ಮೇಷ: ಆರೋಗ್ಯದ ಕಡೆ ಗಮನವಿರಲಿ. ಉದ್ಯಮಸ್ಥ ಮಹಿಳೆಯರಿಗೆ ವಿದೇಶ ಪ್ರಯಾಣ. ವೀಸಾ ಸಮಸ್ಯೆಗೆ ಪರಿಹಾರ. ಶುಭಸಂಖ್ಯೆ: 8.ವೃಷಭ: ಆಸ್ತಿ ವಿಚಾರದ ಮಾತುಕತೆ ಫಲಪ್ರದ. ರಾಜಕೀಯ ರಂಗದವರಿಗೆ ಪದವಿ ಪ್ರಾಪ್ತಿಗಿದ್ದ ಅಡೆತಡೆ ನಿವಾರಣೆ. ಉದ್ಯಮಿಗಳಿಗೆ ಲಾಭ. ಶುಭಸಂಖ್ಯೆ: 8.ಮಿಥುನ: ಗೃಹ ಉಪಯೋಗಿ ಪದಾರ್ಥಗಳ ಖರೀದಿಯಲ್ಲಿ ಲಾಭ. ಆತ್ಮೀಯರ ಜತೆಯಲ್ಲಿ ಭೋಜನಕೂಟ. ಲಾಭದಾಯಕ ಪದವಿ ಪ್ರಾಪ್ತಿ. ಶುಭಸಂಖ್ಯೆ: 9.ಕಟಕ: ಕುಟುಂಬದ ವಿವಾದ ಕೋರ್ಟಿಗೆ ಹೋದೀತು. ಉನ್ನತ ವಿದ್ಯಾಭ್ಯಾಸದ ಹಾದಿ ಸುಗಮ. ಪಾಲು ದಾರಿಕೆಯಲ್ಲಿ ಬೃಹತ್ ಹೂಡಿಕೆ. ಶುಭಸಂಖ್ಯೆ: 4.ಸಿಂಹ: ಸರ್ಕಾರಿ ಉದ್ಯೋಗದಲ್ಲಿ ಇಲಾಖೆ ಬದಲಾಗಲಿದೆ. ಆಸ್ತಿ ವಿಭಾಗ. ಧಾರ್ವಿುಕ ಕ್ಷೇತ್ರದವರಿಗೆ ಉನ್ನತ ಮಟ್ಟದ ಪದವಿ ಸಿಗಲಿದೆ. ಶುಭಸಂಖ್ಯೆ: 3.ಕನ್ಯಾ: ಅಧ್ಯಾಪಕ ವೃತ್ತಿಯವರಿಗೆ ಶುಭದಿನ. ಮಾಧ್ಯಮದವರಿಗೆ ಧನಲಾಭ. ದೂರ ಪ್ರಯಾಣದ ಯೋಜನೆ ಕೈ ಬಿಡುವುದು ಒಳ್ಳೆಯದು. ಶುಭಸಂಖ್ಯೆ: 6 .ತುಲಾ: ರೇಷ್ಮೆ ಕೃಷಿಕರಿಗೆ ಆದಾಯ ಹೆಚ್ಚಲಿದೆ. ಸಾಲ ತೀರಿಸಲು ಬಂಧುಗಳಿಂದ ಸಹಾಯ. ಮನೆಯಲ್ಲಿ ಶುಭಕಾರ್ಯದ ಸಂಭ್ರಮ. ಶುಭಸಂಖ್ಯೆ: 6.ವೃಶ್ಚಿಕ: ಕೊಟ್ಟ ಸಾಲ ಮರಳಲಿದೆ. ಮಕ್ಕಳ ವಿದ್ಯಾಭ್ಯಾಸದ ಕನಸು ಸಾಕಾರ. ಪುಸ್ತಕ ವ್ಯಾಪಾರಿಗಳಿಗೆ ಧನ ಲಾಭ. ಇಷ್ಟ ದೇವರನ್ನು ಸ್ಮರಿಸಿ. ಶುಭಸಂಖ್ಯೆ: 3 .ಧನಸ್ಸು: ಆಪ್ತ ಸಲಹೆಗಾರರಿಗೆ ಬೇಡಿಕೆ. ದಂತವೈದ್ಯರಿಗೆ ವಿದೇಶ ಪ್ರಯಾಣ. ಆಟೋಮೊಬೈಲ್ಸ್ ವ್ಯಾಪಾರದಲ್ಲಿ ಹೊಸ ಹೂಡಿಕೆ ಬರಲಿದೆ.ಶುಭಸಂಖ್ಯೆ: 5.ಮಕರ: ನಾಟಕ-ಯಕ್ಷಗಾನ ಕಲಾವಿದರಿಗೆ ಸಾರ್ವಜನಿಕ ಸನ್ಮಾನ. ಭಾಷಣಕಾರರಿಗೆ ವಿದೇಶದಲ್ಲಿ ವೇದಿಕೆ ಲಭ್ಯ. ಅಡಿಕೆ ಕೃಷಿಕರಿಗೆ ಲಾಭ. ಶುಭಸಂಖ್ಯೆ: 2.ಕುಂಭ: ಕುಟುಂಬದಲ್ಲಿ ಆಕಸ್ಮಿಕ ಘಟನೆ ಆತಂಕ ತಂದೀತು. ಟ್ರಾವೆಲ್ಸ್ ಮಾಲೀಕರಿಗೆ ಧನ ಲಾಭ. ಕಟ್ಟಡ ನಿರ್ವಣದಲ್ಲಿ ಉತ್ತಮ ಪ್ರಗತಿ. ಶುಭಸಂಖ್ಯೆ: 9.ಮೀನ: ಉದ್ಯೋಗಸ್ಥ ಮಹಿಳೆಯರಿಗೆ ಮೇಲಧಿಕಾರಿಗಳಿಂದ ಪ್ರಶಂಸೆ. ಪಶುಸಂಗೋಪನೆಯಲ್ಲಿ ಲಾಭ. ರಕ್ಷಣಾ ವಿಭಾಗದಲ್ಲಿ ಉದ್ಯೋಗ. ಶುಭಸಂಖ್ಯೆ: 2