ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಕನಸಿನ ನಿವೇಶನ ಪ್ರಾಪ್ತಿ

ನಿತ್ಯಭವಿಷ್ಯ
ನಿತ್ಯಭವಿಷ್ಯ
Published on

ಮೇಷ: ಕೃಷಿ ಕೆಲಸಗಳಿಂದ ಅನುಕೂಲ. ಕುಟುಂಬದಲ್ಲಿ ಆಸ್ತಿ ವಿವಾದ ಇತ್ಯರ್ಥ. ಸ್ನೇಹಿತರಿಂದ ದೂರ. ಮಕ್ಕಳ ನಡವಳಿಕೆಯಿಂದ ಬೇಸರ. ಶುಭಸಂಖ್ಯೆ: 9

ವೃಷಭ: ಬಂಧುಗಳೊಂದಿಗೆ ಪ್ರವಾಸಕ್ಕೆ ತೆರಳುವಿರಿ. ತಂದೆಯ, ಆರೋಗ್ಯದಲ್ಲಿ ಚೇತರಿಕೆ ಕಾಣುವುದು. ಸ್ಥಿರಾಸ್ತಿ ಖರೀದಿಗೆ ನಿರ್ಧಾರ. ಶುಭಸಂಖ್ಯೆ: 2

ಮಿಥುನ: ನಿರೀಕ್ಷಿತ ಪ್ರಯಾಣ ಮುಂದೆ ಹೋಗಲಿದೆ. ಪ್ರೇಮದ ವಿಷಯಗಳ ಪ್ರಸ್ತಾಪ ವಿಫಲವಾಗಲಿದೆ, ಅಕ್ಕಿ ಗಿರಣಿ ಮಾಲೀಕರಿಗೆ ಲಾಭ. ಶುಭಸಂಖ್ಯೆ: 4

ಕಟಕ: ಆರ್ಥಿಕ ಸಹಾಯದ ಅವಕಾಶ. ಭೂಮಿ ಖರೀದಿ ಯಲ್ಲಿ ದಾಖಲೆಗಳ ಸಮಸ್ಯೆ ಪರಿಹಾರ. ಸಹೋ ದರಿಯ ಜೀವನದಲ್ಲಿ ತಿರುವು. ಶುಭಸಂಖ್ಯೆ: 5

ಸಿಂಹ: ಉದ್ಯೋಗ ಸ್ಥಳದಲ್ಲಿ ಸಹೋದ್ಯೋಗಿಗಳಿಂದ ಸಹಾಯ. ಬಾಳೆ-ತೆಂಗು ಕೃಷಿಕರಿಗೆ ಉತ್ತಮ ಲಾಭ. ಪ್ರೀತಿಯ ವಿಷಯದ ಚಿಂತೆ. ಶುಭಸಂಖ್ಯೆ: 1

ಕನ್ಯಾ: ರಾಜಕೀಯ ವ್ಯಕ್ತಿಗಳಿಂದ ಕಾರ್ಯಾನುಕೂಲ. ವಸ್ತ್ರ ವ್ಯವಹಾರದಲ್ಲಿ ಲಾಭ. ಉನ್ನತ ವಿದ್ಯಾಭ್ಯಾಸದ ವಿದ್ಯಾರ್ಥಿಗಳಿಗೆ ಯಶಸ್ಸು. ಶುಭಸಂಖ್ಯೆ: 8

ತುಲಾ: ಶತ್ರುಗಳು ಮಿತ್ರರಾಗಿ ಪರಿವರ್ತನೆ. ಶಿಕ್ಷಕರಿಗೆ ವರ್ಗಾವಣೆ. ಕಲಾವಿದರಿಗೆ ಉತ್ತಮ ಆದಾಯ. ನಾಟ್ಯಕಲಾವಿದರಿಗೆ ಹೊಸ ವೇದಿಕೆ. ಶುಭಸಂಖ್ಯೆ: 7

ವೃಶ್ಚಿಕ: ಕನಸಿನ ನಿವೇಶನ ಪ್ರಾಪ್ತಿ. ಉದ್ಯೋಗ ಸ್ಥಳದಲ್ಲಿ ಒಳ್ಳೆಯ ಹೆಸರು. ಸಂಶೋಧನಾ ವಿದ್ಯಾರ್ಥಿಗಳಿಗೆ ವಿದೇಶ ಪ್ರಯಾಣ ಯೋಗ. ಶುಭಸಂಖ್ಯೆ: 1

ಧನಸ್ಸು: ಆತ್ಮೀಯರಿಂದ ಸಾಲದ ಸಹಾಯ. ದೇವತಾ ಕಾರ್ಯಗಳಲ್ಲಿ ಒಲವು. ಹೂವು - ಹಣ್ಣು ವ್ಯಾಪಾರದಲ್ಲಿ ಹಣ ಸಂಪಾದನೆ. ಶುಭಸಂಖ್ಯೆ: 4

ಮಕರ: ಅನಿರೀಕ್ಷಿತ ಘಟನೆ ನಡೆಯಲಿದೆ. ಆರ್ಥಿಕ ಸಮಸ್ಯೆಗಳು ದೂರವಾಗುವವು. ಪ್ರೀತಿಪಾತ್ರ ರೊಂದಿಗೆ ಪ್ರವಾಸ ಹೋಗುವಿರಿ. ಶುಭಸಂಖ್ಯೆ: 8

ಕುಂಭ:ಬಟ್ಟೆ ವ್ಯಾಪಾರದಲ್ಲಿ ದ್ವಿಗುಣ ಲಾಭ. ವಿಮಾ ಕಂಪನಿಯ ನೌಕರರರಿಗೆ ಬಡ್ತಿ. ಶಕ್ತಿ ದೇವತೆಗಳ ದರ್ಶನಕ್ಕೆ ಮುಂದಾಗುವಿರಿ. ಶುಭಸಂಖ್ಯೆ: 3

ಮೀನ: ಪೇಚಿಗೆ ಸಿಲುಕುವ ಸನ್ನಿವೇಶ ಉಂಟಾದೀತು. ಸಾಹಿತಿ, ಬರಹಗಾರರಿಗೆ ಧನ ಸಂಪಾದನೆಗೆ ಅವಕಾಶ. ಕೃಷಿಕರಿಗೆ ಸೂಕ್ತ ಲಾಭ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net