ಪ್ರಮುಖ ಮುಖ್ಯಾಂಶಗಳು.ವಿಜಯವಾಣಿ ನಿತ್ಯ ಭವಿಷ್ಯ ನವೆಂಬರ್ 14ಈ ರಾಶಿಯವರು ಇಂದು ಕುಲದೇವರ ದರ್ಶನ ಮಾಡುವಿರಿಈ ರಾಶಿಯವರಿಗೆ ಸ್ನೇಹಿತರಿಂದ ಸಹಕಾರ ದೊರೆಯುವುದುಇವರಿಗಂತೂ ಇಂದು ಆರ್ಥಿಕ ಲಾಭದ ಯೋಗ.| ವೇ|| ಬ್ರ|| ಶ್ರೀ ದೇವದತ್ತ ಶರ್ಮಾ ಗುರೂಜಿ.ಮೇಷ: ಅಧಿಕ ಖರ್ಚು. ಕುಲದೇವರ ದರ್ಶನ ಮಾಡುವಿರಿ. ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಉದ್ಯೋಗ ದೊರಕುವ ಸಂದರ್ಭ. ಶುಭಸಂಖ್ಯೆ: 4.ವೃಷಭ: ಸ್ನೇಹಿತರಿಂದ ಸಹಕಾರ ದೊರೆಯುವುದು. ಒತ್ತಡವನ್ನು ನಿಭಾಯಿಸುವಿರಿ. ಅಧಿಕಾರಿಗಳಿಂದ ಅದೃಷ್ಟ ಕೈ ತಪ್ಪಲು ಬಿಡಬೇಡಿ. ಶುಭಸಂಖ್ಯೆ:4.ಮಿಥುನ: ರೇಷ್ಮೆ ವ್ಯಾಪಾರದಲ್ಲಿ ಆದಾಯ. ನವೋದ್ಯಮಿಗಳಿಗೆ ಸರ್ಕಾರದಿಂದ ಸಹಾಯ ಸಿಗಲಿದೆ. ನೀರಿನ ವ್ಯತ್ಯಾಸದಿಂದ ಅನಾರೋಗ್ಯ. ಶುಭಸಂಖ್ಯೆ:4.ಕಟಕ: ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವಿರಿ. ಕಾರ್ಯಗಳು ಪೂರ್ಣಗೊಳ್ಳುವ ಸಾಧ್ಯತೆ. ಆರೋಗ್ಯದ ಕಡೆ ಗಮನಕೊಡಿ. ಶುಭಸಂಖ್ಯೆ: 2.ಸಿಂಹ: ಗತಕಾಲದ ಚಿಂತೆಯಿಂದ ಮುಕ್ತರಾಗಿರಿ. ಕೆಲಸದಲ್ಲಿ ಹೊಣೆಗಾರಿಕೆ ಹೆಚ್ಚಾಗುವುದು. ಮಾನಸಿಕ ಶಾಂತಿಗೆ ಯೋಗ ಉಪಯುಕ್ತ. ಶುಭಸಂಖ್ಯೆ: 1.ಕನ್ಯಾ: ವ್ಯಾಪಾರದಲ್ಲಿ ಭರ್ಜರಿ ಲಾಭದ ಸೂಚನೆಯಿದೆ. ಸ್ನೇಹಿತರ ಸಹಕಾರ ದೊರೆಯುತ್ತದೆ. ಆಧ್ಯಾತ್ಮಿಕ ಆಸಕ್ತಿ ಹೆಚ್ಚಾಗುವ ದಿನ.ಶುಭಸಂಖ್ಯೆ : 9.ತುಲಾ: ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ. ಕುಟುಂಬದಲ್ಲಿ ಸಂತೋಷದ ಘಟನೆ. ಹೊಸ ಯೋಜನೆಗಳ ಬಗ್ಗೆ ಗಂಭೀರ ಚಿಂತನೆ. ಶುಭಸಂಖ್ಯೆ:6.ವೃಶ್ಚಿಕ: ಕೆಲಸದ ಒತ್ತಡ ಇದ್ದರೂ ಪ್ರತಿಫಲ ಅನುಕೂಲಕರವಾಗಿರುತ್ತದೆ. ಸೂಕ್ತ ಕಾಲಕ್ಕೆ ಅನುಭವಿಗಳ ಸಲಹೆ ಸಿಗಲಿದೆ. ಪ್ರಯಾಣ ಯಶಸ್ವಿ. ಶುಭಸಂಖ್ಯೆ: 4.ಧನುಸ್ಸು: ಉತ್ಸಾಹ ಮತ್ತು ಆತ್ಮವಿಶ್ವಾಸದಿಂದ ಕೆಲಸದಲ್ಲಿ ನಿರೀಕ್ಷೆಗೂ ಮೀರಿದ ಪ್ರಗತಿ. ಮನೆಯಲ್ಲಿ ಶಾಂತಿಯ ವಾತಾವರಣ. ಆರೋಗ್ಯ ಸ್ಥಿರ. ಶುಭಸಂಖ್ಯೆ: 8.ಮಕರ: ಆರ್ಥಿಕ ಲಾಭದ ಯೋಗ. ಹಳೆಯ ಬಾಕಿ ಸಂಬಂಧೀ ವಿಚಾರಗಳು ಪರಿಹಾರ ಕಾಣುವ ಸಾಧ್ಯತೆ. ಆತ್ಮೀಯರ ಬೆಂಬಲ ಸಿಗುತ್ತದೆ. ಶುಭಸಂಖ್ಯೆ: 7.ಕುಂಭ: ಕೆಲಸದಲ್ಲಿ ಹೊಸ ಅವಕಾಶ ಸಿಗಲಿದೆ. ಮನಸ್ಸು ಸಂತೋಷದಿಂದ ತುಂಬಿರುತ್ತದೆ. ಹಳೆಯ ಸ್ನೇಹಿತರ ಭೇಟಿಯ ಸಂತೋಷ. ಶುಭಸಂಖ್ಯೆ: 2.ಮೀನ: ಶ್ರದ್ಧೆ ಮತ್ತು ತಾಳ್ಮೆಯಿಂದ ಕೆಲಸ ಮಾಡಿದರೆ ಯಶಸ್ಸು ನಿಶ್ಚಿತ. ಹೊಸ ಯೋಜನೆಗಳು ನೀವಂದುಕೊಂಡ ಲಾಭವನ್ನೇ ತರಲಿವೆ.ಶುಭಸಂಖ್ಯೆ: 5.