ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಬಹುದಿನಗಳ ಪರಿಶ್ರಮಕ್ಕೆ ಫಲ ಸಿಗುವ ದಿನ

ನಿತ್ಯಭವಿಷ್ಯ
ನಿತ್ಯಭವಿಷ್ಯ
Published on
ಮೇಷ: ನನೆಗುದಿಗೆ ಬಿದ್ದ ಕೆಲಸಕ್ಕೆ ವೇಗ ಸಿಗಲಿದೆ. ಉನ್ನತ ವಿದ್ಯಾಭ್ಯಾಸದ ಕನಸಿನ ಸಾಕಾರ. ಕೃಷಿ ಜಮೀನು ಖರೀದಿಗೆ ಸೂಕ್ತ ಸಮಯ. ಶುಭಸಂಖ್ಯೆ:6

ವೃಷಭ: ವಿದ್ಯುತ್ ಇಲಾಖೆ ನೌಕರರಿಗೆ ವರ್ಗಾವಣೆ. ವಿಚ್ಛೇದಿತರಿಗೆ ವಿವಾಹ ಯೋಗ. ನ್ಯಾಯಾಲಯದ ತೀರ್ಪು ನಿಮ್ಮ ಪರವಾಗಿರಲಿದೆ. ಶುಭಸಂಖ್ಯೆ: 9

ಮಿಥುನ: ಮಹಿಳೆಯರಿಗೆ ಕಚೇರಿಯಲ್ಲಿ ಉನ್ನತ ಹುದ್ದೆ. ಆರಕ್ಷಕ ವೃತ್ತಿಗೆ ಆಯ್ಕೆ. ನಾಟ್ಯ-ಸಂಗೀತ ಕಲಾವಿದರಿಗೆ ಉತ್ತಮ ವೇದಿಕೆ ಲಭ್ಯ. ಶುಭಸಂಖ್ಯೆ: 5

ಕಟಕ: ಶತ್ರುಗಳೆಲ್ಲ ಮಿತ್ರರಾಗುವರು. ಕುಟುಂಬದೊಂದಿಗೆ ಸಂತೋಷಕೂಟ. ತಾಂತ್ರಿಕ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಭದಿನ. ಶುಭಸಂಖ್ಯೆ:2

ಸಿಂಹ: ನಿಮ್ಮ ಪ್ರತಿಭೆಗೆ ಸೂಕ್ತ ಪುರಸ್ಕಾರ. ಪ್ರಭಾವಿಗಳ ಸಹಾಯದಿಂದ ಉದ್ಯೋಗ ಪಡೆಯುವಿರಿ. ರಾಜಕೀಯ ನೇತಾರರಿಗೆ ಕೀರ್ತಿ. ಶುಭಸಂಖ್ಯೆ:2

ಕನ್ಯಾ: ಹೊಸ ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿ. ಕ್ರಿಕೆಟ್ ತರಬೇತಿ ಸಂಸ್ಥೆಯ ಮಾಲೀಕರಿಗೆ ಲಾಭ. ವೀಸಾ ಸಮಸ್ಯೆ ನಿವಾರಣೆ. ಶುಭಸಂಖ್ಯೆ:1

ತುಲಾ: ಐಟಿ ಉದ್ಯೋಗಿಗಳಿಗೆ ಒತ್ತಡ. ಕೇಂದ್ರ ಸರ್ಕಾರಿ ನೌಕರರಿಗೆ ಬದಲಾವಣೆ ಸಾಧ್ಯತೆ. ಸಾರಿಗೆ ಸಂಸ್ಥೆ ಉದ್ಯೋಗಿಗಳಿಗೆ ಧನ ಲಾಭ. ಶುಭಸಂಖ್ಯೆ: 4

ವೃಶ್ಚಿಕ: ಸಾರ್ವಜನಿಕವಾಗಿ ಗೌರವ ಸಿಗಲಿದೆ. ಕಿರು ಚಿತ್ರ ನಿರ್ದೇಶಕರಿಗೆ ಧನಲಾಭ. ಹಾಲಿನ ಉತ್ಪನ್ನಗಳ ವ್ಯಾಪಾರದಲ್ಲಿ ಆದಾಯ. ಶುಭಸಂಖ್ಯೆ: 7

ಧನಸ್ಸು: ಕುಶಲಕರ್ವಿುಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಇವೆಂಟ್ ಮ್ಯಾನೇಜ್ಮೆಂಟ್ನಿಂದ ಉತ್ತಮ ಆದಾಯ. ಧಾರ್ವಿುಕ ವೃತ್ತಿಯವರಿಗೆ ಲಾಭ. ಶುಭಸಂಖ್ಯೆ: 2

ಮಕರ: ನಂಬಿಕಸ್ಥರಿಂದ ಮೋಸ ಹೋಗುವ ಸಾಧ್ಯತೆ. ಮಕ್ಕಳ ಪ್ರಗತಿಯಿಂದ ಸಂತಸವಾಗುವುದು. ವಿಚ್ಛೇದನ ಕಟ್ಟಳೆ ಇತ್ಯರ್ಥವಾಗಲಿದೆ. ಶುಭಸಂಖ್ಯೆ:3

ಕುಂಭ: ಪ್ರಭಾವಿ ಆಧ್ಯಾತ್ಮ ಗುರುಗಳ ಭೇಟಿ. ಬಹುದಿನಗಳ ಪರಿಶ್ರಮಕ್ಕೆ ಫಲ ಸಿಗುವ ದಿನ. ದಿನದ ಅಂತ್ಯದಲ್ಲಿ ಶುಭ ಸುದ್ದಿ ಕೇಳುವಿರಿ. ಶುಭಸಂಖ್ಯೆ:6

ಮೀನ: ಕುಟುಂಬದ ಆಸ್ತಿ ವಿವಾದ ಅಂತ್ಯ. ಸಂಗಾತಿಯ ಆರೋಗ್ಯ ಸುಧಾರಣೆಯಾಗಲಿದೆ. ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ. ಶುಭಸಂಖ್ಯೆ:5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net