ನಿತ್ಯಭವಿಷ್ಯ; ಈ ರಾಶಿಯವರಿಗಿಂದು ಸಾಲ ತೀರಿಸಲು ಸ್ನೇಹಿತರಿಂದ ಸಹಾಯ

ನಿತ್ಯಭವಿಷ್ಯ; ಈ ರಾಶಿಯವರಿಗಿಂದು ಸಾಲ ತೀರಿಸಲು ಸ್ನೇಹಿತರಿಂದ ಸಹಾಯ
ನಿತ್ಯಭವಿಷ್ಯ; ಈ ರಾಶಿಯವರಿಗಿಂದು ಸಾಲ ತೀರಿಸಲು ಸ್ನೇಹಿತರಿಂದ ಸಹಾಯ
Published on
ಮೇಷ: ಆಧ್ಯಾತ್ಮಿಕ ಚಿಂತನೆಯತ್ತ ಮನಸ್ಸು. ಧರ್ಮಕಾರ್ಯದಲ್ಲಿ ಆಸಕ್ತಿ. ವಿದೇಶ ಪ್ರಯಾಣ. ಪಿತ್ರಾರ್ಜಿತ ಆಸ್ತಿಯಿಂದ ಅನುಕೂಲ. ಶುಭಸಂಖ್ಯೆ: 5
ವೃಷಭ: ವಾಹನದಿಂದ ಲಾಭ ಗಳಿಸುವಿರಿ. ವೈದ್ಯಕೀಯ ವಿದ್ಯಾಭ್ಯಾಸದಲ್ಲಿ ಪ್ರಗತಿಯಾಗುವುದು. ಭಾಷಣಕಾರರಿಗೆ ಬೇಡಿಕೆ ಹೆಚ್ಚಲಿದೆ. ಶುಭಸಂಖ್ಯೆ: 9
ಮಿಥುನ: ಸ್ವಂತ ಊರಿಗೆ ಪ್ರಯಾಣಿಸುವಿರಿ. ದಾಂಪತ್ಯ ಕಲಹ ಬಗೆಹರಿಯಲಿದೆ. ಮುನ್ನುಗ್ಗುವ ಸ್ವಭಾವದಿಂದ ಕಾರ್ಯ ಸಾಧಿಸಿಕೊಳ್ಳುವಿರಿ. ಶುಭಸಂಖ್ಯೆ: 1
ಕಟಕ: ಉದ್ಯೋಗಸ್ಥಾನದಲ್ಲಿ ಅನುಕೂಲ. ನೇರ ನಡೆನುಡಿಯಿಂದ ಕುಟುಂಬದಲ್ಲಿ ಗೌರವ. ಷೇರು ವ್ಯವಹಾರದಲ್ಲಿ ಧನಲಾಭ. ಶುಭಸಂಖ್ಯೆ: 9
ಸಿಂಹ: ಹೈನುಗಾರಿಕೆಯಲ್ಲಿ ಆದಾಯ. ಸಾಲ ತೀರಿಸಲು ಸ್ನೇಹಿತರಿಂದ ಸಹಾಯ. ಪಾಲುದಾರಿಕೆಯಲ್ಲಿ ಲಾಭ. ಅಂಗಡಿಯವರಿಗೆ ಲಾಭ. ಶುಭಸಂಖ್ಯೆ: 7
ಕನ್ಯಾ: ಶಾಸ್ತ್ರೀಯ ಸಂಗೀತ ಗಾಯಕರಿಗೆ ವೇದಿಕೆ ಸಿಗಲಿದೆ. ವಾಹನ ದುರಸ್ತಿಗಾಗಿ ಖರ್ಚು. ಧರ್ಮಕಾರ್ಯದಲ್ಲಿ ತೊಡಗಿಸಿಕೊಳ್ಳುವಿರಿ. ಶುಭಸಂಖ್ಯೆ: 7
ತುಲಾ: ಖಾಸಗಿ ಕಂಪನಿ ಮಾಲೀಕರಿಗೆ ಶುಭದಿನ. ಪ್ರಯಾಣದಲ್ಲಿ ಪ್ರಭಾವಿ ವ್ಯಕ್ತಿಗಳ ಭೇಟಿ. ಕೋರ್ಟ್ ಕೆಲಸದಲ್ಲಿ ಜಯ ಸಿಗಲಿದೆ. ಶುಭಸಂಖ್ಯೆ: 7
ವೃಶ್ಚಿಕ: ರಾಜ್ಯ ಸರ್ಕಾರಿ ನೌಕರರಿಗೆ ಧನಲಾಭ. ಸಾರ್ವಜನಿಕವಾಗಿ ತಾಳ್ಮೆ ಇರಲಿ. ಪ್ರಭಾವಿ ವ್ಯಕ್ತಿಗಳ ಶಿಫಾರಸಿನಿಂದ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ: 4
ಧನು: ನಿಮ್ಮ ದೂರದೃಷ್ಟಿಯ ಯೋಜನೆ ಜಾರಿಗೆ ಬರಲಿದೆ. ಕೊಟ್ಟ ಹಣ ತಿರುಗಿ ಬರಲಿದೆ. ಆಧ್ಯಾತ್ಮಿಕ ಗ್ರಂಥ ಅಧ್ಯಯನದತ್ತ ಒಲವು. ಶುಭಸಂಖ್ಯೆ: 4
ಮಕರ: ಕೋರ್ಟಿನಲ್ಲಿರುವ ಪ್ರಕರಣದಲ್ಲಿ ವಿಳಂಬ ಕಾಡಲಿದೆ. ಸಂಗಾತಿಯೊಂದಿಗೆ ತಾಳ್ಮೆಯಿಂದ ವರ್ತಿಸಿ. ಇಷ್ಟದೇವರನ್ನು ಭಜಿಸಿ. ಶುಭಸಂಖ್ಯೆ: 2
ಕುಂಭ: ಶುಭಕಾರ್ಯ ಪ್ರಯತ್ನ ವಿಫಲ. ಆತ್ಮಗೌರವದ ನಡವಳಿಕೆ ಇರಲಿದೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಇರಿಸುಮುರಿಸು. ಶುಭಸಂಖ್ಯೆ: 4
ಮೀನ: ಸಾರ್ವಜನಿಕವಾಗಿ ನಿಮ್ಮ ಪ್ರತಿಭೆಗೆ ಆದ್ಯತೆ ಸಿಗಲಿದೆ. ಉದರಸಂಬಂಧಿ ತೊಂದರೆ ಗುಣ. ಬಾಡಿಗೆದಾರರಿಂದ ಅನುಕೂಲ. ಶುಭಸಂಖ್ಯೆ: 8
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net