ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಮಾತಿನಿಂದಲೇ ಕಾರ್ಯ ಸಾಧನೆ

ನಿತ್ಯಭವಿಷ್ಯ
ನಿತ್ಯಭವಿಷ್ಯ
Published on

ಮೇಷ: ಇಂದು ತಾಂತ್ರಿಕ ಸವಾಲು ಎದುರಾಗಬಹುದು. ಕಚೇರಿಯಲ್ಲಿ ನಿಮ್ಮ ತ್ವರಿತ ನಿರ್ಧಾರ ಮತ್ತು ಕೌಶಲದಿಂದ ಮೆಚ್ಚುಗೆ ಸಿಗುತ್ತದೆ. ಶುಭಸಂಖ್ಯೆ: 9

ವೃಷಭ: ಬೆಳೆದ ಆಹಾರ ಧಾನ್ಯ ಬೆಳೆಗಳಿಗೆ ಒಳ್ಳೆಯ ಮಾರುಕಟ್ಟೆ ಸಿಗಲಿದೆ. ಕೃಷಿ ಸಂಬಂಧಿ ಹೊಸ ಯೋಜನೆ, ಯೋಚನೆ ಫಲಪ್ರದ. ಶುಭಸಂಖ್ಯೆ: 5

ಮಿಥುನ: ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಮಾನ್ಯತೆ ಸಿಗಲಿದೆ. ಬಾಕಿ ಇದ್ದ ಫೈಲ್​ಗಳು ವಿಲೇಯಾಗಲಿವೆ. ನಿಮಗೆ ಮೇಲಾಧಿಕಾರಿಗಳ ಬೆಂಬಲ. ಶುಭಸಂಖ್ಯೆ:7

ಕಟಕ: ರೇಷ್ಮೆ ಸೀರೆಗಳ ವ್ಯವಹಾರದಲ್ಲಿ ಹೊಸ ಗ್ರಾಹಕರ ಪರಿಚಯ. ಕಾಂಡಿಮೆಂಟ್ಸ್ ಮತ್ತು ಬೇಕರಿ ಪದಾರ್ಥಗಳ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 4

ಸಿಂಹ: ಸ್ಥಿರಾಸ್ತಿ ವ್ಯವಹಾರದಲ್ಲಿ ಶುಭಸುದ್ದಿ. ಪಾಲುದಾರಿಕೆಯಲ್ಲಿ ಲಾಭದ ಸೂಚನೆ. ವಿದೇಶಿ ವ್ಯಾಪಾರಸ್ಥರೊಂದಿಗೆ ಹೊಸ ಒಪ್ಪಂದ. ಶುಭಸಂಖ್ಯೆ:1

ಕನ್ಯಾ: ಒತ್ತಡ ಹೆಚ್ಚಾದರೂ ತೃಪ್ತಿ ಸಿಗುತ್ತದೆ. ಸೇವಾಭಾವಕ್ಕೆ ಪ್ರತಿಷ್ಠಿತ ಸಂಸ್ಥೆಯಿಂದ ಸನ್ಮಾನ. ಹಿರಿಯರು ಆರೋಗ್ಯ ಕಾಪಾಡಿಕೊಳ್ಳಿ. ಶುಭಸಂಖ್ಯೆ:2

ತುಲಾ: ಸೃಜನಾತ್ಮಕ ಕೆಲಸಗಳಿಗೆ ಉತ್ಸಾಹ. ಹೊಸಯೋಜನೆ ಆರಂಭಕ್ಕೆ ಅನುಕೂಲವಾಗಲಿದೆ. ಪ್ರತಿಭೆಗೆ ಸೂಕ್ತ ವೇದಿಕೆ ದೊರೆಯಲಿದೆ. ಶುಭಸಂಖ್ಯೆ:3

ವೃಶ್ಚಿಕ: ಕೃಷಿ ಉತ್ಪನ್ನ ವ್ಯಾಪಾರದಲ್ಲಿ ಲಾಭ. ಧಾರ್ವಿುಕ ವ್ಯಕ್ತಿಗಳ ಸಂಪರ್ಕ ಸಹಾಯ ಮಾಡುತ್ತವೆ. ಕಚೇರಿ ಕೆಲಸಕ್ಕಾಗಿ ದೂರ ಪ್ರಯಾಣ. ಶುಭಸಂಖ್ಯೆ:2

ಧನಸ್ಸು: ಉದ್ಯೋಗ ಸ್ಥಳದಲ್ಲಿ ಹೊಸ ಜವಾಬ್ದಾರಿ. ಗೃಹ ನಿರ್ವಣದಲ್ಲಿ ಪ್ರಗತಿ. ಯೋಜನೆ ಪೂರೈಸಲು ಸಹೋದ್ಯೋಗಿಗಳ ಸಹಕಾರ. ಶುಭಸಂಖ್ಯೆ: 6

ಮಕರ: ಹಣಕಾಸು ವ್ಯವಹಾರಗಳಲ್ಲಿ ತಾಳ್ಮೆ ಇರಲಿ. ಬಟ್ಟೆ ಮಳಿಗೆಯವರಿಗೆ ಲಾಭ. ಉದ್ಯೋಗಸ್ಥ ಸ್ತ್ರೀಯರಿಗೆ ಆರ್ಥಿಕವಾಗಿ ಶುಭದಿನ. ಶುಭಸಂಖ್ಯೆ:4

ಕುಂಭ: ಮಾತಿನಿಂದಲೇ ಕಾರ್ಯ ಸಾಧನೆ. ಸಂಗಾತಿಯ ಕಷ್ಟಕ್ಕೆ ನೆರವಾಗುವಿರಿ. ಹೊಸ ಸಂಪರ್ಕಗಳು ಲಾಭಕರ. ನಾಟ್ಯಕ್ಷೇತ್ರದಲ್ಲಿ ಪ್ರಸಿದ್ಧಿ. ಶುಭಸಂಖ್ಯೆ: 8

ಮೀನ: ಕಷ್ಟದಲ್ಲಿರುವವರಿಗೆ ನೆರವಾದ ಧನ್ಯತೆ. ವಾಣಿಜ್ಯೋದ್ಯಮಿಗಳಿಗೆ ಗೌರವ. ಧಾರ್ವಿುಕ ಸಮಾರಂಭದಲ್ಲಿ ಭಾಗಿಯಾಗಿ ನೆಮ್ಮದಿ. ಶುಭಸಂಖ್ಯೆ:5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net