ಮೇಷ: ಕೇಂದ್ರ ಸರ್ಕಾರದ ಉದ್ಯೋಗ ಪ್ರಾಪ್ತಿಯಾಗುವುದು. ಅಡಿಕೆ, ತೆಂಗು ಬೆಳೆಗಾರರಿಗೆ ಶುಭ ಸುದ್ದಿ. ಕನಸಿನ ನಿವೇಶನ ಸಿಗಲಿದೆ. ಶುಭಸಂಖ್ಯೆ:5.ವೃಷಭ: ಹಣ ಗಳಿಕೆ ಹೆಚ್ಚಲಿದೆ. ಹಳೆಯ ವಾಹನ ಮಾರಾಟದಲ್ಲಿ ಲಾಭ. ದೇವಾಲಯ ನಿರ್ಮಾಣಕ್ಕೆ ಕುಟುಂಬದಿಂದ ಸಹಕಾರ. ಶುಭಸಂಖ್ಯೆ:1.ಮಿಥುನ: ಪ್ರತಿಭಾ ಪುರಸ್ಕಾರಕ್ಕೆ ಪಾತ್ರರಾಗುವಿರಿ. ಉದ್ಯಮಿ ಮಹಿಳೆಯರಿಗೆ ಪ್ರಗತಿ. ಕ್ರೀಡಾಪಟುಗಳಿಗೆ ಹೊರ ರಾಜ್ಯಕ್ಕೆ ಪ್ರಯಾಣ. ಶುಭಸಂಖ್ಯೆ:8.ಕಟಕ: ಬಾಡಿಗೆ ವಾಹನ ಮಾಲೀಕರಿಗೆ ಲಾಭ. ವಿವಾಹದ ಪ್ರಯತ್ನ ಯಶಸ್ವಿಯಾಗುವುದು. ದಿನದ ಅಂತ್ಯದಲ್ಲಿ ಶುಭ ಸುದ್ದಿ ಸಿಗುತ್ತದೆ. ಶುಭಸಂಖ್ಯೆ:7.ಸಿಂಹ: ಸರ್ಕಾರಿ ಕೆಲಸಗಳಲ್ಲಿ ಆಸಕ್ತಿ. ಸಾಲ ತೀರಿಸಲು ಆತ್ಮೀಯರ ಸಹಕಾರ. ಹಣಕಾಸು ವಿಚಾರದಲ್ಲಿ ದುಡುಕಿನ ನಿರ್ಧಾರ ಬೇಡ. ಶುಭಸಂಖ್ಯೆ:7.ಕನ್ಯಾ: ಸಾಮಾಜಿಕ ಕಾರ್ಯದಲ್ಲಿ ಪಾಲ್ಗೊಳ್ಳುವ ಅವಕಾಶ. ಮಹತ್ವದ ಸಂಧಾನ ಸಾಧ್ಯತೆ. ಆತ್ಮಸ್ಥೆರ್ಯ ಹೆಚ್ಚುವ ಟನೆ ಸಾಧ್ಯತೆ. ಶುಭಸಂಖ್ಯೆ:6.ತುಲಾ: ಭೂ ವ್ಯವಹಾರಗಳಲ್ಲಿ ತಾಳ್ಮೆ ವಹಿಸಿ. ಕುಟುಂಬದಲ್ಲಿ ಸಂತಸದ ದಿನಗಳು. ಪದವಿ ಪ್ರಾಪ್ತಿಯ ವಿಷಯದಲ್ಲಿ ಉತ್ತಮ ಬೆಳವಣಿಗೆ. ಶುಭಸಂಖ್ಯೆ:3.ವೃಶ್ಚಿಕ: ಹಣಕಾಸು ವಿಚಾರದಲ್ಲಿ ಯಾರನ್ನು ನಂಬಬೇಡಿ. ಸ್ನೇಹಿತರೊಂದಿಗೆ ಕೂಡಿ ಮಾಡಿದ ಯೋಜನೆಗಳು ಫಲಕಾರಿಯಾಗುತ್ತವೆ. ಶುಭಸಂಖ್ಯೆ: 8.ಧನಸ್ಸು: ಆಸ್ತಿ ಸಂಬಂಧಿತ ಕೆಲಸಗಳಲ್ಲಿ ಯಶಸ್ಸು. ಅವಿವಾಹಿತ ರಿಗೆ ಮಾಂಗಲ್ಯಯೋಗವಿದೆ. ಸಹೋದರನ ಆರೋಗ್ಯದಲ್ಲಿ ಸುಧಾರಣೆ. ಶುಭಸಂಖ್ಯೆ: 9.ಮಕರ: ಹಠದ ಸ್ವಭಾವದಿಂದ ಅವಕಾಶ ವಂಚಿತರಾಗುವಿರಿ. ಯೋಗ ಶಿಕರಿಗೆ ಬೇಡಿಕೆ ಹೆಚ್ಚಳ. ಹಿರಿಯರ ಮಾರ್ಗದರ್ಶನ ಒಳ್ಳೆಯದು. ಶುಭಸಂಖ್ಯೆ:2.ಕುಂಭ: ಸಾಲ ಪಡೆಯುವ ವ್ಯವಹಾರದಲ್ಲಿ ಎಚ್ಚರ. ಆಸ್ತಿ ವಿಭಾಗಕ್ಕೆ ಕುಟುಂಬದ ಸದಸ್ಯರಿಂದ ಬೆಂಬಲ. ಕೆಲಸದಲ್ಲಿ ಪ್ರಗತಿ ಸಾಧಿಸುವಿರಿ. ಶುಭಸಂಖ್ಯೆ: 3.ಮೀನ: ಐಟಿ ಉದ್ಯಮದಲ್ಲಿ ಸವಾಲಿನ ಸನ್ನಿವೇಶ ಸೃಷ್ಟಿ. ಧಾರ್ಮಿಕ ನೌಕರರಿಗೆ ಉದ್ಯೋಗದಲ್ಲಿ ಅಸ್ಥಿರತೆ ಭೀತಿ. ಆಧ್ಯಾತ್ಮಿಕ ಆಸಕ್ತಿ ವೃದ್ಧಿ. ಶುಭಸಂಖ್ಯೆ:4