ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಬ್ಯಾಂಕ್​ನಲ್ಲಿ ಸಾಲ ಮಂಜೂರು

ನಿತ್ಯಭವಿಷ್ಯ
ನಿತ್ಯಭವಿಷ್ಯ
Published on

ಮೇಷ: ವೃತ್ತಿ ಹಾಗೂ ಉದ್ಯೋಗದಲ್ಲಿ ಹೊಸ ಅವಕಾಶಗಳ ಸುಳಿವು. ವ್ಯವಹಾರದಲ್ಲಿ ಚಟುವಟಿಕೆ ಹೆಚ್ಚಬಹುದು. ಕುಟುಂಬದಲ್ಲಿ ಸಂತಸ. ಶುಭಸಂಖ್ಯೆ:5

ವೃಷಭ: ಹಣಕಾಸು ವಿಚಾರಗಳಲ್ಲಿ ಜಾಗ್ರತೆ ಅಗತ್ಯ. ಉದ್ಯೋಗದಲ್ಲಿ ಹಿರಿಯರ ಸಲಹೆ ಉಪಯುಕ್ತ. ಆರೋಗ್ಯದತ್ತ ಸ್ವಲ್ಪ ಗಮನ ಕೊಡಿ.ಶುಭಸಂಖ್ಯೆ:7

ಮಿಥುನ: ಶಿಕ್ಷಣ, ಐಟಿ-ಬಿಟಿ ಹಾಗೂ ತಾಂತ್ರಿಕ ಕ್ಷೇತ್ರದವರಿಗೆ ಅನುಕೂಲಕರ ದಿನ. ಹೊಸ ಯೋಜನೆ ಆರಂಭಿಸಲು ಉತ್ತಮ ಅವಕಾಶ. ಶುಭಸಂಖ್ಯೆ:9

ಕಟಕ: ಉದ್ಯೋಗದಲ್ಲಿ ಕೆಲಸದ ಒತ್ತಡ ಹೆಚ್ಚಾಗುತ್ತದೆ. ಕುಟುಂಬದ ವಿಚಾರಗಳಲ್ಲಿ ಸಹನೆ ಇರಲಿ. ನೂತನ ಗೃಹ ನಿರ್ಮಾಣಕ್ಕೆ ಚಾಲನೆ. ಶುಭಸಂಖ್ಯೆ:2

ಸಿಂಹ: ವ್ಯಾಪಾರ, ಸ್ವಂತ ಉದ್ಯಮದಲ್ಲಿ ಲಾಭದ ಸೂಚನೆ. ಸ್ನೇಹಿತರ ಸಹಕಾರದಿಂದ ಪ್ರಮುಖ ಕೆಲಸಗಳು ಬೇಗ ಮುಗಿಯಲಿವೆ. ಶುಭಸಂಖ್ಯೆ:1

ಕನ್ಯಾ: ಸಂಶೋಧನೆಯಲ್ಲಿ ಪ್ರಗತಿ. ರಾಜಕೀಯ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿ ದೊರೆವ ಸಾಧ್ಯತೆ. ಆಹಾರ ಮಾರಾಟದಲ್ಲಿ ಇಳಿಮುಖ. ಶುಭಸಂಖ್ಯೆ:4

ತುಲಾ: ಪಾಲುದಾರಿಕೆಯಲ್ಲಿ ಉತ್ತಮ ಫಲ ಸಿಗಲಿದೆ. ಹೊಸ ವ್ಯಕ್ತಿಗಳ ಪರಿಚಯದಿಂದ ಲಾಭ. ಆಸ್ತಿ ವಿವಾದ ಕೋರ್ಟ್ ಮೆಟ್ಟಿಲೇರಲಿದೆ. ಶುಭಸಂಖ್ಯೆ: 7

ವೃಶ್ಚಿಕ: ಮಾಡುವ ಉದ್ಯೋಗದಲ್ಲಿ ಜಾಗ್ರತೆ ಅಗತ್ಯ. ಕೃಷಿ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ. ಆಭರಣಗಳ ವ್ಯಾಪಾರದಲ್ಲಿ ಮಿಶ್ರ ಫಲವಿದೆ. ಶುಭಸಂಖ್ಯೆ:8

ಧನಸ್ಸು: ವಿದೇಶೀ ಸಂಬಂಧಿತ ಕಾರ್ಯಗಳಲ್ಲಿ ಪ್ರಗತಿ ಸಾಧ್ಯ. ಕುಟುಂಬದಲ್ಲಿ ದೇವತಾ ಕಾರ್ಯಗಳಿಂದ ಶಾಂತಿ. ಕಲಾವಿದರಿಗೆ ಶುಭದಿನ. ಶುಭಸಂಖ್ಯೆ:9

ಮಕರ: ಬ್ಯಾಂಕ್​ನಲ್ಲಿ ಸಾಲ ಮಂಜೂರಾಗಲಿದೆ. ಉದ್ಯೋಗದಲ್ಲಿ ಪರಿಶ್ರಮಕ್ಕೆ ಹಿರಿಯರಿಂದ ಪ್ರಶಂಸೆ. ಆರ್ಥಿಕವಾಗಿ ನಿಧಾನವಾದ ಲಾಭ. ಶುಭಸಂಖ್ಯೆ: 9

ಕುಂಭ: ತಾಂತ್ರಿಕ ಕ್ಷೇತ್ರದ ಉದ್ಯೋಗಿಗಳಿಗೆ ಉತ್ತಮ ದಿನ. ಸ್ನೇಹಿತರ ಸಹಾಯದಿಂದ ಪ್ರಮುಖ ಸಮಸ್ಯೆಯಿಂದ ಹೊರಬಂದು ನಿರಾಳ. ಶುಭಸಂಖ್ಯೆ:6

ಮೀನ: ಆಧ್ಯಾತ್ಮಿಕ ಚಿಂತನೆ ಹೆಚ್ಚಬಹುದು. ಅಲಂಕಾರಿಕ ವಸ್ತು ವ್ಯವಹಾರದಲ್ಲಿ ಪ್ರಗತಿ. ಬಹುಕಾಲದ ನಂತರ ಮನೆಯಲ್ಲಿ ಶುಭ ಕಾರ್ಯ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net