ಮೇಷ: ತಾಂತ್ರಿಕ ಕ್ಷೇತ್ರದಲ್ಲಿ ಪದವಿಗಳಿಸುವಿರಿ. ಮಕ್ಕಳ ವಿಚಾರವಾಗಿ ಗೊಂದಲ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ. ಶುಭಸಂಖ್ಯೆ: 8.ವೃಷಭ: ಮಾತೃ ಮೂಲವಾದ ಆಸ್ತಿಯ ಸಮಸ್ಯೆ ಪರಿಹಾರವಾಗಲಿದೆ. ಸಹೋದ್ಯೋಗಿಗಳಿಂದ ನಿಮ್ಮ ಕಾರ್ಯಕ್ಕೆ ಬೆಂಬಲ ಸಿಗಲಿದೆ. ಶುಭಸಂಖ್ಯೆ: 4.ಮಿಥುನ: ಕುಟುಂಬದ ಸಮಸ್ಯೆ ಇತ್ಯರ್ಥ. ಸ್ನೇಹಿತರ ಸಹಾಯದಿಂದ ಸಾಲ ತೀರಿಸುವಿರಿ. ಅಡಿಕೆ, ಕಾಳು ಮೆಣಸು ಕೃಷಿಕರಿಗೆ ಅಧಿಕ ಲಾಭ. ಶುಭಸಂಖ್ಯೆ: 6.ಕಟಕ: ದವಸ ಧಾನ್ಯ ಮಾಲೀಕರಿಗೆ ಅಧಿಕ ಹಣ ಲಾಭ. ಶುಭ ಸಮಾರಂಭದ ಆಯೋಜಕರಿಗೆ ಬೇಡಿಕೆ. ವಿದೇಶದಿಂದ ಮಕ್ಕಳ ಆಗಮನ. ಶುಭಸಂಖ್ಯೆ: 6.ಸಿಂಹ: ಸಂಗಾತಿಯ ಅನಾರೋಗ್ಯ ಸುಧಾರಿಸಲಿದೆ. ಸ್ವಯಂ ಉದ್ಯೋಗದ ಮಹಿಳೆಯರಿಗೆ ದ್ವಿಗುಣ ಲಾಭ. ಸೇವಾ ಕಾರ್ಯಗಳಲ್ಲಿ ಆಸಕ್ತಿ. ಶುಭಸಂಖ್ಯೆ: 7.ಕನ್ಯಾ: ಸ್ನೇಹಿತರ ಜತೆಗಿನ ಭಿನ್ನಾಭಿಪ್ರಾಯ ನಿವಾರಣೆ. ಬ್ಯಾಂಕ್ ಸಾಲ ಮರುಪಾವತಿಸುವಿರಿ. ವಸ್ತ್ರ ವಿನ್ಯಾಸಕಾರರಿಗೆ ಬೇಡಿಕೆ ಹೆಚ್ಚಲಿದೆ. ಶುಭಸಂಖ್ಯೆ: 6.ತುಲಾ: ಹೊಸ ಉದ್ಯಮಕ್ಕೆ ಆರ್ಥಿಕ ಸಂಪನ್ಮೂಲ ಕ್ರೋಡೀಕರಿಸುವಿರಿ. ಮಹಿಳೆಯರಿಗೆ ಸ್ವಉದ್ಯೋಗ ಆರಂಭಕ್ಕೆ ಸಹಾಯ ಸಿಗಲಿದೆ. ಶುಭಸಂಖ್ಯೆ: 4.ವೃಷ್ಚಿಕ: ಹೊಸ ಮೂಲದಿಂದ ಆದಾಯ. ಆರೋಗ್ಯ ಇಲಾಖೆಯಲ್ಲಿ ಉದ್ಯೋಗ ಪ್ರಾಪ್ತಿ. ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶ ಪ್ರಯಾಣ. ಶುಭಸಂಖ್ಯೆ: 3.ಧನಸ್ಸು: ಮಹಿಳೆಯರಿಗೆ ಉದ್ಯೋಗದಲ್ಲಿ ಬದಲಾವಣೆ. ಲೇವಾದೇವಿ ವ್ಯವಹಾರದಲ್ಲಿ ಲಾಭ. ಸಹಕಾರಿ ಬ್ಯಾಂಕ್‌ನಲ್ಲಿ ಉದ್ಯೋಗ ಲಭ್ಯ. ಶುಭಸಂಖ್ಯೆ: 2.ಮಕರ: ಪಾಲುದಾರಿಕೆಯಲ್ಲಿರುವ ಆಂತರಿಕ ಗೊಂದಲ ಪರಿಹಾರ. ಹಣ ಹೂಡಿಕೆಯಲ್ಲಿ ಎಚ್ಚರವಿರಲಿ. ಆಸ್ತಿ ವಿವಾದ ಕಗ್ಗಂಟಾಗಲಿದೆ. ಶುಭಸಂಖ್ಯೆ: 1.ಕುಂಭ: ಕೃಷಿ ಯಂತ್ರ ಮಾರಾಟದಲ್ಲಿ ಲಾಭ. ಅವಿವಾಹಿತರಿಗೆ ಶುಭ ಸುದ್ದಿ. ಆಸ್ತಿ ವಿಕ್ರಯದಲ್ಲಿ ಲಾಭಗಳಿಸುವಿರಿ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 6.ಮೀನ: ಗಾಯಕರು, ವಾದಕರಿಗೆ ಪುರಸ್ಕಾರ ಸಿಗಲಿದೆ. ಅರ್ಚಕರಿಗೆ ಒತ್ತಡ ಹೆಚ್ಚಾಗಲಿದೆ. ನ್ಯಾಯಾಲಯದ ವಿಚಾರದಲ್ಲಿ ವಿಳಂಬ ಸಾಧ್ಯತೆ. ಶುಭಸಂಖ್ಯೆ: 5