ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಆಸ್ತಿ ವಿವಾದದಲ್ಲಿ ಜಯ

Nitya Bhavishya
Nitya Bhavishya
Published on
ಮೇಷ: ವಸ್ತ್ರ ವ್ಯಾಪಾರಿಗಳಿಗೆ ಲಾಭ. ಮಹಿಳೆಯರು ವಸ್ತು ಖರೀದಿಯಲ್ಲಿ ಎಚ್ಚರದಿಂದಿರಿ. ಸಾರ್ವಜನಿಕವಾಗಿ ಸಹನೆಯಿಂದ ವರ್ತಿಸಿ. ಶುಭಸಂಖ್ಯೆ: 5
ವೃಷಭ: ಹೊಸ ಪರಿಚಯದಿಂದ ಪ್ರಯೋಜನ. ಸಂಗೀತ ಕಲಾವಿದರಿಗೆ ಗೌರವ. ವೈದ್ಯಕೀಯ ಕ್ಷೇತ್ರದ ಉದ್ಯೋಗಿಗಳಿಗೆ ಧನಾಗಮನ. ಶುಭಸಂಖ್ಯೆ: 9
ಮಿಥುನ: ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಳ್ಳಿ. ಕುಟುಂಬದಲ್ಲಿ ಸಂಭ್ರಮದ ವಾತಾವರಣ ಇರುವುದು. ಆಸ್ತಿ ವಿವಾದದಲ್ಲಿ ಜಯ. ಶುಭಸಂಖ್ಯೆ: 2
ಕಟಕ: ಗೃಹನಿರ್ಮಾಣದಲ್ಲಿ ಮಂದಗತಿ. ಮಿತ್ರರಿಂದ ಅನಾರೋಗ್ಯ ಚಿಕಿತ್ಸೆಗೆ ಸಹಕಾರ. ವಿದೇಶದಲ್ಲಿರುವ ಮಕ್ಕಳಿಂದ ಶುಭವಾರ್ತೆ. ಶುಭಸಂಖ್ಯೆ: 8
ಸಿಂಹ: ಸಂಗಾತಿಯೊಂದಿಗಿದ್ದ ಭಿನ್ನಾಭಿಪ್ರಾಯ ದೂರ. ಭೂ ವ್ಯವಹಾರದಲ್ಲಿ ಎಚ್ಚರ. ವಾಹನ ಮಾರಾಟ ವ್ಯವಹಾರದಲ್ಲಿ ಹೆಚ್ಚು ಲಾಭ. ಶುಭಸಂಖ್ಯೆ: 1
ಕನ್ಯಾ: ಕಾನೂನು ವಿದ್ಯಾರ್ಥಿಗಳಿಗೆ ಶುಭ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ. ಪ್ರತಿಭಾನ್ವಿತ ಯುವತಿಯರಿಗೆ ವಿದೇಶ ಪ್ರಯಾಣ. ಶುಭಸಂಖ್ಯೆ: 8
ತುಲಾ: ಪದವೀಧರ ಉದ್ಯೋಗಾಕಾಂಕ್ಷಿಗಳಿಗೆ ಶುಭದಿನ. ನಿರ್ಧಾರದಲ್ಲಿ ಎಡವಲಿದ್ದೀರಿ. ಆಮದು&ರಫ್ತು ವ್ಯಾಪಾರಸ್ಥರಿಗೆ ಹೆಚ್ಚಿನ ಗಳಿಕೆ. ಶುಭಸಂಖ್ಯೆ: 2
ವೃಶ್ಚಿಕ: ಮಸಾಲ ಪದಾರ್ಥಗಳ ಮಾರಾಟದಲ್ಲಿ ಲಾಭ. ಕೇಂದ್ರ ಸರ್ಕಾರಿ ಉದ್ಯೋಗದವರಿಗೆ ಶುಭ. ಹಣಕಾಸಿನ ವ್ಯವಹಾರಸ್ಥರಿಗೆ ಹಿನ್ನಡೆ. ಶುಭಸಂಖ್ಯೆ: 2
ಧನುಸ್ಸು: ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿ. ಉದ್ಯೋಗಸ್ಥ ಮಹಿಳೆಯರಿಗೆ ಕಚೇರಿಯಲ್ಲಿ ಸನ್ಮಾನ. ಸಾಮಾಜಿಕ ಕ್ಷೇತ್ರದಲ್ಲಿ ಗೌರವ. ಶುಭಸಂಖ್ಯೆ: 8
ಮಕರ: ಸೇವಾ ಕಾರ್ಯಗಳಿಂದ ಸಮಾಜದಲ್ಲಿ ಕೀರ್ತಿ ಗಳಿಸುವಿರಿ. ಯುವ ವಕೀಲರಿಗೆ ವೃತ್ತಿಯಲ್ಲಿ ಯಶಸ್ಸು. ಐಟಿ ಉದ್ಯೋಗ ಸಿಗಲಿದೆ. ಶುಭಸಂಖ್ಯೆ: 4
ಕುಂಭ: ವಿದೇಶ ವಿನಿಮಯ ವ್ಯವಹಾರದಲ್ಲಿ ಸಂಪಾದನೆ. ಮನರಂಜನಾ ಕಲಾವಿದರಿಗೆ ಬೇಡಿಕೆ. ಕೃಷಿ ಉತ್ಪನ್ನ ಮಾರಾಟದಲ್ಲಿ ಆದಾಯ. ಶುಭಸಂಖ್ಯೆ: 4
ಮೀನ: ಸಂಶೋಧನಾ ವಿದ್ಯಾರ್ಥಿಗಳಿಗೆ ಯಶಸ್ಸು. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಶಿಕ್ಷಕರಿಗೆ ದೂರದೂರಿಗೆ ವರ್ಗಾವಣೆ ಸಾಧ್ಯತೆ. ಶುಭಸಂಖ್ಯೆ: 7
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net