

ಮೇಷ: ಸಿಕ್ಕ ಅವಕಾಶ ಸದುಪಯೋಗಪಡಿಸಿಕೊಳ್ಳಿ. ಪೊಲೀಸ್ ವೃತ್ತಿಯಲ್ಲಿ ಆತ್ಮವಿಶ್ವಾಸ ಹೆಚ್ಚಾಗುವುದು. ನಾಟ್ಯಶಾಲೆ ಗುರುಗಳಿಗೆ ಲಾಭ. ಶುಭಸಂಖ್ಯೆ: 8
ವೃಷಭ: ಹಣಕಾಸುವ ತಕರಾರಿನ ವ್ಯವಹಾರದಿಂದ ಮುಕ್ತಿ. ಹೂಡಿಕೆ ಮಾಡಲು ಸುಸಮಯ. ತಾಯಿಯ ಆರೋಗ್ಯದ ಕಡೆ ಗಮನ ಕೊಡಿ. ಶುಭಸಂಖ್ಯೆ: 4
ಮಿಥುನ: ಪದವಿ ಪ್ರಾಪ್ತಿಯಲ್ಲಿ ಇದ್ದ ನಿರ್ಬಂಧ ತೆರವು. ಹೋಟೆಲ್ ವ್ಯವಹಾರದಲ್ಲಿ ಅಧಿಕ ಲಾಭ. ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶ ಪ್ರಯಾಣ. ಶುಭಸಂಖ್ಯೆ: 6
ಕಟಕ: ಆಸ್ತಿ ವಿವಾದ ಮಾತುಕತೆಯ ಮುಖಾಂತರ ಇತ್ಯರ್ಥ. ಬೃಹತ್ ವಾಹನ ಮಾಲೀಕರಿಗೆ ಲಾಭ. ಜಲ ಸಂಬಂಧಿ ಕೆಲಸದಲ್ಲಿ ಹುಷಾರಾಗಿರಿ. ಶುಭಸಂಖ್ಯೆ: 8
ಸಿಂಹ: ಕಿರುಚಿತ್ರ ನಿರ್ಮಾಪಕರಿಗೆ ಶುಭದಾಯಕ ದಿನ. ಪ್ರತಿಭಾವಂತರಿಗೆ ಸರ್ಕಾರದಿಂದ ಗೌರವ ಸಿಗಲಿದೆ. ಪುಸ್ತಕ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 6
ಕನ್ಯಾ: ಪ್ರಾರಂಭಿಸಿದ ವ್ಯಾಪಾರದಲ್ಲಿ ಪ್ರಗತಿಯಿದೆ. ಬ್ಯಾಂಕ್ ಉದ್ಯೋಗಿಗಳಿಗೆ ಪ್ರಮೋಷನ್. ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ: 3
ತುಲಾ: ದೈಹಿಕ ಶ್ರಮದಿಂದ ಮಾಡುವ ಕೆಲಸದಲ್ಲಿ ಧನ ಲಾಭ. ಚಲನಚಿತ್ರ ಗಾಯಕರಿಗೆ ಬೇಡಿಕೆ. ಕೇಂದ್ರ ಸರ್ಕಾರಿ ಕ್ಷೇತ್ರದಲ್ಲಿ ನೌಕರಿ ಪ್ರಾಪ್ತಿ. ಶುಭಸಂಖ್ಯೆ: 5
ವೃಶ್ಚಿಕ: ನವದಂಪತಿಗಳ ಜೀವನದಲ್ಲಿ ಅನಿರೀಕ್ಷಿತ ತಿರುವು. ಅಲಂಕಾರಿಕ ವಸ್ತುಗಳ ವ್ಯಾಪಾರದಲ್ಲಿ ಲಾಭ. ನಿವೇಶನ ಖರೀದಿಗೆ ಸುಸಮಯ. ಶುಭಸಂಖ್ಯೆ: 2
ಧನಸ್ಸು: ಪ್ರಭಾವಿ ವ್ಯಕ್ತಿಗಳ ಸಂಪರ್ಕ ಸಿಗಲಿದೆ. ದಿನಸಿ ಪದಾರ್ಥಗಳ ಮಾರಾಟದಲ್ಲಿ ಲಾಭ. ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆ. ಶುಭಸಂಖ್ಯೆ: 8
ಮಕರ: ನಿಮ್ಮ ನಿರ್ಧಾರಕ್ಕೆ ಕುಟುಂಬದಿಂದ ಬೆಂಬಲ. ಲೆಕ್ಕಪರಿಶೋಧಕರಿಗೆ ಹಣ ಲಾಭ. ನ್ಯಾಯಾಲಯದ ವ್ಯವಹಾರದಲ್ಲಿ ಜಯ. ಶುಭಸಂಖ್ಯೆ: 8
ಕುಂಭ: ತಾಂತ್ರಿಕ, ವೈದ್ಯಕೀಯ ಕ್ಷೇತ್ರದಲ್ಲಿ ಪ್ರಗತಿ. ಸಾಲ ತೀರಿಸಲು ಮಾರ್ಗ ಗೋಚರಿಸಲಿದೆ. ಹಳೆಯ ಸ್ನೇಹಿತರ ಭೇಟಿಯಾಗುವುದು. ಶುಭಸಂಖ್ಯೆ: 9
ಮೀನ: ಅಪರಿಚಿತರಿಂದ ಸಹಾಯ ಹಸ್ತ. ಕೃಷಿ ಉಪಕರಣಗಳ ಖರೀದಿಗೆ ನಿರ್ಧಾರ. ವಿದೇಶದಲ್ಲಿರುವ ಮಕ್ಕಳಿಂದ ಶುಭ ಸುದ್ದಿ ಬರಲಿದೆ. ಶುಭಸಂಖ್ಯೆ: 7