_1773682952643.webp?w=480&auto=format%2Ccompress&fit=max)
_1773682952643.webp?w=480&auto=format%2Ccompress&fit=max)
ಮೇಷ: ಬಹಳ ದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಹಳೆಯ ಸ್ನೇಹಿತರ ಭೇಟಿಯಿಂದ ಕಾರ್ಯ ಸಾಧನೆ. ಶುಭಸಂಖ್ಯೆ: 9
ವೃಷಭ: ಆತ್ಮೀಯರೊಂದಿಗೆ ಸಮಯ ಕಳೆಯುವಿರಿ. ಅಲಂಕಾರದ ಕೆಲಸದಲ್ಲಿ ಹಣ ವ್ಯಯ. ಹೊಸ ಆದಾಯದ ಮೂಲ ಕಂಡುಬರಲಿದೆ. ಶುಭಸಂಖ್ಯೆ: 1
ಮಿಥುನ: ಅಮೂಲ್ಯ ವಸ್ತು ಸಿಗುವ ಸಾಧ್ಯತೆ. ಕೆಲಸದ ನಿಮಿತ್ತ ಸಣ್ಣ ಪ್ರವಾಸ. ಪಾಲುದಾರಿಕೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಹಣ ಲಾಭ. ಶುಭಸಂಖ್ಯೆ:7
ಕಟಕ: ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕೋಪದ ಮೇಲೆ ನಿಯಂತ್ರಣವಿರಲಿ. ಸ್ತೋತ್ರ ಪಠಣದಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಶುಭಸಂಖ್ಯೆ:7
ಸಿಂಹ: ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರುತ್ತದೆ. ದಾಂಪತ್ಯ ಜೀವನದಲ್ಲಿ ಸಾಮರಸ್ಯವಿರಲಿ. ಪ್ರಭಾವಿ ವ್ಯಕ್ತಿಗಳ ಸಂಪರ್ಕವಾಗುವುದು. ಶುಭಸಂಖ್ಯೆ:7
ಕನ್ಯಾ: ವೃತ್ತಿ ಜೀವನದಲ್ಲಿ ಯಶಸ್ಸು ಸಿಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಸಹೋದರರೊಂದಿಗೆ ಆಸ್ತಿ ವಿವಾದ ಬಗೆಹರಿಯಲಿದೆ. ಶುಭಸಂಖ್ಯೆ:5
ತುಲಾ: ಕಚೇರಿಯಲ್ಲಿ ಸಂವಹನದಲ್ಲಿ ಏರುಪೇರು. ಹೊಸ ಕೆಲಸದ ಚಾಲನೆಗೆ ಸೂಕ್ತ ಸಮಯ. ದೂರ ಪ್ರಯಾಣದಿಂದ ಸಂಪಾದನೆ. ಶುಭಸಂಖ್ಯೆ:3
ವೃಶ್ಚಿಕ: ಸಿದ್ಧ ಉಡುಪು ತಯಾರಿಕೆಯ ಮಾಲೀಕರಿಗೆ ಅಭಿವೃದ್ಧಿ. ನಿಮ್ಮ ಮಾತಿನಿಂದ ಇತರರ ಮನ ಗೆಲ್ಲುವಿರಿ. ಹಿತಶತ್ರುಗಳ ಬಗ್ಗೆ ಎಚ್ಚರ. ಶುಭಸಂಖ್ಯೆ: 7
ಧನಸ್ಸು: ಆರಕ್ಷಕ ಇಲಾಖೆಯಲ್ಲಿ ಉದ್ಯೋಗ ಸಿಗುವುದು. ಸಮಾಜದಲ್ಲಿ ಗೌರವ ಪ್ರಾಪ್ತಿ. ಬರಬೇಕಾದ ಬಾಕಿ ಹಣ ಕೈ ಸೇರುವ ಸಾಧ್ಯತೆ ಇದೆ.ಶುಭಸಂಖ್ಯೆ: 7
ಮಕರ: ಪ್ರತಿಭೆಗೆ ತಕ್ಕ ಫಲ ಸಿಗಲಿದೆ. ಆಮದು ರಫ್ತು ವ್ಯವಹಾರಗಳಲ್ಲಿ ಯಶಸ್ಸು ದೊರೆಯುವುದು. ಖರ್ಚಿನ ಮೇಲೆ ಹಿಡಿತ ಇಟ್ಟುಕೊಳ್ಳಿ. ಶುಭಸಂಖ್ಯೆ:2
ಕುಂಭ: ಮನೆಯಲ್ಲಿ ಶುಭ ಕಾರ್ಯಗಳಿಗೆ ಚಾಲನೆ. ಮಹಿಳಾ ಉದ್ಯಮದಾರರಿಗೆ ಅದೃಷ್ಟ ಒಲಿಯಲಿದೆ. ಲೋಹಗಳ ವ್ಯಾಪಾರದಲ್ಲಿ ಲಾಭ. ಶುಭಸಂಖ್ಯೆ: 8
ಮೀನ: ಧಾರ್ವಿುಕ ಸಂಸ್ಥೆಯ ಕೆಲಸಗಾರರಿಗೆ ಅನಿರೀಕ್ಷಿತ ಹಣ ಲಾಭ. ವ್ಯವಹಾರದಲ್ಲಿ ಸವಾಲುಗಳಿದ್ದರೂ ಧೈರ್ಯದಿಂದ ಎದುರಿಸುವಿರಿ. ಶುಭಸಂಖ್ಯೆ: 2