ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಬಹು ದಿನಗಳ ಪರಿಶ್ರಮಕ್ಕೆ ಫಲ ಸಿಗಲಿದೆ

nitya-bhavishya
nitya-bhavishya
Published on
ಮೇಷ: ಕೆಲಸಗಳಲ್ಲಿ ಚುರುಕು ಹೆಚ್ಚಾಗುತ್ತದೆ. ನಿಮ್ಮ ಪ್ರತಿಭೆಗೆ ಮೇಲಧಿಕಾರಿಗಳ ಮೆಚ್ಚುಗೆ. ಕುಟುಂಬದಲ್ಲಿ ಸಂತೋಷದ ಕ್ಷಣಗಳು.ಶುಭಸಂಖ್ಯೆ: 9
ವೃಷಭ: ಹಣಕಾಸಿನ ವಿಷಯಗಳಲ್ಲಿ ಯೋಚಿಸಿ ವ್ಯವಹರಿಸಿ. ಹಿರಿಯರಿಂದ ಸಲಹೆ. ಪೂಜಾ ಸಾಮಗ್ರಿಗಳ ವ್ಯಾಪಾರದಲ್ಲಿ ಲಾಭ.ಶುಭಸಂಖ್ಯೆ:1
ಮಿಥುನ: ಹೊಸ ಪರಿಚಯಗಳು ಉತ್ಸಾಹ ನೀಡುತ್ತವೆ. ಪ್ರಯಾಣದ ಯೋಜನೆ ಫಲಪದವಾಗಲಿದೆ. ಕೆಲಸದಲ್ಲಿ ಸ್ವಲ್ಪ ಒತ್ತಡ  ಇರಲಿದೆ. ಶುಭಸಂಖ್ಯೆ:2
ಕಟಕ: ಮನೆಯ ಕೆಲಸಗಳಲ್ಲಿ ತೊಡಗಿಕೊಳ್ಳುವ ದಿನ. ಆತ್ಮೀಯರ ಜೊತೆಗಿನ ಭಾವನಾತ್ಮಕ ಮಾತುಕತೆ. ಆರೋಗ್ಯದಲ್ಲಿ ಜಾಗ್ರತೆ ಅಗತ್ಯ. ಶುಭಸಂಖ್ಯೆ:8
ಸಿಂಹ: ಕಚೇರಿಯಲ್ಲಿ ಮಹತ್ವ ಸಿಗುತ್ತದೆ. ತಾಂತ್ರಿಕ ಪದವೀಧರರಿಗೆ ಉದ್ಯೋಗ ಲಭ್ಯ. ವೈದ್ಯಕಿಯ ವಿದ್ಯಾಭ್ಯಾಸದಲ್ಲಿ ಅಡ್ಡಿ ನಿವಾರಣೆ. ಶುಭಸಂಖ್ಯೆ:9
ಕನ್ಯಾ: ದಿನದ ಪ್ರಾರಂಭದಲ್ಲಿ ನಷ್ಟ ತೋರಿದರೂ ಕೊನೆಗೆ ಲಾಭವಿದೆ. ತಾಯಿಯ ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಗಮನ ಕೊಡಿ. ಶುಭಸಂಖ್ಯೆ: 3
ತುಲಾ: ಹೊಸ ಕಾರ್ಯಕ್ಕೆ ಶುಭಾರಂಭ. ಸ್ನೇಹಿತರ ಜತೆಗಿದ್ದ ಹಳೆಯ ಅಸಮಾಧಾನ ಶಮನ.  ಹೊಸ ಮನೆ ನಿರ್ಮಾಣಕ್ಕೆ ಚಾಲನೆ. ಶುಭಸಂಖ್ಯೆ:1
ವೃಶ್ಚಿಕ: ಅನಿರೀಕ್ಷಿತ ಘಟನೆ ತಳಮಳ ಉಂಟುಮಾಡಬಹುದು. ಹಳೆಯ  ಸ್ನೇಹಿತರ ಜತೆ ಮಾತುಕತೆ ಮನಸ್ಸಿಗೆ ಸಂತೋಷ ಕೊಡುತ್ತದೆ. ಶುಭಸಂಖ್ಯೆ:4
ಧನಸ್ಸು: ಬಹು ದಿನಗಳ ಪರಿಶ್ರಮಕ್ಕೆ ಫಲ ಸಿಗಲಿದೆ. ಹಣಕಾಸಿನ ವಿಷಯದಲ್ಲಿ ಶುಭಸುದ್ದಿ. ದೂರದ ಸಂಬಂಧಿಕರಿಂದ ಮಗನಿಗೆ ಸಂಬಂಧ ಬರಲಿದೆ. ಶುಭಸಂಖ್ಯೆ: 6
ಮಕರ: ಪಿತ್ರಾರ್ಜಿತ ಆಸ್ತಿ ವಿವಾದ ಇತ್ಯರ್ಥ. ವೈಮಾನಿಕ ಕ್ಷೇತ್ರದ ಉದ್ಯೋಗಿಗಳಿಗೆ ಕೆಲಸದ ಒತ್ತಡ. ಕ್ರೀಡಾಪಟುಗಳಿಗೆ ಹಣ ಸಿಗಲಿದೆ.ಶುಭಸಂಖ್ಯೆ:4
ಕುಂಭ: ಯೋಜಿಸಿದ ಕೆಲಸಗಳಲ್ಲಿ ಚಿಕ್ಕ ಬದಲಾವಣೆ ಮಾಡಿ. ಹೊಸ ಕಲಿಕೆಯ ಅವಕಾಶಗಳು ಲಭ್ಯ. ಸಂಗಾತಿಯ ಆರೋಗ್ಯ ಸುಧಾರಣೆ. ಶುಭಸಂಖ್ಯೆ: 3
ಮೀನ: ಕಲೆ&ಸಂಗೀತದಲ್ಲಿ ತೊಡಗಿಸಿಕೊಳ್ಳುವುದು ಒಳಿತು. ಹಣಕಾಸಿನಲ್ಲಿ ಸ್ಥಿರತೆ ಕಂಡುಬರುತ್ತದೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 2
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net