ನಿತ್ಯಭವಿಷ್ಯ; ಈ ರಾಶಿಯವರಿಗಿಂದು ವಾಹನ ಖರೀದಿಗೆ ಸೂಕ್ತ ಸಮಯ

Nitya Bhavishya
Nitya Bhavishya
Published on
ಮೇಷ: ಕ್ರೀಡಾಪಟುಗಳಿಗೆ ಉತ್ತಮ ಅವಕಾಶ ಸಿಗಲಿದೆ. ಸಗಟು ವ್ಯಾಪಾರದಲ್ಲಿ ಲಾಭ. ವೈಯಕ್ತಿಕ ವಿಷಯಗಳಲ್ಲಿ ಎಚ್ಚರಿಕೆ ಇರಲಿ. ಶುಭಸಂಖ್ಯೆ: 3
ವೃಷಭ: ಸಾಲ ಮರುಪಾವತಿಯಿಂದ ನೆಮ್ಮದಿ. ಗುರಿ ತಲುಪಲು ಇನ್ನೂ ಹೆಚ್ಚಿನ ಶ್ರಮ ಅಗತ್ಯ. ಹಣ ಹೂಡಿಕೆಯಲ್ಲಿ ಪ್ರಗತಿ ಕಾಣಲಿದ್ದೀರಿ. ಶುಭಸಂಖ್ಯೆ: 1
ಮಿಥುನ: ವಿದ್ಯುತ್ ಇಲಾಖೆ ನೌಕರರಿಗೆ ವರ್ಗಾವಣೆ ಸಾಧ್ಯತೆ. ಎಲೆಕ್ಟ್ರಾನಿಕ್ಸ್ ವಸ್ತುಗಳ ಮಾರಾಟದಲ್ಲಿ ಲಾಭ. ಗೃಹ ನಿರ್ಮಾಣದ ನಿರ್ಧಾರ ಕೈಗೊಳ್ಳುವಿರಿ. ಶುಭಸಂಖ್ಯೆ: 8
ಕಟಕ: ಸಹಕಾರಿ ಕ್ಷೇತ್ರದವರಿಗೆ ಸಹಾಯಧನ ಲಭ್ಯ. ಮಗಳ ವಿವಾಹದ ವಿಷಯದಲ್ಲಿ ಸಂಯಮದಿಂದಿರಿ. ಆಸ್ತಿ ವಿಷಯದಲ್ಲಿ ಶುಭ ಫಲ. ಶುಭಸಂಖ್ಯೆ: 8
ಸಿಂಹ: ಕಲಾವಿದರಿಗೆ ವಿದೇಶ ಪ್ರಯಾಣದ ಯೋಗ. ಉದ್ಯೋಗ ಸ್ಥಳದಲ್ಲಿನ ಆಂತರಿಕ ಕಲಹ ಪರಿಹಾರವಾಗಲಿದೆ. ದೂರ ಪ್ರಯಾಣದ ಸಾಧ್ಯತೆ. ಶುಭಸಂಖ್ಯೆ: 2
ಕನ್ಯಾ: ರಾಸಾಯನಿಕ ವಸ್ತುಗಳ ತಯಾರಕರಿಗೆ ಅಧಿಕ ಬೇಡಿಕೆ. ಪ್ರಿಯ ಜನರ ಭೇಟಿ. ವ್ಯವಹಾರದಲ್ಲಿ ಹೆಚ್ಚಿನ ಹಣ ಗಳಿಸುವ ಅವಕಾಶ. ಶುಭಸಂಖ್ಯೆ: 6
ತುಲಾ: ಪುಣ್ಯಕ್ಷೇತ್ರ ದರ್ಶನ. ಅಮೂಲ್ಯ ವಸ್ತುಗಳ ಖರೀದಿ. ಉದ್ಯೋಗಸ್ಥ ಮಕ್ಕಳ ಅಭಿವೃದ್ಧಿಯ ಚಿಂತೆ. ದಿನಾಂತ್ಯದಲ್ಲಿ ಆತ್ಮೀಯರ ಭೇಟಿ. ಶುಭಸಂಖ್ಯೆ: 3
ವೃಶ್ಚಿಕ: ವಾಹನ ಖರೀದಿಗೆ ಸೂಕ್ತ ಸಮಯ. ಕುಟುಂಬ ಕಲಹ ಇತ್ಯರ್ಥ. ಲೆಕ್ಕಪರಿಶೋಧಕ ವೃತ್ತಿಯಲ್ಲಿ ಉತ್ತಮ ಗಳಿಕೆ. ದಂಪತಿಗಳಿಗೆ ಶುಭ. ಶುಭಸಂಖ್ಯೆ: 7
ಧನಸ್ಸು: ಹಣಕಾಸಿನ ವಿಚಾರದಲ್ಲಿ ಪರಿಸ್ಥಿತಿ ಉತ್ತಮವಾಗಿದೆ. ಪ್ರತಿಷ್ಠಿತ ಜನರ ಪರಿಚಯವಾಗಲಿದೆ. ಬಾಕಿ ವಸೂಲಿಯಾದರೂ ಅಪರಿಚಿತರಿಂದ ಮೋಸ ಹೋಗುವ ಸಾಧ್ಯತೆ ಇದೆ, ಎಚ್ಚರ. ಶುಭಸಂಖ್ಯೆ: 3
ಮಕರ: ಪ್ರವಾಸೋದ್ಯಮ ಇಲಾಖೆ ಉದ್ಯೋಗಿಗಳಿಗೆ ವರ್ಗಾವಣೆ. ಐಷಾರಾಮಿ ಜೀವನದ ಆಕರ್ಷಣೆ ಹೆಚ್ಚಲಿದೆ. ಷೇರು ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 3
ಕುಂಭ: ತಾಂತ್ರಿಕ ತಜ್ಞರಿಗೆ ಬೇಡಿಕೆ ಹೆಚ್ಚಲಿದೆ. ವಿದ್ಯಾರ್ಥಿಗಳಿಗೆ ವಿದೇಶ ಪ್ರವಾಸದ ಯೋಗ. ನಿರೀಕ್ಷಿಸಿದಂತೆ ಗೃಹ ನಿರ್ಮಾಣ ಕಾರ್ಯ ಮುಗಿಯಲಿದೆ. ಶುಭಸಂಖ್ಯೆ: 3
ಮೀನ: ವಿದೇಶಿ ವಸ್ತುಗಳ ವ್ಯಾಪಾರದಲ್ಲಿ ಹಿನ್ನಡೆ. ಸರ್ಕಾರಿ ಕೆಲಸದಲ್ಲಿ ಜಯ. ಉದ್ಯೋಗಸ್ಥ ಸ್ತ್ರೀಯರಿಗೆ ಸಹೋದ್ಯೋಗಿಗಳಿಂದ ಸಹಕಾರ. ಶುಭಸಂಖ್ಯೆ: 6
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net