ಮೇಷ: ಕಚೆೇರಿಯಲ್ಲಿ ತಾಳ್ಮೆ ಇರಲಿ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ಧಾರ್ವಿುಕ ಸಮಾರಂಭಗಳಲ್ಲಿ ಭಾಗಿ. ಶುಭಸಂಖ್ಯೆ:9.ವೃಷಭ: ಪತ್ನಿಯ ಆರೋಗ್ಯದಲ್ಲಿ ಚೇತರಿಕೆ. ಆಕಸ್ಮಿಕವಾಗಿ ಧನಲಾಭವಾಗುವುದು. ಕೃಷಿಕರಿಗೆ ಮಾನಸಿಕ ಒತ್ತಡ ಹೆಚ್ಚಾಗುವುದು.ಶುಭಸಂಖ್ಯೆ: 6.ಮಿಥುನ: ಹಿತಶತ್ರುಗಳ ಕಿರಿಕಿರಿ ಅನುಭವಿಸಬೇಕಾದೀತು. ರಾಜಕೀಯದವರಿಗೆ ಸಮಾಜದಲ್ಲಿ ಮನ್ನಣೆ. ಬಂಧುಗಳ ಭೇಟಿಯಾಗಲಿದೆ. ಶುಭಸಂಖ್ಯೆ: 2.ಕಟಕ: ದಾಂಪತ್ಯದಲ್ಲಿ ಬದಲಾವಣೆ. ಹೊಸ ಉದ್ಯೋಗದ ಒತ್ತಡ. ಸಹೋದರರೊಂದಿಗೆ ಜಗಳ. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ: 6.ಸಿಂಹ: ವಿದ್ಯೆಯಲ್ಲಿ ನಿರಾಸಕ್ತಿ ತಾಳುವಿರಿ. ಕಾರ್ವಿುಕ ವರ್ಗದವರಿಗೆ ಧನಲಾಭವಾಗುವುದು. ದಾಂಪತ್ಯದಲ್ಲಿ ಸಾಮರಸ್ಯ ಇರಲಿದೆ. ಶುಭಸಂಖ್ಯೆ:5.ಕನ್ಯಾ: ಹೊಸವಿದ್ಯೆಯನ್ನು ಕಲಿಯುವಲ್ಲಿ ಆಸಕ್ತಿ ತೋರಿಸುವಿರಿ. ಸ್ನೇಹಿತರಿಗಾಗಿ ಅಧಿಕ ಖರ್ಚು ಆಗಲಿದೆ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 1.ತುಲಾ: ಹೂಡಿಕೆ ವ್ಯವಹಾರದಲ್ಲಿ ಲಾಭವಾಗಲಿದೆ. ಐಷಾರಾಮಿ ವಸ್ತುಗಳನ್ನು ಖರೀದಿಸುವಿರಿ. ಕಾನೂನು ವ್ಯಾಜ್ಯಗಳಲ್ಲಿ ನಿಮಗೆ ಜಯ. ಶುಭಸಂಖ್ಯೆ: 6.ವೃಶ್ಚಿಕ: ಪಿತೃ ವರ್ಗದಿಂದ ಧನಸಹಾಯ ಒದಗಿ ಬರಲಿದೆ. ಉದ್ಯೋಗದಲ್ಲಿ ನೆಮ್ಮದಿಯ ದಿನ. ಕೌಟುಂಬಿಕ ಕಲಹ ಬಗೆಹರಿಯಲಿದೆ. ಶುಭಸಂಖ್ಯೆ: 1.ಧನಸ್ಸು: ಉದ್ಯೋಗಕ್ಕಾಗಿ ಪ್ರಯಾಣ. ಖಾಸಗಿ ಉದ್ಯೋಗಸ್ಥ ಮಹಿಳೆಯರಿಗೆ ವರ್ಗ. ಸಹೋದ್ಯೋಗಿಗಳಿಂದ ಕಿರಿಕಿರಿ. ಮನೆಯಲ್ಲಿ ಶಾಂತಿ. ಶುಭಸಂಖ್ಯೆ: 4.ಮಕರ: ಸಿನಿಮಾದವರಿಗೆ ಅಭಿವೃದ್ಧಿ. ಸಂಬಂಧಿಗಳಿಂದ ಧನಸಹಾಯ. ಯಂತ್ರೋಪಕರಣಗಳಿಂದ ತೊಂದರೆ. ಸಾರಿಗೆ ನೌಕರರಿಗೆ ವರ್ಗ. ಶುಭಸಂಖ್ಯೆ: 6.ಕುಂಭ: ಭವಿಷ್ಯದ ಬಗ್ಗೆ ಚಿಂತೆ. ಹಣ್ಣುಗಳು ಮತ್ತು ತರಕಾರಿ ಮಾರಾಟಗಾರರಿಗೆ ಉತ್ತಮ ಆದಾಯ. ಔಷಧ ವ್ಯಾಪಾರಸ್ಥರಿಗೆ ಲಾಭ. ಶುಭಸಂಖ್ಯೆ: 2.ಮೀನಾ: ವಿವಾಹ ಯೋಗ. ವಿದ್ಯಾರ್ಥಿಗಳಿಗೆ ಮುನ್ನಡೆ. ರಾಜಕಾರಣಿಗಳಿಂದ ನಿರೀಕ್ಷಿತ ಸಹಕಾರ. ಆಯುಷ್ ವೈದ್ಯರಿಗೆ ಸ್ಥಳ ಬದಲಾವಣೆ.ಶುಭಸಂಖ್ಯೆ: 8