ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಕುಟುಂಬದ ಆಸ್ತಿ ಕಲಹ ಬಗೆಹರಿಯಲಿದೆ

Nitya Bhavishya
Nitya Bhavishya
Published on
ಮೇಷ: ತಾಂತ್ರಿಕ ಮತ್ತು ವೈದ್ಯಕೀಯ ಕ್ಷೇತ್ರದವರಿಗೆ ಶುಭದಿನ. ಚಲನಚಿತ್ರ ನಿರ್ಮಾಪಕರಿಗಿದ್ದ ಆರ್ಥಿಕ ಸಮಸ್ಯೆ ಪರಿಹಾರವಾಗಲಿದೆ. ಶುಭಸಂಖ್ಯೆ: 8
ವೃಷಭ: ಆಹಾರಧಾನ್ಯ ಮಾರಾಟದಲ್ಲಿ ಅಭಿವೃದ್ಧಿ. ತೆಂಗಿನಕಾಯಿ ವ್ಯಾಪಾರದಲ್ಲಿ ಲಾಭ. ಹೊಸದಾಗಿ ಪ್ರಾರಂಭಿಸಿದ ಉದ್ಯಮದಲ್ಲಿ ಪ್ರಗತಿ. ಶುಭಸಂಖ್ಯೆ: 8
ಮಿಥುನ: ಕಲಾವಿದರಿಗೆ ವಿಶೇಷ ಗೌರವ ಸಿಗಲಿದೆ. ಅಧ್ಯಾಪಕರಿಗೆ ವರ್ಗಾವಣೆ ಸಾಧ್ಯತೆ. ಶೈಕ್ಷಣಿಕ ಪದಾರ್ಥಗಳ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 1
ಕಟಕ: ದಾಂಪತ್ಯದಲ್ಲಿನ ವಿರಸ ಅಂತ್ಯ. ನ್ಯಾಯಾಲಯದಲ್ಲಿದ್ದ ಆಸ್ತಿ ವಿವಾದ ಇತ್ಯರ್ಥ. ನೂತನ ಗೃಹ ನಿರ್ಮಾಣಕ್ಕೆ ಚಾಲನೆ. ಶುಭಸಂಖ್ಯೆ: 4
ಸಿಂಹ: ಸ್ನೇಹಿತರೊಂದಿಗೆ ಔತಣಕೂಟಕ್ಕೆ ಅಧಿಕ ಖರ್ಚು. ಸಗಟು ವ್ಯಾಪಾರದಲ್ಲಿ ಲಾಭ. ತಾಂತ್ರಿಕ ಪದವೀಧರರಿಗೆ ಉದ್ಯೋಗ ಭಾಗ್ಯ. ಶುಭಸಂಖ್ಯೆ: 3
ಕನ್ಯಾ: ಪತ್ರಕರ್ತರಿಗೆ ಕೆಲಸದ ಒತ್ತಡ. ಪ್ರಮುಖ ನಿರ್ಧಾರ ಕೈಗೊಳ್ಳುವಲ್ಲಿ ಗೊಂದಲ. ಉದ್ಯಮಸ್ಥ ಮಹಿಳೆಯರಿಗೆ ಆರ್ಥಿಕ ಸಮಸ್ಯೆ. ಶುಭಸಂಖ್ಯೆ: 1
ತುಲಾ: ಕೃಷಿಕರಿಗೆ ಕೆಲಸಗಾರರ ಅಭಾವ. ಎಲೆಕ್ಟ್ರಾನಿಕ್ಸ್ ಉಪಕರಣ ಉತ್ಪಾದಕರಿಗೆ ಲಾಭ. ಜನಪದ ಸಂಗೀತ ಕಲಾವಿದರಿಗೆ ಪುರಸ್ಕಾರ. ಶುಭಸಂಖ್ಯೆ: 9
ವೃಶ್ಚಿಕ: ಪ್ರಭಾವಿಗಳ ಸಹಾಯದಿಂದ ಯಶಸ್ಸು. ಕೇಂದ್ರ ಸರ್ಕಾರದ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ. ಕುಟುಂಬದಲ್ಲಿ ಅನಿರೀಕ್ಷಿತ ಘಟನೆ. ಶುಭಸಂಖ್ಯೆ: 7
ಧನಸ್ಸು: ಅರಣ್ಯ ಉತ್ಪನ್ನಗಳ ಮಾರಾಟದಲ್ಲಿ ಲಾಭ. ಆಟೋಟ ಸ್ಪರ್ಧೆಯಲ್ಲಿ ಜಯ ಪ್ರಾಪ್ತಿ. ಪರಿಶ್ರಮಕ್ಕೆ ತಕ್ಕುದಾದ ಪ್ರತಿಫಲ ಸಿಗಲಿದೆ. ಶುಭಸಂಖ್ಯೆ: 2
ಮಕರ: ಕುಟುಂಬದ ಆಸ್ತಿ ಕಲಹ ಬಗೆಹರಿಯಲಿದೆ. ಸಾಲಗಾರರ ಕಿರಿಕಿರಿಯಿಂದ ಇನ್ನು ಮುಕ್ತಿ ಸಿಗಲಿದೆ. ಚಿಕ್ಕದಾದ ಶಸ್ತ್ರಚಿಕಿತ್ಸೆ ಸಾಧ್ಯತೆ. ಶುಭಸಂಖ್ಯೆ: 9
ಕುಂಭ: ಆಸ್ತಿ ವಿಚಾರಕ್ಕೆ ತಾರ್ಕಿಕ ಅಂತ್ಯ. ಹೊಸ ಕಚೇರಿಯ ನಿರ್ಮಾಣಕ್ಕೆ ಚಾಲನೆ. ವಕೀಲ ವೃತ್ತಿಯಲ್ಲಿ ಅಧಿಕ ಪ್ರಮಾಣದಲ್ಲಿ ಧನಲಾಭ. ಶುಭಸಂಖ್ಯೆ: 5
ಮೀನ: ಉದ್ಯೋಗದಲ್ಲಿ ಅತಂತ್ರತೆ ಕಾಡಲಿದೆ. ಗಾರ್ಮೆಂಟ್ಸ್ ಉದ್ಯಮ, ಸಗಟು ವ್ಯಾಪಾರದಲ್ಲಿ ಲಾಭ. ಸಂಜೆ ವೇಳೆ ಶುಭ ಸುದ್ದಿ. ಶುಭಸಂಖ್ಯೆ: 8
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net