ಮೇಷ: ಕ್ರೀಡಾಪಟುಗಳಿಗೆ ಶುಭದಿನ. ಕೋರ್ಟ್ ಕಚೇರಿ ವ್ಯವಹಾರದಲ್ಲಿ ಜಯ ನಿಮ್ಮ ಕಡೆಗಿದೆ. ಉದ್ಯೋಗ ಬದಲಾಯಿಸುವ ಸಾಧ್ಯತೆ. ಶುಭಸಂಖ್ಯೆ: 9.ವೃಷಭ: ವಿವಾಹದ ಅಪೇಕ್ಷಿತರಿಗೆ ಶುಭದಾಯಕ ಸುದ್ದಿ ದೊರೆಯಲಿದೆ. ವಾಹನ ಮಾಲೀಕರಿಗೆ ಉತ್ತಮ ಆದಾಯ. ಲೋಹಗಳಿಂದ ಲಾಭ. ಶುಭಸಂಖ್ಯೆ: 9.ಮಿಥುನ: ತೀರ್ಥಯಾತ್ರೆಯ ಯೋಗ. ಶತ್ರುಗಳನ್ನು ನಿಗ್ರಹಿಸುವ ಶಕ್ತಿ ಪ್ರದರ್ಶಿಸುವಿರಿ. ಸಹೋದರರಿಂದ ಆರ್ಥಿಕ ಸಹಕಾರ ಸಿಗುವುದು. ಶುಭಸಂಖ್ಯೆ: 8.ಕಟಕ: ಅಮೂಲ್ಯವಾದ ವಸ್ತುಗಳನ್ನು ಖರೀದಿಸುವಿರಿ. ಪತ್ನಿಗೆ ಉದ್ಯೋಗದಲ್ಲಿ ಬಡ್ತಿ ದೊರೆಯುವುದು. ಕಾರ್ಯ ಸಾಧನೆಗಾಗಿ ತಿರುಗಾಟ. ಶುಭಸಂಖ್ಯೆ: 7.ಸಿಂಹ: ಹೋಟೆಲ್ ಮಾಲೀಕರಿಗೆ ಹಣಕಾಸಿನಲ್ಲಿ ತೃಪ್ತಿದಾಯಕ. ಕುಟುಂಬದಲ್ಲಿ ಅಹಿತಕರ ಘಟನೆ. ದೂರದ ಸಂಬಂಧಿಗಳಿಂದ ಸಹಾಯ. ಶುಭಸಂಖ್ಯೆ: 3.ಕನ್ಯಾ: ಪತ್ನಿಗೆ ಉದ್ಯೋಗ ಲಭ್ಯ. ಪ್ರಯಾಣದಿಂದ ಆರೋಗ್ಯಕ್ಕೆ ತೊಂದರೆಯಾಗುವ ಸಾಧ್ಯತೆ. ತರಕಾರಿ, ಹಣ್ಣು ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 9.ತುಲಾ: ತಂದೆಯ ಆರೋಗ್ಯದಲ್ಲಿ ಚೇತರಿಕೆ. ನ್ಯಾಯಾಲಯದ ವ್ಯವಹಾರ ಯಶಸ್ವಿಯಾಗಲಿದೆ. ಯುವಕರಿಗೆ ಸಾಹಸ ಕಾರ್ಯದತ್ತ ಆಸಕ್ತಿ. ಶುಭಸಂಖ್ಯೆ: 2.ವೃಶ್ಚಿಕ: ತಲೆನೋವಿನಿಂದ ಕಿರಿಕಿರಿಯಾಗುವುದು. ಪ್ರಯಾಣದಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಮಕ್ಕಳ ಪ್ರಗತಿಯಿಂದ ಸಂತಸ. ಶುಭಸಂಖ್ಯೆ: 1.ಧನುಸ್ಸು: ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ಯಶ ಸಿಗಲಿದೆ. ನೆರೆಹೊರೆಯವರಿಂದ ಸಹಾಯ. ದುಡುಕಿನ ನಿರ್ಧಾರದಿಂದ ತೊಂದರೆ. ಶುಭಸಂಖ್ಯೆ: 3.ಮಕರ: ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಸಹೋದರರೊಂದಿಗೆ ಒಪ್ಪಂದ. ಭೂ ವ್ಯವಹಾರದಲ್ಲಿ ಲಾಭ. ಪ್ರೇಮಿಗಳ ಕನಸು ನನಸಾಗಲಿದೆ. ಶುಭಸಂಖ್ಯೆ: 3.ಕುಂಭ: ಪ್ರಭಾವಿ ವ್ಯಕ್ತಿಗಳ ಸಂಪರ್ಕ. ಧಾರ್ಮಿಕ ಕಾರ್ಯಗಳಲ್ಲಿ ಮನಶ್ಶಾಂತಿ ಕಾಣುವಿರಿ. ನಿಂತ ಕಾರ್ಯ ಮುಂದುವರಿಯುವುದು. ಶುಭಸಂಖ್ಯೆ: 2.ಮೀನ: ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳುವಿರಿ. ಬಂಧುಗಳ ಆಗಮನದಿಂದ ಸಂತಸ. ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುವಿರಿ. ಶುಭಸಂಖ್ಯೆ: 3