_1766857491567.webp?w=480&auto=format%2Ccompress&fit=max)
_1766857491567.webp?w=480&auto=format%2Ccompress&fit=max)
ಮೇಷ: ಆರ್ಥಿಕ ಸ್ಥಿರತೆ ಕಡಿಮೆ ಇರಲಿದೆ. ಅನಗತ್ಯ ಖರ್ಚು ನಿಯಂತ್ರಿಸಿಕೊಳ್ಳಿ. ಕುಟುಂಬದೊಂದಿಗೆ ಸಮಯ ಕಳೆಯುವುದು ಉತ್ತಮ. ಶುಭಸಂಖ್ಯೆ:6
ವೃಷಭ: ಸಂಗಾತಿಯಿಂದ ಅಚ್ಚರಿಯ ಸುದ್ದಿ ಕೇಳುವಿರಿ. ಆರೋಗ್ಯ ಸಮಸ್ಯೆ ಮರುಕಳಿಸೀತು. ಕೃಷಿ ಉಪಕರಣಗಳ ಮಾರಾಟದಲ್ಲಿ ಲಾಭ. ಶುಭಸಂಖ್ಯೆ:1
ಮಿಥುನ: ಮನಸ್ಸಿಗೆ ಉಲ್ಲಾಸದಾಯಕ ದಿನ. ವ್ಯಾಪಾರದಲ್ಲಿ ಹೊಸ ಒಪ್ಪಂದ ಲಾಭ ತರಲಿದೆ. ಪ್ರೀತಿಪಾತ್ರರ ಜೊತೆ ಸಮಯ ಕಳೆಯುವಿರಿ. ಶುಭಸಂಖ್ಯೆ:7
ಕಟಕ: ವೈವಾಹಿಕ ಸಂಬಂಧ ಕೂಡಿಬರುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿ ಉತ್ತಮವಾಗಿದ್ದು, ಹಳೇ ಸಾಲ ತೀರಿಸಲು ಅವಕಾಶ ಸಿಗಲಿದೆ. ಶುಭಸಂಖ್ಯೆ:5
ಸಿಂಹ: ಅವಿವಾಹಿತರಿಗೆ ವಿವಾಹ ಯೋಗ. ಕ್ರೀಡಾಪಟುಗಳಿಗೆ ಯಶಸ್ಸಿನ ದಿನ. ಉನ್ನತ ವಿದ್ಯಾಭ್ಯಾಸಿಗಳಿಗೆ ಆತ್ಮವಿಶ್ವಾಸ ಹೆಚ್ಚಿರಲಿದೆ. ಶುಭಸಂಖ್ಯೆ:9
ಕನ್ಯಾ: ಧಾರ್ವಿುಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಆರ್ಥಿಕ ಹೂಡಿಕೆಗೆ ಇದು ಅತ್ಯುತ್ತಮ ಸಮಯ. ಹಿರಿಯರ ಆಶೀರ್ವಾದ ಲಭಿಸಲಿದೆ. ಶುಭಸಂಖ್ಯೆ:3
ತುಲಾ: ಸಕಾರಾತ್ಮಕ ಆಲೋಚನೆಗಳಿಂದ ಕಠಿಣ ಸಮಸ್ಯೆ ಪರಿಹರಿಸುವಿರಿ. ಸ್ನೇಹಿತರ ಭೇಟಿ. ದವಸ ಧಾನ್ಯಗಳ ಮಾರಾಟದಲ್ಲಿ ಲಾಭ. ಶುಭಸಂಖ್ಯೆ:4
ವೃಶ್ಚಿಕ: ವೃತ್ತಿ ಕ್ಷೇತ್ರದಲ್ಲಿ ಒತ್ತಡದಿಂದ ಮುಕ್ತಿ. ಪ್ರಯಾಣವನ್ನು ಸದ್ಯಕ್ಕೆ ಮುಂದೂಡುವುದು ಕ್ಷೇಮ. ವಾಣಿಜ್ಯ ಅಧಿಕಾರಿಗಳಿಗೆ ವರ್ಗಾವಣೆ. ಶುಭಸಂಖ್ಯೆ:1
ಧನಸ್ಸು: ಹಣಕಾಸಿನ ವಿಚಾರದಲ್ಲಿ ಎಚ್ಚರ. ಕುಟುಂಬದಲ್ಲಿ ಪುಟ್ಟ ಭಿನ್ನಾಭಿಪ್ರಾಯಗಳು ಬರಬಹುದು. ಕಚೇರಿಯಲ್ಲಿ ತಾಳ್ಮೆಯಿಂದ ವರ್ತಿಸಿ.ಶುಭಸಂಖ್ಯೆ: 6
ಮಕರ: ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿ ಸಿಗಲಿವೆ. ದಾಂಪತ್ಯದಲ್ಲಿ ಸುಖ-ಶಾಂತಿ ನೆಲೆಸಲಿದೆ. ತಂದೆಯ ಆರೋಗ್ಯ ಸುಧಾರಿಸಲಿದೆ. ಶುಭಸಂಖ್ಯೆ:1
ಕುಂಭ: ಮನೆಯಲ್ಲಿ ಶುಭ ಕಾರ್ಯದ ಬಗ್ಗೆ ಚರ್ಚೆ. ಆಸ್ತಿ ವಿಚಾರದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳುವಿರಿ. ಔಷದ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ:8
ಮೀನ: ಐಟಿ ಉದ್ಯೋಗಿಗಳಿಗೆ ವೇತನ ಹೆಚ್ಚಳ. ಬಾಕಿ ಹಣ ಕೈ ಸೇರಬಹುದು. ಸಂಗೀತ ನಾಟ್ಯ ಕಲಾವಿದರಿಗೆ ವಿದೇಶ ಪ್ರಯಾಣ ಯೋಗ.ಶುಭಸಂಖ್ಯೆ: 6