮಂತ ಸಂಗಾತಿ ದೊರೆಯಲು ಒಂದೇ ಒಂದು ಅಂಶ ಕಾರಣವಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಜ್ಯೋತಿಷಿಗಳು 7ನೇ ಸಂಗಾತಿ), 8ನೇ ಭಾವ (ಸಂಗಾತಿಯ ಸಂಪತ್ತು ಮತ್ತು ಆಸ್ತಿ) ಹಾಗೂ 11ನೇ ಭಾವ (ಆದಾಯ ಮತ್ತು ಲಾಭ) ಸೇರಿದಂತೆ ವಿವಿಧ ಭಾವಗಳನ್ನು ಪರಿಶೀಲಿಸುತ್ತಾರೆ. ಇದರ ಜೊತೆಗೆ ಗುರು ಮತ್ತು ಶುಕ್ರ ಎಂಬ ಎರಡು ಪ್ರಮುಖ ಗ್ರಹಗಳ ಸ್ಥಾನವನ್ನೂ ಗಮನಿಸಲಾಗುತ್ತದೆ.
ಶ್ರೀಮಂತ ಸಂಗಾತಿ ಬಗ್ಗೆ 5 ಪ್ರಮುಖ ಸೂಚನೆಗಳು
ಪ್ರೀತಿ, ಸಂಪತ್ತು ಮತ್ತು ಸಂಬಂಧಗಳನ್ನು ಪ್ರತಿನಿಧಿಸುವ ಶುಕ್ರ ಗ್ರಹದ ಸ್ಥಾನವು ಅತ್ಯಂತ ಮಹತ್ವದ ಸೂಚನೆ. ಶುಕ್ರನು ತನ್ನ ಸ್ವಕ್ಷೇತ್ರಗಳಾದ ವೃಷಭ ಅಥವಾ ತುಲಾ ರಾಶಿಯಲ್ಲಿ ಬಲವಾಗಿದ್ದರೆ, ಅಥವಾ ಮೀನ ರಾಶಿಯಲ್ಲಿ ಉಚ್ಚ ಸ್ಥಿತಿಯಲ್ಲಿದ್ದರೆ ಸಂತೋಷ, ಸಂಪತ್ತು ಮತ್ತು ಆರ್ಥಿಕವಾಗಿ ಸ್ಥಿರವಾಗಿರುವ ಸಂಗಾತಿ ದೊರೆಯಲು ಸಹಾಯವಾಗುತ್ತದೆ ಎಂಬ ನಂಬಿಕೆಯಿದೆ. ಇಂತಹ ಸ್ಥಾನಗಳನ್ನು ಹೊಂದಿರುವವರು ಸಹಜವಾಗಿಯೇ ಉನ್ನತ ಮೌಲ್ಯದ ಸಂಬಂಧಗಳತ್ತ ಆಕರ್ಷಿತರಾಗುತ್ತಾರೆ.
7ನೇ ಮತ್ತು 11ನೇ ಭಾವ ಅತ್ಯಂತ ಶುಭ ಮತ್ತು ಲಾಭದಾಯಕವಾದ ಯೋಗವನ್ನು ಸೂಚಿಸುತ್ತದೆ. ವೈದಿಕ ಜ್ಯೋತಿಷ್ಯದಲ್ಲಿ 7ನೇ ಭಾವವು ವಿವಾಹ, ಜೀವನ ಸಂಗಾತಿ ಮತ್ತು ವ್ಯಾಪಾರ ಪಾಲುದಾರಿಕೆಯನ್ನು ಸೂಚಿಸಿದರೆ, 11ನೇ ಭಾವವು ಲಾಭ, ಆದಾಯ, ಆಸೆಗಳ ಈಡೇರಿಕೆ ಮತ್ತು ಸಾಮಾಜಿಕ ವಲಯವನ್ನು ಸೂಚಿಸುತ್ತದೆ ವಿವಾಹದ ನಂತರ ಸಂಗಾತಿಯ ಮೂಲಕ ಹಣಕಾಸು, ಸಂಪರ್ಕಗಳು ಮತ್ತು ಅವಕಾಶಗಳು ದೊರೆಯುವ ಸಾಧ್ಯತೆ ಇರುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.
ಬೆಳವಣಿಗೆ ಮತ್ತು ಸಮೃದ್ಧಿಯ ಗ್ರಹವಾಗಿರುವ ಗುರುವು ಕೂಡ ಮಹತ್ವದ್ದಾಗಿದೆ. ಗುರುವು 7ನೇ ಭಾವದಲ್ಲಿ ಅಥವಾ ಅದರ ಸಮೀಪದಲ್ಲಿದ್ದರೆ ಅದು ಶುಭ ಸಂಕೇತವಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ ಇದು ಸಂಗಾತಿಯು ವಿವಾಹಕ್ಕೆ ಹಣ, ಸ್ಥಿರತೆ ಮತ್ತು ಬುದ್ಧಿವಂತಿಕೆಯನ್ನು ತರುತ್ತಾರೆ ಎನ್ನುವುದನ್ನು ವ್ಯಕ್ತಪಡಿಸುತ್ತದೆ.
ಗಮನಿಸಬೇಕಾದ ಮತ್ತೊಂದು ಪ್ರಮುಖ ಸ್ಥಾನವೆಂದರೆ ಎಂಟನೇ ಭಾವ. ಇದು ಹಂಚಿಕೊಂಡ ಹಣ, ಪಿತ್ರಾರ್ಜಿತ ಆಸ್ತಿ ಮತ್ತು ಸಂಗಾತಿಯ ಹಣಕಾಸಿನ ವಿಷಯಗಳನ್ನು ನಿರ್ವಹಿಸುತ್ತದೆ. ನಿಮ್ಮ 8ನೇ ಭಾವವು ಬಲವಾಗಿದ್ದರೆ ಅಥವಾ ಯಾವುದೇ ಗ್ರಹವು ಅದರ ಮೇಲೆ ಶುಭ ಪ್ರಭಾವ ಬೀರಿದ್ದರೆ, ವಿವಾಹದ ಮೂಲಕ ಸಂಪತ್ತು ಲಭಿಸುವ ಅಥವಾ ಸಂಗಾತಿಯು ಈಗಾಗಲೇ ಶ್ರೀಮಂತರಾಗಿರುವ ಸಾಧ್ಯತೆ ಇರುತ್ತದೆ.
7ನೇ ಅಥವಾ 11ನೇ ಭಾವದಲ್ಲಿರುವ ರಾಹುವು ವಿಭಿನ್ನ ಲಾಭಗಳನ್ನು ತರಬಹುದು; ಉದಾಹರಣೆಗೆ ಸಂಪತ್ತಿನಲ್ಲಿ ಹಠಾತ್ ಏರಿಕೆ, ವಿದೇಶಿ ವ್ಯಕ್ತಿಗಳೊಂದಿಗೆ ಸಂಪರ್ಕ ಅಥವಾ ಜನಪ್ರಿಯ ಹಾಗೂ ಶ್ರೀಮಂತ ಸಂಗಾತಿ ದೊರೆಯುವ ಸಾಧ್ಯತೆ ಇರುತ್ತದೆ.
ಈ ಯೋಗಗಳನ್ನು ಮಾತ್ರವೇ ಪ್ರತ್ಯೇಕವಾಗಿ ನೋಡಬಾರದು ಎಂದು ಜ್ಯೋತಿಷಿಗಳು ತಿಳಿಸುತ್ತಾರೆ. ಯಾವುದೇ ತೀರ್ಮಾನಕ್ಕೆ ಬರುವ ಮೊದಲು ಸಂಪೂರ್ಣ ಜನ್ಮಕುಂಡಲಿಯನ್ನು ಪರಿಶೀಲಿಸುವುದು ಅಗತ್ಯವಾಗಿದೆ. ನವಾಂಶ (D9) ವರ್ಗ ಕುಂಡಲಿ, ಶುಕ್ರನ ಬಲ, 7ನೇ ಮನೆಯ ಅಧಿಪತಿಯ ಸ್ಥಿತಿ ಮತ್ತು ಗ್ರಹ ದೃಷ್ಟಿಗಳು ಇದರಲ್ಲಿ ಸೇರಿರುತ್ತವೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.