ನಿತ್ಯಭವಿಷ್ಯ: ಈ ರಾಶಿಯ ಅವಿವಾಹಿತರಿಗೆ ವಿವಾಹಯೋಗ

ನಿತ್ಯಭವಿಷ್ಯ
ನಿತ್ಯಭವಿಷ್ಯ
Published on

ಮೇಷ: ಕುಟುಂಬದಲ್ಲಿದ್ದ ಅಸಮಾಧಾನ ಪರಿಹಾರ. ಬಾಹ್ಯಾಕಾಶ ಸಂಸ್ಥೆಯಲ್ಲಿ ಉದ್ಯೋಗ ಪ್ರಾಪ್ತಿ. ಪ್ರತಿಭೆಗೆ ಸೂಕ್ತ ಪುರಸ್ಕಾರ ಸಿಗಲಿದೆ. ಶುಭಸಂಖ್ಯೆ:3

ವೃಷಭ: ಋಣ ಸಂದಾಯ ಮಾಡುವಿರಿ. ವಾಕ್ಚಾತುರ್ಯದಿಂದ ಸಾರ್ವಜನಿಕವಾಗಿ ಮನ್ನಣೆ, ಗೌರವ. ಧಾರ್ವಿುಕ ಕಾರ್ಯಕ್ಕೆ ಚಾಲನೆ. ಶುಭಸಂಖ್ಯೆ:5

ಮಿಥುನ: ಸರ್ಕಾರಿ ಕೆಲಸಗಳಲ್ಲಿ ಯಶ. ಕುಟುಂಬದಲ್ಲಿ ವಿವಾಹ ಕಾರ್ಯ ಜರುಗಲಿದೆ. ಸಂಸ್ಕರಣ ಘಟಕ ನೌಕರರಿಗೆ ವೇತನ ಹೆಚ್ಚಾಗಲಿದೆ. ಶುಭಸಂಖ್ಯೆ: 4

ಕಟಕ: ವಿವಾಹಕ್ಕೆ ಸಂಬಂಧಿಸಿದ ಅಡೆತಡೆ ನಿವಾರಣೆ. ಸೇವಾನಿರತ ವೃತ್ತಿಯಲ್ಲಿ ಜನಪ್ರಿಯತೆ. ವಾಣಿಜ್ಯ ಕ್ಷೇತ್ರದ ಉದ್ಯೋಗಸ್ಥರಿಗೆ ಆತಂಕ. ಶುಭಸಂಖ್ಯೆ: 2

ಸಿಂಹ: ಜವಾಬ್ದಾರಿ ನಿರ್ವಹಣೆಗೆ ಅಧಿಕಾರಿಗಳಿಂದ ಪ್ರಶಂಸೆ. ಪುಣ್ಯಕ್ಷೇತ್ರ ದರ್ಶನ. ಶತ್ರು ಬಾಧೆ. ಕೂಡಿಟ್ಟ ಹಣ ಪ್ರಯೋಜನಕ್ಕೆ ಬರಲಿದೆ. ಶುಭಸಂಖ್ಯೆ:7

ಕನ್ಯಾ: ತಂಪು ಪಾನೀಯ ಮಾರಾಟದಲ್ಲಿ ಹಣ ಗಳಿಕೆ ಅವಕಾಶ. ಅವಿವಾಹಿತರಿಗೆ ವಿವಾಹಯೋಗ. ತೆಂಗಿನಕಾಯಿ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 8

ತುಲಾ: ಯಂತ್ರೋಪಕರಣ ದುರಸ್ತಿಗೆ ಹೆಚ್ಚು ವೆಚ್ಚವಾಗಲಿದೆ. ಲೆಕ್ಕ ಪರೀಕ್ಷಕರಿಗೆ ಅಧಿಕ ಧನ ಲಾಭ. ವಕೀಲ ವೃತ್ತಿಯಲ್ಲಿ ಹೆಸರು ಗಳಿಸುವಿರಿ. ಶುಭಸಂಖ್ಯೆ: 6

ವೃಶ್ಚಿಕ: ಗೃಹಬಳಕೆ ವಸ್ತು ವ್ಯಾಪಾರಕ್ಕೆ ನಿರ್ಧಾರ. ಪಿತ್ರಾರ್ಜಿತ ಆಸ್ತಿ ಲಭ್ಯ. ಆಭರಣ ಖರೀದಿಯಲ್ಲಿ ಮೋಸ. ಶಿಲ್ಪಕಲಾವಿದರಿಗೆ ಬೇಡಿಕೆ. ಶುಭಸಂಖ್ಯೆ: 5

ಧನಸ್ಸು: ಅಪರಿಚಿತರ ಬಗ್ಗೆ ಎಚ್ಚರ. ವಿದೇಶದಲ್ಲಿರುವ ಮಗನಿಂದ ಶುಭವಾರ್ತೆ. ದುಷ್ಟರಿಂದ ದೂರವಿರಿ. ಹೈನೋತ್ಪನ್ನದಲ್ಲಿ ಅಧಿಕ ಲಾಭ. ಶುಭಸಂಖ್ಯೆ: 6

ಮಕರ: ಯಕ್ಷಗಾನ, ನಾಟ್ಯ ಕಲಾವಿದರಿಗೆ ವಿಶೇಷ ವೇದಿಕೆ. ಸಂಗಾತಿ ಜತೆ ಧಾರ್ವಿುಕ ಕ್ಷೇತ್ರಗಳ ಭೇಟಿ. ಆರ್ಥಿಕ ಬಿಕ್ಕಟ್ಟು ಬಾಧಿಸುವುದು. ಶುಭಸಂಖ್ಯೆ: 4

ಕುಂಭ: ಅಡಿಕೆ ಬೆಳೆಗಾರರಿಗೆ ನಿರೀಕ್ಷೆಗಿಂತ ಹೆಚ್ಚು ಲಾಭ. ವಿಜ್ಞಾನ ಸಂಶೋಧಕರಿಗೆ ಉತ್ತಮ ಅವಕಾಶ. ಶಿಕ್ಷಕರಿಗೆ ಅನಗತ್ಯ ತಿರುಗಾಟ. ಶುಭಸಂಖ್ಯೆ: 7

ಮೀನ: ರಾಜಕೀಯದಲ್ಲಿ ಉನ್ನತ ಸ್ಥಾನ ಪ್ರಾಪ್ತಿ. ವಾಣಿಜ್ಯ ವ್ಯವಹಾರದಲ್ಲಿ ಪ್ರಗತಿ. ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ವಿದೇಶ ಪ್ರಯಾಣ. ಶುಭಸಂಖ್ಯೆ:5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net