

ಮೇಷ: ಕಚೇರಿ ಕೆಲಸ ಒತ್ತಡ ರಹಿತವಾಗಿರುತ್ತದೆ. ಮನೆಯಲ್ಲಿನ ಚಿಕ್ಕ ಗೊಂದಲಕ್ಕೆ ಪರಿಹಾರ. ಸಂಗಾತಿಯ ಮಾತನ್ನು ಶಾಂತವಾಗಿ ಕೇಳಿ. ಶುಭಸಂಖ್ಯೆ: 6
ವೃಷಭ: ಹಣದ ವಿಚಾರದಲ್ಲಿ ಟೆನ್ಷನ್ ಬೇಡ. ಹೊಸ ಕೃಷಿಯಲ್ಲಿ ಲಾಭದ ಗಳಿಕೆ ಸುಧಾರಣೆ. ದೂರದ ಸಂಬಂಧಿಕರಿಂದ ಒಳ್ಳೆಯ ಸುದ್ದಿ. ಶುಭಸಂಖ್ಯೆ: 4
ಮಿಥುನ: ಹೊಸ ಕೆಲಸ ಶುರು ಮಾಡಲು ಶುಭದಿನ. ಗೆಳೆಯರಿಂದ ಧನಸಹಾಯ ಸಿಗಲಿದೆ. ಪ್ರಮುಖ ಮಾಹಿತಿಯನ್ನು ಕಲೆ ಹಾಕಲಿದ್ದೀರಿ. ಶುಭಸಂಖ್ಯೆ: 9
ಕರ್ಕಾಟಕ: ಮನೆಯ ವಿಷಯಕ್ಕೆ ಜಾಸ್ತಿ ಗಮನ ಕೊಡಿ. ಸಹೋದ್ಯೋಗಿಗಳ ಸಹಾಯದಿಂದ ಯಶಸ್ವಿಯಾಗಿ ಜವಾಬ್ದಾರಿ ನಿರ್ವಹಿಸುವಿರಿ. ಶುಭಸಂಖ್ಯೆ: 4
ಸಿಂಹ: ನೂತನ ಕೆಲಸವನ್ನು ಉತ್ಸಾಹದಿಂದ ನಿರ್ವಹಿಸಿದರೆ ಯಶಸ್ಸು ಖಂಡಿತ ಸಿಗಲಿದೆ. ಹೊಸ ಯೋಜನೆಗಳ ಪ್ರಾರಂಭಕ್ಕೆ ಶುಭದಿನ. ಶುಭಸಂಖ್ಯೆ: 2
ಕನ್ಯಾ: ಒಳ್ಳೆಯದಾಗಲಿ ಕೆಟ್ಟದ್ದಾಗಲಿ, ಚಿಂತಿಸದೆ ಮುಂದಕ್ಕೆ ಹೋಗಿ. ಪ್ರತಿಭೆಗೆ ಸೂಕ್ತ ಅವಕಾಶ. ನೂತನ ಮನೆ ಖರೀದಿಗೆ ಸುಸಮಯ. ಶುಭಸಂಖ್ಯೆ: 8
ತುಲಾ: ಸಾಲ ತೀರಿಸಲು ಸಂಗಾತಿಯಿಂದ ಅಗತ್ಯ ಸಹಕಾರ. ಹಳೆಯ ಸ್ನೇಹಿತರ ಜೊತೆ ಔತಣಕೂಟ. ಹಣಕಾಸಿನಲ್ಲಿ ಸ್ಥಿರತೆ ಇರಲಿದೆ. ಶುಭಸಂಖ್ಯೆ: 9
ವೃಶ್ಚಿಕ: ವಾಣಿಜ್ಯ ನಿವೇಶನಗಳ ತಕರಾರು ಇತ್ಯರ್ಥ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಧೈರ್ಯದಿಂದ ನಡೆದುಕೊಂಡರೆ ಯಶಸ್ಸು ಖಚಿತ. ಶುಭಸಂಖ್ಯೆ: 4
ಧನುಸ್ಸು: ಹೃದಯದ ಆರೋಗ್ಯದತ್ತ ಗಮನ ಕೊಡಿ. ಆಸ್ತಿ ನೋಂದಣಿ ಮುಂದೂಡುವುದು ಕ್ಷೇಮ. ತರಕಾರಿ, ಹಣ್ಣು ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 3
ಮಕರ: ಕಿರುಚಿತ್ರ ನಿರ್ದೇಶಕರಿಗೆ ಧನಲಾಭ. ಸರ್ಕಾರಿ ಕೆಲಸಗಳಲ್ಲಿ ತಡವಾದರೂ ಅಂತಿಮ ಫಲ ಒಳ್ಳೆಯದೇ. ಅಡಿಕೆ ಕೃಷಿಯಲ್ಲಿ ಲಾಭ. ಶುಭಸಂಖ್ಯೆ: 1
ಕುಂಭ: ತೆಂಗಿನಕಾಯಿ ಸಗಟು ಮಾರಾಟದಲ್ಲಿ, ವಕೀಲರಿಗೆ ಅನಿರೀಕ್ಷಿತ ಹಣ ಬರಲಿದೆ. ಸಂಜೆಯ ವೇಳೆಗೆ ಶುಭ ಸುದ್ದಿ ಬರಬಹುದು. ಶುಭಸಂಖ್ಯೆ: 4
ಮೀನ: ಮನೆಯಲ್ಲಿ ಶುಭಕಾರ್ಯದ ಸೂಚನೆ. ಕಲೆ, ಸಂಗೀತ, ಪತ್ರಕರ್ತ ವೃತ್ತಿಯವರಿಗೆ ಒಳ್ಳೆಯ ದಿನ. ಷೇರು ಹೂಡಿಕೆಗೆ ಸುಸಮಯ. ಶುಭಸಂಖ್ಯೆ: 1