ಮೇಷ: ಸಾಮಾಜಿಕ ಕೆಲಸಗಳಿಂದ ಹೆಸರುಗಳಿಸುವಿರಿ. ಕುಟುಂಬದಲ್ಲಿ ಶುಭ ಕಾರ್ಯಕ್ಕೆ ಚಾಲನೆ. ಆತ್ಮಗೌರವಕ್ಕಾಗಿ ಪದವಿ ತ್ಯಾಗ. ಶುಭಸಂಖ್ಯೆ: 8.ವೃಷಭ: ಬಂಧುಗಳಿಂದ ಆರ್ಥಿಕ ಸಹಾಯ. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ. ವಿದೇಶ ಪ್ರಯಾಣದ ಅಡೆ-ತಡೆ ನಿವಾರಣೆ. ಶುಭಸಂಖ್ಯೆ: 2.ಮಿಥುನ: ನಿರೀಕ್ಷಿತ ಪ್ರಯಾಣ ರದ್ದಾಗಲಿದೆ. ಪ್ರೀತಿ- ಪ್ರೇಮ ಗಳ ವಿಷಯಕ್ಕೆ ಹಿರಿಯರ ಸಮ್ಮತಿ ಅಗತ್ಯ. ಆಸ್ತಿ ವಿವಾದ ಬಗೆಹರಿಯಲಿದೆ. ಶುಭಸಂಖ್ಯೆ: 2.ಕಟಕ: ಸಾಲ ತೀರಿಸಲು ಆರ್ಥಿಕ ಮೂಲ ಒದಗಲಿದೆ. ಕೃಷಿ ಜಮೀನು ಖರೀದಿಗೆ ಆಸಕ್ತಿ. ಸಹೋದರಿಯ ಸಹಾಯದಿಂದ ಋಣಮುಕ್ತಿ ಶುಭಸಂಖ್ಯೆ: 2.ಸಿಂಹ: ಸಿನಿಮಾ ಛಾಯಾಗ್ರಾಹಕರಿಗೆ ಧನಲಾಭ. ಉದ್ಯೋಗಸ್ಥ ಮಹಿಳೆಯರಿಗೆ ಶುಭದಿನ. ರೇಷ್ಮೆ ವಸ್ತ್ರಗಳ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 6.ಕನ್ಯಾ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ. ತಾಯಿಯ ಆರೋಗ್ಯದಲ್ಲಿ ಸುಧಾರಣೆ. ಕಟ್ಟಡ ಸಾಮಗ್ರಿಗಳ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 8.ತುಲಾ: ನಿಮ್ಮಲ್ಲಿರುವ ಪ್ರತಿಭೆಗೆ ಸೂಕ್ತ ಪುರಸ್ಕಾರ ಸಿಗಲಿದೆ. ಮಾರಾಟಕ್ಕಿಟ್ಟ ಆಸ್ತಿಯಿಂದ ಲಾಭ. ಪದವಿ ಪ್ರಾಪ್ತಿಯಲ್ಲಿದ್ದ ಅಡ್ಡಿ ನಿವಾರಣೆ. ಶುಭಸಂಖ್ಯೆ: 5.ವೃಶ್ಚಿಕ: ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಹಿರಿಯರ ಮಾರ್ಗದರ್ಶನ. ಅಧಿಕ ಮೊತ್ತದ ಹಣಪ್ರಾಪ್ತಿ. ನಿವೇಶನ ಖರೀದಿಗೆ ನಿರ್ಧಾರ. ಶುಭಸಂಖ್ಯೆ: 9 .ಧನಸ್ಸು: ಆತ್ಮೀಯರಿಂದ ಹಣದ ಸಹಾಯ. ದೇವತಾ ಕಾರ್ಯಗಳಲ್ಲಿ ವಿಶೇಷ ಆಸಕ್ತಿ ತಾಳುವಿರಿ. ಬಟ್ಟೆ ವ್ಯಾಪಾರಸ್ಥರಿಗೆ ಲಾಭ ಗಳಿಕೆ. ಶುಭಸಂಖ್ಯೆ: 3 .ಮಕರ: ಮಕ್ಕಳ ಸಾಧನೆಗೆ ಸರ್ಕಾರದಿಂದ ಪುರಸ್ಕಾರ. ಪ್ರಿಯರ ಭೇಟಿ. ದಿನಾಂತ್ಯದಲ್ಲಿ ದೂರ ಪ್ರಯಾಣ. ವಿದೇಶದಿಂದ ಮಕ್ಕಳ ಆಗಮನ.ಶುಭಸಂಖ್ಯೆ: 4.ಕುಂಭ: ವಿವಾಹದ ಪ್ರಯತ್ನ ಕೊನೆಗೂ ಯಶಸ್ವಿ. ಭವಿಷ್ಯದ ಚಿಂತನೆಗಳು ಕಾರ್ಯರೂಪಕ್ಕೆ ಬರಲಿವೆ. ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ. ಶುಭಸಂಖ್ಯೆ: 2.ಮೀನ: ವಾಹನ ದುರಸ್ತಿಗೆ ಹಣ. ಲೇಖಕರು ಮತ್ತು ನಗೆ ಬರಹಗಾರರಿಗೆ ಬೇಡಿಕೆ ಹೆಚ್ಚಲಿದೆ. ಸಿದ್ಧ ಉಡುಪುಗಳ ವ್ಯಾಪಾರದಲ್ಲಿ ಪ್ರಗತಿ. ಶುಭಸಂಖ್ಯೆ: 6