ನಿತ್ಯಭವಿಷ್ಯ; ಈ ರಾಶಿಯವರಿಗಿಂದು ಹಣಕಾಸಿನ ಅಡೆತಡೆಗಳ ನಿವಾರಣೆ

Nitya Bhavishya
Nitya Bhavishya
Published on
ಮೇಷ: ದಾಂಪತ್ಯದಲ್ಲಿ ಅನಿರೀಕ್ಷಿತ ಬೆಳವಣಿಗೆ. ಪದವೀಧರ ಮಕ್ಕಳಿಗೆ ಉದ್ಯೋಗ ಪ್ರಾಪ್ತಿ. ಪ್ರತಿಭಾವಂತ ಮಹಿಳೆಯರಿಗೆ ಪುರಸ್ಕಾರ. (ಶುಭಸಂಖ್ಯೆ: 9)
ವೃಷಭ: ಹಣಕಾಸಿನ ಅಡೆತಡೆಗಳ ನಿವಾರಣೆ. ವಾಕ್ಚಾತುರ್ಯದಿಂದ ಮನ್ನಣೆ ಗಳಿಸುವಿರಿ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಕ್ಕೆ ಚಾಲನೆ. (ಶುಭಸಂಖ್ಯೆ: 1)
ಮಿಥುನ: ಸರ್ಕಾರಿ ಕೆಲಸ ಸರಾಗವಾಗಿ ಆಗಲಿದೆ. ಕುಟುಂಬದಲ್ಲಿ ವಿವಾಹ ಕಾರ್ಯದ ಸಡಗರ. ಸಂಸ್ಕರಣಾ ಘಟಕಗಳ ಮಾಲೀಕರಿಗೆ ಲಾಭ. (ಶುಭಸಂಖ್ಯೆ: 3)
ಕಟಕ: ಸೇವಾನಿರತ ವೃತ್ತಿಯಲ್ಲಿ ಜನಪ್ರಿಯತೆ. ವಾಣಿಜ್ಯ ಕ್ಷೇತ್ರದ ಉದ್ಯೋಗಸ್ಥರಿಗೆ ಆತಂಕ. ಸಿಹಿತಿಂಡಿಗಳ ವ್ಯಾಪಾರದಿಂದ ಲಾಭ. (ಶುಭಸಂಖ್ಯೆ: 7)
ಸಿಂಹ: ಯಶಸ್ವಿ ಜವಾಬ್ದಾರಿ ನಿರ್ವಹಣೆಗೆ ಅಧಿಕಾರಿಗಳಿಂದ ಪ್ರಶಂಸೆ. ಪುಣ್ಯಕ್ಷೇತ್ರ ದರ್ಶನ. ಕೂಡಿಟ್ಟ ಹಣ ಸದ್ವಿನಿಯೋಗ ಆಗಲಿದೆ. (ಶುಭಸಂಖ್ಯೆ: 2)
ಕನ್ಯಾ: ತಂಪು ಪಾನೀಯ ಮಾರಾಟಗಾರರಿಗೆ ನಿರೀಕ್ಷೆಗೂ ಮೀರಿ ಲಾಭ. ಅವಿವಾಹಿತರಿಗೆ ವಿವಾಹಯೋಗ. ಕೃಷಿಕರಿಗೆ ನೆಮ್ಮದಿ. (ಶುಭಸಂಖ್ಯೆ: 9)
ತುಲಾ: ಯಂತ್ರೋಪಕರಣ ದುರಸ್ತಿಗೆ ವೆಚ್ಚ. ಲೆಕ್ಕಪರಿಶೋಧಕರಿಗೆ ಧನಲಾಭ. ಕಾನೂನು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದತ್ತ ಗಮನವಿರಲಿ. (ಶುಭಸಂಖ್ಯೆ: 1)
ವೃಶ್ಚಿಕ: ಗೃಹಬಳಕೆ ವಸ್ತು ಮಾರಾಟಗಾರರಿಗೆ ಲಾಭ. ಆಸ್ತಿ ವಿಚಾರದಲ್ಲಿ ದುಡುಕಿನ ನಿರ್ಧಾರ ಬೇಡ. ಕುಸುರಿ ಕೆಲಸಕ್ಕೆ ಬೇಡಿಕೆ ಹೆಚ್ಚಲಿದೆ. (ಶುಭಸಂಖ್ಯೆ: 7)
ಧನಸ್ಸು: ಕೇಂದ್ರ ಸರ್ಕಾರಿ ಸಂಸ್ಥೆಯ ಉದ್ಯೋಗಿಗಳಿಗೆ ವರ್ಗಾವಣೆ. ಅಪರಿಚಿತರ ಬಗ್ಗೆ ಎಚ್ಚರ. ಜಲ ಉತ್ಪನ್ನಗಳ ವ್ಯಾಪಾರದಲ್ಲಿ ಲಾಭ. (ಶುಭಸಂಖ್ಯೆ: 7)
ಮಕರ: ಯಕ್ಷಗಾನ, ನಾಟ್ಯ ಕಲಾವಿದರಿಗೆ ಉತ್ತಮ ವೇದಿಕೆ ಸಿಗಲಿದೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ. ಆರ್ಥಿಕ ಬಿಕ್ಕಟ್ಟು ಬಗೆಹರಿಯಲಿದೆ. (ಶುಭಸಂಖ್ಯೆ: 4)
ಕುಂಭ: ಅಡಿಕೆ ಬೆಳೆಗಾರರಿಗೆ ಹೆಚ್ಚಿನ ಆದಾಯದ ಅವಕಾಶ. ವಿಜ್ಞಾನ ಸಂಶೋಧಕರಿಗೆ ಉತ್ತಮ ಅವಕಾಶ. ಶಿಕ್ಷಕರಿಗೆ ಅನಗತ್ಯ ತಿರುಗಾಟ. (ಶುಭಸಂಖ್ಯೆ: 5)
ಮೀನ: ರಾಜಕೀಯದವರಿಗೆ ಉನ್ನತ ಸ್ಥಾನ ದೊರೆಯಲಿದೆ. ವಾಣಿಜ್ಯ ವ್ಯವಹಾರದಲ್ಲಿ ಯಶಸ್ಸು. ಅಧಿಕಾರಿಗಳೊಂದಿಗೆ ವಿದೇಶ ಪ್ರಯಾಣ. (ಶುಭಸಂಖ್ಯೆ: 8)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net