ಮೇಷ: ನಿಮ್ಮ ಕಚೇರಿಯಲ್ಲಿ ಉನ್ನತಾಧಿಕಾರಿಗಳ ಜತೆಗೆ ಚರ್ಚೆ. ಆಹಾರ ಧಾನ್ಯಗಳ ಮಾರಾಟಗಾರರಿಗೆ ಅನಿರೀಕ್ಷಿತ ಧನಾಗಮನ. ಶುಭಸಂಖ್ಯೆ: 2.ವೃಷಭ: ಸಂಗಾತಿಯ ಆರೋಗ್ಯದ ಕಡೆ ಗಮನಹರಿಸಿ. ನ್ಯಾಯಾಲಯದ ಕೆಲಸಗಳಲ್ಲಿ ವಿಳಂಬ. ವಿಚ್ಛೇದಿತರಿಗೆ ವಿವಾಹಕ್ಕೆ ಸುಸಮಯ. ಶುಭಸಂಖ್ಯೆ: 7.ಮಿಥುನ: ಸಿನಿಮಾ ಸಾಹಿತಿಗಳಿಗೆ ಮನ್ನಣೆ. ತಾಂತ್ರಿಕ ವಿದ್ಯಾರ್ಥಿಗಳಿಗೆ ರಣಕ್ಷೇತ್ರದಲ್ಲಿ ಅವಕಾಶ. ಸಂಘ-ಸಂಸ್ಥೆಗಳಿಂದ ಧನಲಾಭ. ಶುಭಸಂಖ್ಯೆ: 4.ಕಟಕ: ಕೃಷಿ ಸಂಶೋಧನೆಗಳಿಗೆ ಧನಸಹಾಯ. ಧರ್ಮಕಾರ್ಯಗಳಿಗೆ ನೆರವು ಬರಲಿದೆ. ಸಿಹಿ ತಿಂಡಿಗಳ ವ್ಯಾಪಾರದಲ್ಲಿ ಅಧಿಕ ಲಾಭ. ಶುಭಸಂಖ್ಯೆ: 1.ಸಿಂಹ: ಮಕ್ಕಳ ಆರೋಗ್ಯದಲ್ಲಿ ಎಚ್ಚರವಿರಲಿ. ಶಿಲ್ಪಿಗಳಿಗೆ ಆದಾಯ ಹೆಚ್ಚಾಗಲಿದೆ. ಐಟಿ ಕ್ಷೇತ್ರದಲ್ಲಿ ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿ. ಶುಭಸಂಖ್ಯೆ: 6.ಕನ್ಯಾ: ಆರ್ಥಿಕ ಸಂಕಷ್ಟ ಪರಿಹಾರವಾಗಲಿದೆ. ಉದ್ಯೋಗದಲ್ಲಿ ಅತಿಯಾದ ಒತ್ತಡ. ಸಿನಿಮಾ ರಂಗದಲ್ಲಿದ್ದವರು ತಾಳ್ಮೆಯಿಂದ ಇರಿ. ಶುಭಸಂಖ್ಯೆ: 4.ತುಲಾ: ಕಾನೂನು ಕ್ಷೇತ್ರದವರಿಗೆ ಸಮಾಜದಲ್ಲಿ ಗೌರವ ಪ್ರಾಪ್ತಿ. ಆಸ್ತಿ ವ್ಯಾಜ್ಯದಲ್ಲಿ ಮಂದಗತಿ. ಮಹಿಳಾ ರಾಜಕಾರಣಿಗಳಿಗೆ ಯಶಸ್ಸು. ಶುಭಸಂಖ್ಯೆ: 9.ವೃಶ್ಚಿಕ: ಹೂಡಿಕೆಗೆ ಇದು ಸುಸಮಯ. ಅಧಿಕಾರಿಗಳಿಗೆ ಸದಾ ಒತ್ತಡವಿರುತ್ತದೆ. ರಾಜಕಾರಣಿಗಳಿಗೆ ಅನಿರೀಕ್ಷಿತ ಪದವಿ ಪ್ರಾಪ್ತಿ ಸಾಧ್ಯತೆ. ಶುಭಸಂಖ್ಯೆ: 3.ಧನಸ್ಸು: ರಾಜಕೀಯ ವ್ಯಕ್ತಿಗಳು ಎಚ್ಚರದಿಂದ ಇರುವುದು ಅಗತ್ಯ. ರೇಷ್ಮೆಕೃಷಿಕರಿಗೆ ಲಾಭ. ಐಷಾರಾಮಿ ವಸ್ತುಗಳ ಖರೀದಿಯಲ್ಲಿ ನಷ್ಟ. ಶುಭಸಂಖ್ಯೆ: 1.ಮಕರ: ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಉನ್ನತ ವಿದ್ಯಾಭ್ಯಾಸದಲ್ಲಿ ಯಶಸ್ಸು. ವೈದ್ಯ ವೃತ್ತಿಯಲ್ಲಿ ಕೀರ್ತಿ ಸಂಪಾದನೆ. ಶುಭಸಂಖ್ಯೆ: 1.ಕುಂಭ: ಕೃಷಿಕರ ಬೆಳೆಗಳಿಗೆ ಉತ್ತಮ ಆದಾಯ. ಹಣಕಾಸಿನ ಸಂಸ್ಥೆಗಳಿಗೆ ಅಭಿವೃದ್ಧಿ. ಅನವಶ್ಯಕ ಖರೀದಿ ಖರ್ಚುಗಳನ್ನು ಕಡಿಮೆ ಮಾಡಿ. ಶುಭಸಂಖ್ಯೆ: 4.ಮೀನ: ಸ್ಥಿರಾಸ್ತಿ ವ್ಯವಹಾರಗಳಲ್ಲಿ ಪ್ರಗತಿ. ನೆರೆಹೊರೆಯವರಿಂದ ಸಹಾಯ. ರಿಯಲ್ ಎಸ್ಟೇಟ್‌ನವರಿಗೆ ಹಿತಶತ್ರುಗಳಿಂದ ತೊಂದರೆ. ಶುಭಸಂಖ್ಯೆ: 6