ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಚಿನ್ನದ ವ್ಯಾಪಾರದಲ್ಲಿ ಲಾಭ

ನಿತ್ಯಭವಿಷ್ಯ
ನಿತ್ಯಭವಿಷ್ಯ
Published on

ಮೇಷ: ವಮಗಳ ಮದುವೆ ವಿಷಯದಲ್ಲಿ ಮಾತುಕತೆಗಳು ಮುಂದುವರಿಯುತ್ತವೆ. ಉದ್ಯೋಗದಲ್ಲಿ ಹೊಸ ಅವಕಾಶಗಳು ಕಾಣಿಸಬಹುದು. ಶುಭಸಂಖ್ಯೆ:1

ವೃಷಭ: ವಿವಾಹ ವಿಚಾರ ವಿಳಂಬ. ವ್ಯಾಪಾರದಲ್ಲಿ ಸ್ಥಿರತೆ. ಬಟ್ಟೆ ವ್ಯಾಪಾರಿಗಳಿಗೆ ಶುಭದಿನ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಎಚ್ಚರ. ಶುಭಸಂಖ್ಯೆ:2

ಮಿಥುನ: ಹೊಸ ಉದ್ಯೋಗದಲ್ಲಿ ಮೆಚ್ಚುಗೆ ಸಿಗಲಿದೆ. ಚಿನ್ನದ ವ್ಯಾಪಾರದಲ್ಲಿ ಮಧ್ಯಮ ಲಾಭ. ವಿದೇಶಿ ಶಿಕ್ಷಣಕ್ಕೆ ಅವಕಾಶಗಳು ಹೆಚ್ಚುತ್ತವೆ. ಶುಭಸಂಖ್ಯೆ:9

ಕಟಕ: ಕುಟುಂಬದ ಒಪ್ಪಿಗೆಯಿಂದ ಮಹತ್ವದ ಚರ್ಚೆ ಮುಂದುವರಿಕೆ. ರಿಯಲ್ ಎಸ್ಟೇಟ್​ನಲ್ಲಿ ಲಾಭ. ಬಟ್ಟೆ ವ್ಯಾಪಾರದಲ್ಲಿ ಆದಾಯ. ಶುಭಸಂಖ್ಯೆ:5

ಸಿಂಹ: ಉದ್ಯೋಗದಲ್ಲಿ ಉತ್ತೇಜನ. ಚಿನ್ನದ ವ್ಯಾಪಾರದಲ್ಲಿ ಉತ್ತಮ ಪ್ರತಿಫಲ. ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲಕರ ಸಮಯ. ಶುಭಸಂಖ್ಯೆ:7

ಕನ್ಯಾ: ಮನೆಯಲ್ಲಿ ಶುಭಕಾರ್ಯಕ್ಕೆ ಇದ್ದ ಗೊಂದಲ ನಿವಾರಣೆ. ವ್ಯಾಪಾರದಲ್ಲಿ ಹೊಸ ಒಪ್ಪಂದ ಸಾಧ್ಯ. ಬಟ್ಟೆ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:1

ತುಲಾ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭ. ಚಿನ್ನದ ವ್ಯಾಪಾರದಲ್ಲಿ ಏರುಪೇರು. ವಿದ್ಯಾಭ್ಯಾಸದಲ್ಲಿ ಯಶಸ್ಸು ದೊರೆಯಲಿದೆ.ಶುಭಸಂಖ್ಯೆ:5

ವೃಶ್ಚಿಕ: ಮದುವೆ ವಿಚಾರದಲ್ಲಿ ತಾಳ್ಮೆ ಅಗತ್ಯ. ಉದ್ಯೋಗದಲ್ಲಿ ಒತ್ತಡ. ವ್ಯಾಪಾರದಲ್ಲಿ ಲಾಭ. ವಿದೇಶ ಪ್ರಯಾಣಕ್ಕೆ ಅಡಚಣೆ. ಶುಭಸಂಖ್ಯೆ:3

ಧನಸ್ಸು: ಆಹಾರ ಧಾನ್ಯಗಳ ವ್ಯಾಪಾರದಲ್ಲಿ ಹೊಸ ಬೆಳವಣಿಗೆ. ಚಿನ್ನದ ವ್ಯಾಪಾರದಲ್ಲಿ ಲಾಭ. ಉನ್ನತ ವಿದ್ಯಾಭ್ಯಾಸಕ್ಕೆ ಉತ್ತಮ ಅವಕಾಶ. ಶುಭಸಂಖ್ಯೆ:7

ಮಕರ: ಗೃಹ ನಿರ್ಮಾಣ ವಿಷಯದಲ್ಲಿ ಹಿರಿಯರ ಸಹಾಯ. ಉದ್ಯೋಗದಲ್ಲಿ ಸ್ಥಿರತೆ. ವಿದೇಶ ಪ್ರಯಾಣ ನಿಧಾನಗತಿಯಲ್ಲಿ ಸಾಗುತ್ತದೆ. ಶುಭಸಂಖ್ಯೆ:4

ಕುಂಭ: ಮದುವೆ ವಿಚಾರದಲ್ಲಿ ಅಚ್ಚರಿಯ ಬೆಳವಣಿಗೆ. ವ್ಯಾಪಾರದಲ್ಲಿ ಉತ್ತಮ ಲಾಭ. ಬಟ್ಟೆ ವ್ಯಾಪಾರದಲ್ಲಿ ನಿರೀಕ್ಷೆಗಿಂತ ಹೆಚ್ಚು ಆದಾಯ. ಶುಭಸಂಖ್ಯೆ: 2

ಮೀನ: ಉದ್ಯೋಗದಲ್ಲಿ ಬದಲಾವಣೆಯ ಸಾಧ್ಯತೆ. ಚಿನ್ನದ ವ್ಯಾಪಾರದಲ್ಲಿ ಲಾಭವಿದೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಯಶಸ್ಸು. ಶುಭಸಂಖ್ಯೆ:9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net