ನಿತ್ಯಭವಿಷ್ಯ: ಈ ರಾಶಿಯವರಿಗಿಂದು ನ್ಯಾಯಾಲಯದ ವ್ಯವಹಾರ ಸುಗಮ

Nitya Bhavishya
Nitya Bhavishya
Published on
ಮೇಷ: ಕುಟುಂಬದಲ್ಲಿ ಆಸ್ತಿ ಮಾತುಕತೆಯ ಮೂಲಕ ಬಗೆಹರಿಯಲಿದೆ. ಸಮಾಜ ಸೇವಕರಿಗೆ ಉನ್ನತ ಸ್ಥಾನಮಾನ. ಪ್ರಿಯ ಜನರ ಭೇಟಿ. ಶುಭಸಂಖ್ಯೆ:5
ವೃಷಭ: ಸ್ಥಿರಾಸ್ತಿ ಮಾರಾಟದಲ್ಲಿ ಸಾಧ್ಯತೆ. ನೌಕರಿಯಲ್ಲಿ ಕಿರಿಕಿರಿ. ವೀಸಾ ಸಮಸ್ಯೆ ಬಗೆಹರಿಯಲಿದೆ. ಸೋಷಿಯಲ್​ ಮೀಡಿಯಾದಲ್ಲಿ ಪ್ರಸಿದ್ಧಿ. ಶುಭಸಂಖ್ಯೆ: 5
ಮಿಥುನ: ನೆರೆಯವರಿಂದ ಆರ್ಥಿಕ ಸಹಾಯ ದೊರೆಯಲಿದೆ. ಸಂಗಾತಿಯ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಬಂಧು ಜನರಲ್ಲಿ ಪ್ರೀತಿ. ಶುಭಸಂಖ್ಯೆ: 9
ಕಟಕ: ಅಧಿಕ ತಿರುಗಾಟ. ಯಾರನ್ನೂ ಜಾಸ್ತಿ ನಂಬಬೇಡಿ. ಧಾರ್ಮಿಕ ಕ್ಷೇತ್ರದವರಿಗೆ ಅನಿರೀಕ್ಷಿತ ಧನಪ್ರಾಪ್ತಿ. ರೇಷ್ಮೆ ಕೃಷಿಕರಿಗೆ ಲಾಭ. ಶುಭಸಂಖ್ಯೆ:8
ಸಿಂಹ: ಕೈ ಹಾಕಿದ ಕೆಲಸಗಳಲ್ಲಿ ವಿಳಂಬ. ಅಪರಿಚಿತರಿಂದ ಮೋಸವಾಗುವ ಸಾಧ್ಯತೆ. ಸ್ನೇಹಿತರಿಂದ ಸಾಲ ತೀರಿಸಲು ಸಹಾಯ ಸಿಗಲಿದೆ. ಶುಭಸಂಖ್ಯೆ: 4
ಕನ್ಯಾ: ಕುಟುಂಬ ಕಲಹ ಬಗೆಹರಿಯಲಿದೆ. ಉದ್ಯೋಗದ ಸ್ಥಳ ಬದಲಾವಣೆ. ವಾಣಿಜ್ಯ ಸಂಕೀರ್ಣದ ಮಾಲೀಕರಿಗೆ ಒತ್ತಡ ಹೆಚ್ಚಲಿದೆ. ಶುಭಸಂಖ್ಯೆ: 8
ತುಲಾ: ನೀರಿನ ಉತ್ಪನ್ನ ಮಾರಾಟದಲ್ಲಿ ಲಾಭ. ಬಟ್ಟೆ ವ್ಯಾಪಾರದಲ್ಲಿ ಅನಿರೀಕ್ಷಿತ ಗಳಿಕೆ. ಆಪ್ತ ಸ್ನೇಹಿತರ ಭೇಟಿ. ಮಕ್ಕಳ ಭವಿಷ್ಯದ ಚಿಂತೆ. ಶುಭಸಂಖ್ಯೆ: 1
ವೃಶ್ಚಿಕ: ಕುಟುಂಬ ಸಮೇತ ಪುಣ್ಯಕ್ಷೇತ್ರ ದರ್ಶನ. ವಿವಾಹಯೋಗ. ಷೇರು ವ್ಯವಹಾರದಲ್ಲಿ ಲಾಭ. ಅಲಂಕಾರಿಕ ವಸ್ತು ಖರೀದಿಗೆ ವ್ಯಯ. ಶುಭಸಂಖ್ಯೆ: 6
ಧನಸ್ಸು: ಯತ್ನ ಕಾರ್ಯದಲ್ಲಿ ಜಯ. ಶ್ರಮಕ್ಕೆ ತಕ್ಕ ಪ್ರತಿಫಲ. ಹೊಸ ಹೂಡಿಕೆದಾರರ ಆಗಮನದಿಂದ ಪ್ರಗತಿ. ಮಹಿಳೆಯರಿಗೆ ಧನಲಾಭ. ಶುಭಸಂಖ್ಯೆ: 3
ಮಕರ: ನ್ಯಾಯಾಲಯದ ವ್ಯವಹಾರ ಸುಗಮ. ಆಹಾರ ಸೇವನೆಯಲ್ಲಿ ಎಚ್ಚರಿಕೆ ಇರಲಿ. ವೈದ್ಯಕೀಯ ವೃತ್ತಿಯಲ್ಲಿ ಹೆಸರುಗಳಿಸುವಿರಿ. ಶುಭಸಂಖ್ಯೆ:4
ಕುಂಭ: ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಿರಿ. ಅನವಶ್ಯಕ ತಿರುಗಾಟ. ಕಚೇರಿಯಲ್ಲಿ ಹೊಸ ಜವಾಬ್ದಾರಿ ಹೆಗಲೇರಲಿದೆ. ಪುಣ್ಯಕ್ಷೇತ್ರ ದರ್ಶನ. ಶುಭಸಂಖ್ಯೆ: 1
ಮೀನ: ಸಕಾಲದಲ್ಲಿ ಹಣ ಲಭ್ಯ. ಅಮೂಲ್ಯ ವಸ್ತು ಖರೀದಿ. ಕೆಲಸದಲ್ಲಿ ಹೆಚ್ಚಿನ ಗಮನವಿರಲಿ. ಕೃಷಿಕರಿಗೆ ಮಧ್ಯವರ್ತಿಗಳಿಂದ ಲಾಭ. ಶುಭಸಂಖ್ಯೆ:3
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net