ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು

Nitya Bhavishya
Nitya Bhavishya
Published on
ಮೇಷ: ಸಾಹಿತಿಗಳು ಮತ್ತು ಪತ್ರಕರ್ತರಿಗೆ ಶುಭದಿನ. ಬಂಧು ವರ್ಗದವರ ಸಹಕಾರ ದೊರೆಯಲಿದೆ. ಕುಟುಂಬದಲ್ಲಿ ವಿಶ್ವಾಸ ವೃದ್ಧಿ. ಶುಭಸಂಖ್ಯೆ: 8
ವೃಷಭ: ಹಳೆಯ ಸ್ನೇಹಿತರ ಅಪರೂಪದ ಸಮಾಗಮದಿಂದ ಸಂತೋಷ. ಸ್ವಂತ ಉದ್ಯಮದಲ್ಲಿ ಪ್ರಗತಿ ಸರ್ಕಾರಿ ಕ್ಷೇತ್ರದಲ್ಲಿ ಗೌರವ ಪ್ರಾಪ್ತಿ. ಶುಭಸಂಖ್ಯೆ: 7
ಮಿಥುನ: ಪ್ರಭಾವಿಗಳ ಸಂಪರ್ಕ. ಉನ್ನತ ವಿದ್ಯಾಭ್ಯಾಸದ ಕನಸು ನನಸಾಗಲಿದೆ. ಜಲ ಸಂಪನ್ಮೂಲಗಳ ಇಲಾಖೆಯವರಿಗೆ ವರ್ಗಾವಣೆ. ಶುಭಸಂಖ್ಯೆ: 7
ಕಟಕ: ದೂರ ಪ್ರಯಾಣ ಕೈಗೊಳ್ಳುವ ಸಂಭವ. ಆಧ್ಯಾತ್ಮಿಕ ಚಿಂತನೆಯತ್ತ ಒಲವು. ಸ್ವಂತ ಪ್ರಯತ್ನದಿಂದ ಧನಾರ್ಜನೆ ಮಾಡುವಿರಿ. ಶುಭಸಂಖ್ಯೆ: 6
ಸಿಂಹ: ನ್ಯಾಯಾಲಯದಲ್ಲಿ ಮುನ್ನಡೆ. ದಾಂಪತ್ಯ ಜೀವನದಲ್ಲಿದ್ದ ಭಿನ್ನಾಭಿಪ್ರಾಯ ನಿವಾರಣೆ. ವೈದ್ಯರ ಸಲಹೆಯಂತೆ ಚಿಕಿತ್ಸೆ ಸಾಧ್ಯತೆ. ಶುಭಸಂಖ್ಯೆ: 2
ಕನ್ಯಾ: ಬಾಹ್ಯಾಕಾಶ ಸಂಸ್ಥೆಯ ಉದ್ಯೋಗಿಗಳಿಗೆ ಬಡ್ತಿ. ವೀಸಾ ಸಮಸ್ಯೆ ಪರಿಹಾರ. ಕಾನೂನು, ವಾಣಿಜ್ಯ ವಿದ್ಯಾರ್ಥಿಗಳಿಗೆ ಪ್ರಗತಿ. ಶುಭಸಂಖ್ಯೆ: 8
ತುಲಾ: ಸಂಗಾತಿಯ ಆರೋಗ್ಯ ಸುಧಾರಣೆಯಾಗುವುದು. ದಾನ ಧರ್ಮ ಮಾಡುವ ಅವಕಾಶ. ಕೃಷಿ ಜಮೀನು ಖರೀದಿಗೆ ನಿರ್ಧಾರ. ಶುಭಸಂಖ್ಯೆ: 1
ವೃಶ್ಚಿಕ: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು. ವ್ಯಾಪಾರದಲ್ಲಿ ದಾಕ್ಷಿಣ್ಯದಿಂದ ನಷ್ಟ. ಸ್ನೇಹಿತರ ನೆರವಿಂದ ಆರ್ಥಿಕ ಸಮಸ್ಯೆ ನಿವಾರಣೆ. ಶುಭಸಂಖ್ಯೆ: 5
ಧನಸ್ಸು: ಗ್ರಂಥಿಗೆ ಅಂಗಡಿ ಮಾಲೀಕರಿಗೆ ಲಾಭ. ಪಾಲುದಾರಿಕೆ ವ್ಯವಹಾರದಲ್ಲಿ ನಿರೀಕ್ಷಿತ ಪ್ರಗತಿ. ಪತ್ರಕರ್ತರಿಗೆ ಪ್ರಭಾವಿಗಳಿಂದ ಸಹಾಯ. ಶುಭಸಂಖ್ಯೆ: 9
ಮಕರ: ಸಾಂಪ್ರದಾಯಿಕ ಚಿಕಿತ್ಸಕರಿಗೆ ಬೇಡಿಕೆ. ಮೊಬೈಲ್​ ಮತ್ತು ಟಿವಿ ವ್ಯಾಪಾರದಲ್ಲಿ ಲಾಭ. ದೈಹಿಕ ಕಸರತ್ತಿನ ಶಿಕ್ಷಕರಿಗೆ ಬೇಡಿಕೆ. ಶುಭಸಂಖ್ಯೆ: 2
ಕುಂಭ: ನಿವೇಶನ ಖರೀದಿ ಮಾಡಲು ಸಕಾಲ. ಅವಿವಾಹಿತರಿಗೆ ವಿವಾಹ ಕೂಡಿ ಬರುತ್ತದೆ. ಬದಲಾದ ಕೃಷಿಯಿಂದ ಹಣ ಗಳಿಸುವಿರಿ. ಶುಭಸಂಖ್ಯೆ: 7
ಮೀನ: ಉದ್ಯೋಗಸ್ಥ ಮಹಿಳೆಯರಿಗೆ ಶುಭದಿನ. ಸಗಟು ವ್ಯಾಪಾರದಲ್ಲಿ ಲಾಭ. ಧಾರ್ಮಿಕ ಮುಖಂಡರು ವಂಚನೆಗೆ ಒಳಗಾದೀರಿ. ಶುಭಸಂಖ್ಯೆ: 2
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net