ನಿತ್ಯಭವಿಷ್ಯ; ಈ ರಾಶಿಯವರಿಂದು ಸೇವಾ ಕಾರ್ಯಗಳಿಂದ ಸಮಾಜದಲ್ಲಿ ಕೀರ್ತಿ ಗಳಿಸುವಿರಿ

Nitya Bhavishya
Nitya Bhavishya
Published on
ಮೇಷ: ವಸ್ತ್ರ ವ್ಯಾಪಾರಿಗಳಿಗೆ ಲಾಭ. ಮಹಿಳೆಯರಿಗೆ ಖರೀದಿ ಯಲ್ಲಿ ಮೋಸವಾಗುವ ಸಾಧ್ಯತೆ. ಸಾರ್ವಜನಿಕವಾಗಿ ಸಹನೆಯಿಂದ ವರ್ತಿಸಿ. ಶುಭಸಂಖ್ಯೆ: 9
ವೃಷಭ: ಹೊಸ ಪರಿಚಯ ಪ್ರಯೋಜನಕ್ಕೆ ಬರಲಿದೆ. ಕಲಾವಿದರಿಗೆ ಗೌರವ. ವೈದ್ಯಕೀಯ ಉದ್ಯೋಗಿಗಳಿಗೆ ಅನಿರೀಕ್ಷಿತ ಧನಾಗಮನ. ಶುಭಸಂಖ್ಯೆ:2
ಮಿಥುನ: ಸಾಮಾಜಿಕ ಸೇವೆಗಳಲ್ಲಿ ಸಕ್ರಿಯರಾಗುವಿರಿ. ಕುಟುಂಬದಲ್ಲಿ ಸಂಭ್ರಮದ ವಾತಾವರಣ. ಆಸ್ತಿ ವಿವಾದದಲ್ಲಿ ಜಯವಾಗಲಿದೆ. ಶುಭಸಂಖ್ಯೆ: 5
ಕಟಕ: ಗೃಹನಿರ್ವಣದಲ್ಲಿ ಮಂದಗತಿ. ಮಿತ್ರರಿಂದ ಅನಾರೋಗ್ಯ ಚಿಕಿತ್ಸೆಗೆ ಸಹಕಾರ. ವಿದೇಶದಲ್ಲಿರುವ ಮಕ್ಕಳಿಂದ ಶುಭವಾರ್ತೆ. ಶುಭಸಂಖ್ಯೆ:3
ಸಿಂಹ: ಸಂಗಾತಿಯೊಂದಿಗಿದ್ದ ಭಿನ್ನಾಭಿಪ್ರಾಯ ದೂರ. ಭೂ ವ್ಯವಹಾರದಲ್ಲಿ ಎಚ್ಚರವಿರಲಿ. ವಾಹನಮಾರಾಟದ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ:4
ಕನ್ಯಾ: ಕಾನೂನು ವಿದ್ಯಾರ್ಥಿಗಳಿಗೆ ಶುಭ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶ. ಪ್ರತಿಭಾನ್ವಿತ ಯುವತಿಯರಿಗೆ ವಿದೇಶ ಪ್ರಯಾಣ ಯೋಗ. ಶುಭಸಂಖ್ಯೆ:3
ತುಲಾ: ಪದವೀಧರ ಉದ್ಯೋಗಾಕಾಂಕ್ಷಿಗಳಿಗೆ ಶುಭದಾಯಕ ದಿನ. ಆಮದು-ರಫ್ತು ವ್ಯಾಪಾರಸ್ಥರಿಗೆ ಹೆಚ್ಚಿನ ಹಣ ಗಳಿಸುವ ಅವಕಾಶ. ಶುಭಸಂಖ್ಯೆ: 7
ವೃಶ್ಚಿಕ: ಮಸಾಲಾ ಪದಾರ್ಥಗಳ ಮಾರಾಟದಲ್ಲಿ ಲಾಭ. ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಶುಭ. ಹಣಕಾಸಿನ ವ್ಯವಹಾರಸ್ಥರಿಗೆ ಹಿನ್ನಡೆ. ಶುಭಸಂಖ್ಯೆ:9
ಧನಸ್ಸು: ಧಾರ್ವಿುಕ ಕಾರ್ಯಕ್ರಮಗಳಲ್ಲಿ ಭಾಗಿ. ಉದ್ಯೋಗಸ್ಥ ಮಹಿಳೆಯರಿಗೆ ಕಚೇರಿಯಲ್ಲಿ ಸನ್ಮಾನ. ಸಾಮಾಜಿಕ ಕ್ಷೇತ್ರದಲ್ಲಿ ಗೌರವ. ಶುಭಸಂಖ್ಯೆ:8
ಮಕರ: ಸೇವಾ ಕಾರ್ಯಗಳಿಂದ ಸಮಾಜದಲ್ಲಿ ಕೀರ್ತಿ ಗಳಿಸುವಿರಿ. ಯುವ ವಕೀಲರಿಗೆ ವೈಫಲ್ಯ ಕಾಡಲಿದೆ. ಐಟಿ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ:5
ಕುಂಭ: ಕಮಿಷನ್ ವ್ಯವಹಾರದಲ್ಲಿ ಹಣ ಸಂಪಾದನೆ. ಮನರಂಜನಾ ಕಲಾವಿದರಿಗೆ ಬೇಡಿಕೆ. ಕೃಷಿ ಉತ್ಪನ್ನ ಮಾರಾಟದಲ್ಲಿ ಆದಾಯ. ಶುಭಸಂಖ್ಯೆ: 8
ಮೀನ: ಸಂಶೋಧನಾ ವಿದ್ಯಾರ್ಥಿಗಳಿಗೆ ಯಶಸ್ಸು ದೊರೆಯಲಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಶಿಕ್ಷಕರಿಗೆ ದೂರದೂರಿಗೆ ವರ್ಗಾವಣೆ. ಶುಭಸಂಖ್ಯೆ:9
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net