ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ವೃತ್ತಿಯಲ್ಲಿ ಹೊಸ ಅವಕಾಶಗಳು ಕಾಣಿಸಿಕೊಳ್ಳುತ್ತವೆ

Nitya Bhavishya
Nitya Bhavishya
Published on
ಮೇಷ: ವೃತ್ತಿಯಲ್ಲಿ ಹೊಸ ಅವಕಾಶಗಳು ಕಾಣಿಸಿಕೊಳ್ಳುತ್ತವೆ. ಸಾಮಾಜಿಕ ಕೆಲಸದಲ್ಲಿ ನಿರೀಕ್ಷಿತ ಪ್ರಗತಿ. ಐಟಿ ಕ್ಷೇತ್ರದ ಒತ್ತಡ ಹೆಚ್ಚಾಗಬಹುದು. ಶುಭಸಂಖ್ಯೆ: 9
ವೃಷಭ: ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆ. ಸರ್ಕಾರಿ ಕೆಲಸದಲ್ಲಿ ಪ್ರಭಾವಿಗಳ ಸಹಾಯ. ಐಟಿ ಕೆಲಸದಲ್ಲಿ ಸಹವರ್ತಿಗಳಿಂದ ಪ್ರಶಂಸೆ. ಶುಭಸಂಖ್ಯೆ: 2
ಮಿಥುನ: ಆಸ್ತಿ ಖರೀದಿಯಲ್ಲಿ ವಿಳಂಬ. ಐಟಿ ಕ್ಷೇತ್ರದಲ್ಲಿ ಹೊಸಕಲಿಕೆ. ಲೇವಾದೇವಿ ವ್ಯಾಪಾರದಲ್ಲಿ ಎಚ್ಚರ. ಕಿರುತೆರೆಯಲ್ಲಿ ಸಣ್ಣ ಅವಕಾಶ. ಶುಭಸಂಖ್ಯೆ:5
ಕಟಕ: ಉದ್ಯೋಗದಲ್ಲಿ ಸ್ಥಿರತೆ. ಆಡಳಿತ ವಿಭಾಗದಲ್ಲಿ ಲಾಭ ಬರಲಿದೆ. ಐಟಿ ಕ್ಷೇತ್ರದಲ್ಲಿ ಪ್ರಗತಿ. ಪಾಲುದಾರಿಕೆ ವ್ಯಾಪಾರದಲ್ಲಿ ಒಳ್ಳೆಯ ಫಲ. ಶುಭಸಂಖ್ಯೆ:7
ಸಿಂಹ: ವೃತ್ತಿಯಲ್ಲಿ ಒತ್ತಡ ಹೆಚ್ಚಾದೀತು. ಕೃಷಿಯಲ್ಲಿ ಪ್ರಗತಿ ಸಾಧಿಸುವಿರಿ. ಸಂಗೀತ ಸಂಯೋಜನೆಯಲ್ಲಿ ಸಾಧನೆ. ಆರೋಗ್ಯದಲ್ಲಿ ಜಾಗ್ರತೆ. ಶುಭಸಂಖ್ಯೆ:3
ಕನ್ಯಾ: ವೃತ್ತಿಯಲ್ಲಿ ಯಶಸ್ಸು. ಸರ್ಕಾರಿ ಕೆಲಸದಲ್ಲಿ ಶುಭ. ಸಾಂಪ್ರದಾಯಿಕ ಉದ್ಯಮದಲ್ಲಿ ಉತ್ತಮ ಅವಕಾಶ. ಜೇನುಕೃಷಿಯಲ್ಲಿ ಲಾಭ. ಶುಭಸಂಖ್ಯೆ:8
ತುಲಾ: ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ. ಸರ್ಕಾರಿ ಕೆಲಸ ನಿಧಾನ. ಐಟಿ ಕ್ಷೇತ್ರದಲ್ಲಿ ಒತ್ತಡ. ಪಾಲುದಾರಿಕೆಯಲ್ಲಿ ತಾಳ್ಮೆ ಮುಖ್ಯ. ಶುಭಸಂಖ್ಯೆ:2
ವೃಶ್ಚಿಕ: ಧೈರ್ಯದಿಂದಾಗಿ ಮೇಲಧಿಕಾರಿಗಳ ಪ್ರಶಂಸೆ ಗಳಿಸುವಿರಿ. ಉದ್ಯೋಗದಲ್ಲಿ ಪ್ರಗತಿ. ಧಾರಾವಾಹಿ ನಿರ್ದೇಶಕರಿಗೆ ಅಧಿಕ ಧನ ಲಾಭ. ಶುಭಸಂಖ್ಯೆ:3
ಧನಸ್ಸು: ಉದ್ಯೋಗದಲ್ಲಿ ಹೊಸ ಅವಕಾಶ. ಸರ್ಕಾರಿ ಕೆಲಸದಲ್ಲಿ ಮುನ್ನಡೆ. ಸಗಟು ವ್ಯವಹಾರದಲ್ಲಿ ಲಾಭ. ಅಡಿಕೆ ಕೃಷಿಯಲ್ಲಿ ಉತ್ತಮ ಫಲ.ಶುಭಸಂಖ್ಯೆ:8
ಮಕರ: ವೃತ್ತಿಯಲ್ಲಿ ಸ್ಥಿರತೆ ಕಾಯ್ದುಕೊಳ್ಳಿ. ಉದ್ಯೋಗ ಕ್ಷೇತ್ರದಲ್ಲಿ ಜವಾಬ್ದಾರಿ ಹೆಚ್ಚಳ. ಐಟಿ ಕ್ಷೇತ್ರದಲ್ಲಿ ಒತ್ತಡ. ಸರ್ಕಾರಿ ಟೆಂಡರ್ ಸಿಗಲಿದೆ. ಶುಭಸಂಖ್ಯೆ:9
ಕುಂಭ: ಹೊಸ ಉದ್ಯೋಗದಲ್ಲಿ ಮೆಚ್ಚುಗೆ. ಕಚೇರಿ ಕೆಲಸದಲ್ಲಿ ಶುಭ. ರೇಷ್ಮೆ ಕೃಷಿಯಲ್ಲಿ ಯಶಸ್ಸು. ವೈದ್ಯಕೀಯ ನೌಕರರಿಗೆ ವರ್ಗಾವಣೆ. ಶುಭಸಂಖ್ಯೆ:2
ಮೀನ: ವೃತ್ತಿಯಲ್ಲಿ ನಿಮ್ಮ ಉದ್ಯೋಗಕ್ಕೆ ಪ್ರಶಂಸೆ ಸಿಗಲಿದೆ. ಧಾರ್ವಿುಕ ಕ್ಷೇತ್ರದಲ್ಲಿ ಮಿಶ್ರ ಫಲ. ಕಮಿಷನ್ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. ಶುಭಸಂಖ್ಯೆ: 4
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net