_1769708206031.webp?w=480&auto=format%2Ccompress&fit=max)
_1769708206031.webp?w=480&auto=format%2Ccompress&fit=max)
ಮೇಷ: ಛಾಯಾಚಿತ್ರ ಪ್ರದರ್ಶನದಿಂದ ಧನ ಸಂಪಾದನೆ. ಉನ್ನತ ಹುದ್ದೆಗೆ ವರ್ಗ. ಉದ್ಯೋಗಸ್ಥ ಮಹಿಳೆಯರಿಗೆ ವಿದೇಶ ಪ್ರಯಾಣ. ಶುಭಸಂಖ್ಯೆ: 4
ವೃಷಭ: ಗೃಹೋಪಕರಣ ಖರೀದಿಗೆ ಹಣವ್ಯಯ. ಬಟ್ಟೆ ಗಿರಣಿ ಮಾಲೀಕರಿಗೆ ಲಾಭ. ಸಗಟು ವ್ಯಾಪಾರದಲ್ಲಿ ನಷ್ಟ. ಕುಲದೇವತಾ ದರ್ಶನ. ಶುಭಸಂಖ್ಯೆ: 4
ಮಿಥುನ: ಅರಣ್ಯ ಇಲಾಖೆಯ ಉದ್ಯೋಗಿಗಳಿಗೆ ವರ್ಗಾವಣೆ. ವೀಸಾ ಸಮಸ್ಯೆ ಪರಿಹಾರವಾಗಲಿದೆ. ಪ್ರತಿಭೆಗೆ ಸೂಕ್ತ ವೇದಿಕೆ ಲಭ್ಯವಾಗಲಿದೆ. ಶುಭಸಂಖ್ಯೆ: 7
ಕಟಕ: ಹೊಸ ಉದ್ಯೋಗದಲ್ಲಿ ನೆಮ್ಮದಿ ಇರಲಿದೆ. ಮಾಧ್ಯಮ ಕ್ಷೇತ್ರದ ಉದ್ಯೋಗಿಗಳಿಗೆ ಧನ ಲಾಭ. ಧಾರ್ವಿುಕ ವಿಚಾರಗಳತ್ತ ಒಲವು. ಶುಭಸಂಖ್ಯೆ: 9
ಸಿಂಹ: ಕುಶಲಕರ್ವಿುಗಳಿಗೆ ಬೇಡಿಕೆ. ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗಲಿದೆ. ಆಹಾರ ಪದಾರ್ಥ ಮಾರಾಟದಲ್ಲಿ ಅನಿರೀಕ್ಷಿತ ಲಾಭ. ಶುಭಸಂಖ್ಯೆ: 8
ಕನ್ಯಾ: ವಿದೇಶದಲ್ಲಿರುವ ಮಗನಿಂದ ಶುಭ ಸುದ್ದಿ. ಮಗಳ ಮದುವೆಯ ಪ್ರಸ್ತಾಪ ಸಫಲವಾಗಲಿದೆ. ಆಸ್ತಿ ವಿವಾದ ಬಗೆಹರಿಯಲಿದೆ. ಶುಭಸಂಖ್ಯೆ: 3
ತುಲಾ: ಅಧಿಕಾರ ಪ್ರಾಪ್ತಿಗೆ ಇದ್ದ ನಿರ್ಬಂಧ ತೆರವು. ನಿವೇಶನ ಖರೀದಿಗೆ ನಿರ್ಧಾರ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹಣ ಗಳಿಸುವಿರಿ. ಶುಭಸಂಖ್ಯೆ: 6
ವೃಶ್ಚಿಕ: ಐಟಿ ಉದ್ಯೋಗ ಬದಲಾವಣೆಗೆ ಮನಸ್ಸು. ಆಸ್ತಿ ವಿಚಾರದಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳಿ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಪ್ರಗತಿ. ಶುಭಸಂಖ್ಯೆ: 9
ಧನಸ್ಸು: ಹೃದಯ ಸಂಬಂಧಿ ವ್ಯಾಧಿ ಗುಣವಾಗಲಿದೆ. ಕ್ರೀಡಾಪಟುಗಳಿಗೆ ಸರ್ಕಾರದಿಂದ ಸಹಾಯ. ಹಣ್ಣು, ತರಕಾರಿ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 1
ಮಕರ: ಸಿನಿಮಾ ಕ್ಷೇತ್ರದ ವೃತ್ತಿ ಪರರಿಗೆ ಗೌರವ, ಮನ್ನಣೆ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ತೆಂಗಿನ ಕಾಯಿ ಮಾರಾಟದಿಂದ ಲಾಭ. ಶುಭಸಂಖ್ಯೆ: 4
ಕುಂಭ: ಅಡಕೆ, ತೆಂಗು ಕೃಷಿಯಲ್ಲಿ ಪ್ರಗತಿ. ಆಹಾರ ವ್ಯವಹಾರದಲ್ಲಿ ಕೆಲಸಗಾರರಿಂದ ಕಿರಿಕಿರಿ. ವೈಮಾನಿಕ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ: 3
ಮೀನ: ವಿಚ್ಛೇದಿತರಿಗೆ ವಿವಾಹ. ನನೆಗುದಿಯಲ್ಲಿದ್ದ ಕೆಲಸಕ್ಕೆ ಚಾಲನೆ. ಉಪನ್ಯಾಸಕ ವೃತ್ತಿಯಲ್ಲಿ ಹೆಸರು ಸಂಪಾದನೆ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 1