ಈ ರಾಶಿಯ ಅವಿವಾಹಿತರಿಗೆ ಶುಭ ಸುದ್ದಿ

ನಿತ್ಯಭವಿಷ್ಯ
ನಿತ್ಯಭವಿಷ್ಯ
Published on

ಮೇಷ: ವ್ಯಾಪಾರ ಆರಂಭದಲ್ಲಿ ಇದ್ದ ಅಡ್ಡಿ ನಿವಾರಣೆ. ಪಿತ್ರಾರ್ಜಿತ ಆಸ್ತಿ ಹಂಚಿಕೆ ಇತ್ಯರ್ಥವಾಗಲಿದೆ. ಆಧ್ಯಾತ್ಮಿಕ ಚಿಂತನೆಯತ್ತ ಮನಸ್ಸು. ಶುಭಸಂಖ್ಯೆ:9

ವೃಷಭ: ಅನಿರೀಕ್ಷಿತ ಪ್ರಯಾಣ ಸಾಧ್ಯತೆ. ಹೋಟೆಲ್ ವ್ಯವಹಾರದಲ್ಲಿ ಲಾಭ. ಅಲಂಕಾರಿಕ ವಸ್ತುಗಳ ಖರೀದಿಯಲ್ಲಿ ಎಚ್ಚರಿಕೆ ಇರಲಿ. ಶುಭಸಂಖ್ಯೆ:1

ಮಿಥುನ: ರಾಜಕೀಯದಲ್ಲಿರುವವರಿಗೆ ತಿರುವು. ದಾಂಪತ್ಯದ ಮನಸ್ತಾಪ ನಿವಾರಣೆಯಾಗಲಿದೆ. ಲೆಕ್ಕ ಪರಿಶೋಧಕರ ವೃತ್ತಿಯಲ್ಲಿ ಪ್ರಗತಿ. ಶುಭಸಂಖ್ಯೆ:2

ಕಟಕ: ಪ್ರಭಾವಿ ವ್ಯಕ್ತಿಗಳ ಭೇಟಿ. ಕೃಷಿಕರಿಗೆ ಬೆಳೆದ ಬೆಳೆಗೆ ಲಾಭ ಸಿಗಲಿದೆ. ಜೇನು ಕೃಷಿಯಲ್ಲಿ ಅಭಿವೃದ್ಧಿ. ಸಂತಸದಾಯಕ ಬೆಳವಣಿಗೆ. ಶುಭಸಂಖ್ಯೆ:8

ಸಿಂಹ: ಉದ್ಯೋಗಸ್ಥ ಮಹಿಳೆಯರಿಗೆ ಬದಲಾವಣೆ. ತೀರ್ಥಕ್ಷೇತ್ರ ದರ್ಶನ. ಮಗನ ವಿವಾಹ ನಿಶ್ಚಯ. ಅನವಶ್ಯಕ ಖರೀದಿ ಬೇಡ. ಶುಭಸಂಖ್ಯೆ:7

ಕನ್ಯಾ: ಆಟೋಟ ಸ್ಪರ್ಧೆಯಲ್ಲಿ ವಿಜೇತರಾಗುವಿರಿ. ದೈಹಿಕ ಕಸರತ್ತಿನ ಮಾಲೀಕರಿಗೆ ಲಾಭ. ನೂತನ ಗೃಹ ಆರಂಭಕ್ಕೆ ಚಾಲನೆ ನೀಡುವಿರಿ. ಶುಭಸಂಖ್ಯೆ:6

ತುಲಾ: ನೂತನ ವೈದ್ಯರಿಗೆ ಸವಾಲಿನ ದಿನ. ವಾಣಿಜ್ಯ ವಿದ್ಯಾರ್ಥಿಗಳಿಗೆ ಯಶ. ಅವಿವಾಹಿತರಿಗೆ ಶುಭ ಸುದ್ದಿ. ಮಹಿಳೆಯರಿಗೆ ವಸ್ತ್ರ ಲಾಭ. ಶುಭಸಂಖ್ಯೆ:1

ವೃಶ್ಚಿಕ: ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ ನಿವಾರಣೆ. ಪೂರ್ವಿಕರ ಹಣ ನಿಮ್ಮ ಕೈ ಸೇರಲಿದೆ. ಷೇರು ಹೂಡಿಕೆಗೆ ಸುಸಮಯ. ಶುಭಸಂಖ್ಯೆ:3

ಧನಸ್ಸು: ಪಾಲುದಾರಿಕೆ ವ್ಯವಹಾರದಲ್ಲಿ ಹಣದ ಅಡಚಣೆ. ಉನ್ನತ ವಿದ್ಯಾಭ್ಯಾಸದ ಕನಸು ಸಾಕಾರ. ನವದಂಪತಿಗಳಿಗೆ ಶುಭ ಸುದ್ದಿ. ಶುಭಸಂಖ್ಯೆ:5

ಮಕರ: ದುಬಾರಿ ವಸ್ತುಗಳ ಖರೀದಿಗಾಗಿ ಹಣವ್ಯಯ. ಕಾನೂನು ಕ್ಷೇತ್ರದ ಉದ್ಯೋಗಿಗಳಿಗೆ ಶುಭದಿನ. ಹೊಸ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:8

ಕುಂಭ: ಕುಟುಂಬ ಸಮೇತ ಕುಲದೇವರ ದರ್ಶನ. ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿ. ಅಧಿಕಾರಿ ವರ್ಗದ ಸ್ತ್ರೀಯರಿಗೆ ಬಡ್ತಿ. ಶುಭಸಂಖ್ಯೆ:6

ಮೀನ: ಬಹುದಿನದ ಕನಸು ನನಸಾಗುವುದು. ನಟರಿಗೆ ಅವಕಾಶಗಳ ಮಹಾಪೂರ. ವೈದ್ಯರ ಸಲಹೆ ಪಾಲಿಸಿ. ದಿನಾಂತ್ಯದಲ್ಲಿ ಶುಭ ಸುದ್ದಿ. ಶುಭಸಂಖ್ಯೆ:4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net