_1771955035593.webp?w=480&auto=format%2Ccompress&fit=max)
_1771955035593.webp?w=480&auto=format%2Ccompress&fit=max)
ಮೇಷ: ಮನೆ ನಿರ್ಮಾಣ ಕಾರ್ಯಗಳಲ್ಲಿ ಅನುಕೂಲ. ಸ್ಥಿರಾಸ್ತಿ ಮತ್ತು ವಾಹನ ಖರೀದಿಗೆ ಸಕಾಲ. ಆರ್ಥಿಕ ಸಂಕಷ್ಟಗಳು ಬಗೆಹರಿಯುವವು. ಶುಭಸಂಖ್ಯೆ: 1
ವೃಷಭ: ಆಸ್ತಿ ವಿಚಾರದಲ್ಲಿ ಗೊಂದಲ ಇತ್ಯರ್ಥವಾಗಲಿದೆ. ಸಾಲದ ಸುಳಿಯಿಂದ ಹೊರ ಬರುವಿರಿ. ಲೆಕ್ಕ ಪರಿಶೋಧಕರಿಗೆ ಅಧಿಕ ಆದಾಯ. ಶುಭಸಂಖ್ಯೆ: 2
ಮಿಥುನ: ಮನೆ ನವೀಕರಣಕ್ಕೆ ನಿರ್ಧಾರ. ರಾಜಕೀಯ ವ್ಯಕ್ತಿಯಿಂದ ಧನಸಹಾಯ. ದೀರ್ಘಕಾಲೀನ ಅನಾರೋಗ್ಯ ನಿಯಂತ್ರಣಕ್ಕೆ ಬರಲಿದೆ. ಶುಭಸಂಖ್ಯೆ: 9
ಕಟಕ: ಹೊಸ ಹೋಟೆಲ್ ಪ್ರಾರಂಭದಿಂದ ಅಧಿಕ ಲಾಭ. ಕಚೇರಿಯಲ್ಲಿ ಅಹಂಕಾರದ ಮಾತು ಬೇಡ. ಬಂಧುಗಳಿಗೆ ನೆರವಾಗುವಿರಿ. ಶುಭಸಂಖ್ಯೆ: 6
ಸಿಂಹ: ಮಹಿಳಾ ನಿರುದ್ಯೋಗಿಗಳಿಗೆ ಉದ್ಯೋಗ ಲಾಭ. ವೈದ್ಯರ ವೃತ್ತಿ ಜೀವನದಲ್ಲಿ ಅನಿರೀಕ್ಷಿತ ತಿರುವು. ಉದ್ಯೋಗ ನಿಮಿತ್ತ ಪ್ರಯಾಣ. ಶುಭಸಂಖ್ಯೆ: 1
ಕನ್ಯಾ: ಪರಸ್ಥಳದಲ್ಲಿ ಉದ್ಯೋಗ ಮಾಡಲು ಪ್ರಯಾಣ. ಹೊಸ ಉದ್ಯಮ ಸ್ಥಾಪನೆಯಿಂದ ಹಣ ಲಾಭ. ತಂದೆಯ ಮಿತ್ರರಿಂದ ಲಾಭ. ಶುಭಸಂಖ್ಯೆ: 9
ತುಲಾ: ವಿಮಾನ ನಿಲ್ದಾಣ ಉದ್ಯೋಗಿಗಳಿಗೆ ವರ್ಗಾವಣೆ. ಆತ್ಮಗೌರವ ವೃದ್ಧಿ. ಸಂಗೀತ ಕಲಾವಿದರಿಗೆ ಅದೃಷ್ಟ ಒಲಿದು ಬರುವುದು. ಶುಭಸಂಖ್ಯೆ: 3
ವೃಶ್ಚಿಕ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ. ಮಿತ್ರರೊಂದಿಗೆ ಔತಣಕೂಟದ ಸಂಭ್ರಮ. ಮಗನ ಮದುವೆಗಿದ್ದ ಅಡೆತಡೆಗಳ ನಿವಾರಣೆ.ಶುಭಸಂಖ್ಯೆ: 9
ಧನಸ್ಸು: ನಿಮ್ಮ ಕಚೇರಿಗೆ ಆದಾಯ ಅಧಿಕಾರಿಗಳ ಭೇಟಿ. ಹೊಸ ಉದ್ಯಮಕ್ಕೆ ಸಾಲ ಸಿಗಲಿದೆ. ಪುಣ್ಯಕ್ಷೇತ್ರಗಳಿಗೆ ಪ್ರಯಾಣ ಮಾಡುವಿರಿ. ಶುಭಸಂಖ್ಯೆ:6
ಮಕರ: ಮಕ್ಕಳ ಸಾಧನೆಯಿಂದ ಹೆಮ್ಮೆ. ಪೊಲೀಸ್ ವೃತ್ತಿಗೆ ಆಯ್ಕೆಯ ಸಾಧ್ಯತೆ. ವೈದ್ಯರ ಸಲಹೆ ಪಾಲಿಸಿ. ಆತ್ಮೀಯರ ಭೇಟಿಯಾದೀತು. ಶುಭಸಂಖ್ಯೆ: 4
ಕುಂಭ: ಆಸ್ತಿ ಮಾರಾಟದ ಆಲೋಚನೆ ಕಾರ್ಯಗತ. ಪ್ರಯಾಣದಲ್ಲಿ ಸ್ನೇಹಿತರ ಭೇಟಿ. ಬಂಧುಗಳ ಸಹಾಯದಿಂದ ಸಾಲ ತೀರಿಸುವಿರಿ. ಶುಭಸಂಖ್ಯೆ:8
ಮೀನ: ವಿದ್ಯಾಭ್ಯಾಸ ನಿಮಿತ್ತ ವಿದೇಶ ಪ್ರಯಾಣ. ಹೊಸ ವೈದ್ಯರ ಭೇಟಿಯಿಂದ ರೋಗ ಶಮನ. ಗೃಹ ನಿರ್ಮಾಣ ಕಾರ್ಯದಲ್ಲಿ ಪ್ರಗತಿ. ಶುಭಸಂಖ್ಯೆ:9