ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಬಾಕಿ ಹಣ ಕೈ ಸೇರಲಿದೆ

ನಿತ್ಯಭವಿಷ್ಯ
ನಿತ್ಯಭವಿಷ್ಯ
Published on

ಮೇಷ: ಇಂಜಿನಿಯರಿಂಗ್ ಪದವೀಧರರಿಗೆ ಉದ್ಯೋಗ ಲಭ್ಯ. ಕಾನೂನು ಸಲಹೆಗಾರರಿಗೆ ಬೇಡಿಕೆ. ಪಿತ್ರಾರ್ಜಿತ ಆಸ್ತಿ ವಿವಾದ ಸುಖಾಂತ್ಯ. ಶುಭಸಂಖ್ಯೆ: 9

ವೃಷಭ: ಸಾಮಾಜಿಕ ಹೋರಾಟಗಾರರಿಗೆ ಅಧಿಕಾರ ಪ್ರಾಪ್ತಿ. ಹಿತಶತ್ರುಗಳ ಬಗ್ಗೆ ಎಚ್ಚರವಿರಲಿ. ಬ್ಯಾಂಕ್ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ:1

ಮಿಥುನ: ಪ್ರಭಾವಿ ವ್ಯಕ್ತಿಗಳ ಸಂಪರ್ಕ ಲಭ್ಯ. ಮನೆಯಲ್ಲಿ ಶುಭಕಾರ್ಯದ ಸಂಭ್ರಮ. ಧಾರ್ವಿುಕ ಕ್ಷೇತ್ರದ ಉದ್ಯೋಗಿಗಳಿಗೆ ಧನಲಾಭ. ಶುಭಸಂಖ್ಯೆ:7

ಕಟಕ: ಪ್ರತಿಭಾನ್ವಿತರಿಗೆ ವಿದೇಶ ಪ್ರಯಾಣ ಯೋಗ. ಉದ್ಯಮಿ ಮಹಿಳೆಯರಿಗೆ ಪ್ರಗತಿ. ಲೆಕ್ಕಪರಿಶೋಧಕ ವೃತ್ತಿಯಲ್ಲಿ ಜನಮನ್ನಣೆ. ಶುಭಸಂಖ್ಯೆ:2

ಸಿಂಹ: ಪ್ರತಿಷ್ಠಿತ ಕಂಪನಿಗೆ ಆಯ್ಕೆಯಾಗಲಿದ್ದೀರಿ. ಕಿರುಚಿತ್ರ, ಚಲನಚಿತ್ರ ಪೋಷಕ ನಟರಿಗೆ ಶುಭದಿನ. ನಕಾರಾತ್ಮಕ ಚಿಂತನೆ ನಿಯಂತ್ರಿಸಿ. ಶುಭಸಂಖ್ಯೆ:2

ಕನ್ಯಾ: ಸಂಗಾತಿ ಕಡೆಯಿಂದ ಬರುವ ಆಸ್ತಿಗೆ ಇದ್ದ ಅಡ್ಡಿನಿವಾರಣೆ. ವಾರ್ತಾ ವಾಚಕಿಯರಿಗೆ ವಿವಾಹ ಯೋಗ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ:8

ತುಲಾ: ಬಾಕಿ ಹಣ ಕೈ ಸೇರಲಿದೆ. ಅಡಕೆ ತೋಟದತ್ತ ಗಮನಹರಿಸಲು ಸೂಕ್ತ ಸಮಯ. ಪಾಲುದಾರಿಕೆ ಯಲ್ಲಿ ಹೂಡಿಕೆದಾರರ ಸೇರ್ಪಡೆ. ಶುಭಸಂಖ್ಯೆ:3

ವೃಶ್ಚಿಕ: ರಾಜಕೀಯದವರಿಗೆ ಅನಿರೀಕ್ಷಿತ ಅಧಿಕಾರ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸ್ಪರ್ಧೆ. ಸಂಶೋಧನಾರ್ಥಿಗಳಿಗೆ ಪ್ರಯಾಣ. ಶುಭಸಂಖ್ಯೆ:2

ಧನಸ್ಸು: ಸ್ನೇಹಿತರೊಂದಿಗೆ ತೀರ್ಥಯಾತ್ರೆ. ಜಿಮ್ ತರಬೇತುದಾರರಿಗೆ ಲಾಭ. ಸಾಲಗಾರರಿಂದ ಇದ್ದ ಕಿರುಕುಳ ನಿವಾರಣೆಯಾಗಲಿದೆ. ಶುಭಸಂಖ್ಯೆ:8

ಮಕರ: ಆರ್ಥಿಕ ಚೇತರಿಕೆ. ಸಂಗಾತಿಯ ಅನಾರೋಗ್ಯ ನಿವಾರಣೆ. ಸೌಂದರ್ಯವರ್ಧಕ ಮಾರಾಟದಲ್ಲಿ ಲಾಭ. ವೀಸಾ ಸಮಸ್ಯೆ ಇತ್ಯರ್ಥ. ಶುಭಸಂಖ್ಯೆ: 2

ಕುಂಭ: ಪ್ರೀತಿಸಿದವರೊಂದಿಗೆ ವಿವಾಹ ನಿಶ್ಚಯ. ಜೇನು ಕೃಷಿಯಲ್ಲಿ ಗಣನೀಯ ಸಾಧನೆ. ದಿನಸಿ ಪದಾರ್ಥಗಳ ಮಾರಾಟದಲ್ಲಿ ಪ್ರಗತಿ. ಶುಭಸಂಖ್ಯೆ:4

ಮೀನ: ಆರೋಗ್ಯ ಇಲಾಖೆ ನೌಕರರಿಗೆ ವರ್ಗಾವಣೆ. ನಂಬಿಕಸ್ಥರಿಂದಲೇ ದ್ರೋಹ. ಯೋಗ ಸಾಧನೆಯತ್ತ ಮನಸ್ಸು. ಸಂಜೆ ಶುಭ ಸುದ್ದಿ. ಶುಭಸಂಖ್ಯೆ:6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net