_1784224159189.webp?w=480&auto=format%2Ccompress&fit=max)
_1784224159189.webp?w=480&auto=format%2Ccompress&fit=max)
ಮೇಷ: ಮಗಳಿಗೆ ಮದುವೆ ನಿಶ್ಚಯವಾಗಿ ಮನೆತುಂಬ ಸಂಭ್ರಮ. ಸಾಮಾಜಿಕ ಮನ್ನಣೆ ಸಿಗಲಿದೆ. ಕಚೇರಿಯಲ್ಲಿ ವಿಶೇಷ ದಿನ. ಶುಭಸಂಖ್ಯೆ: 8
ವೃಷಭ: ಕಲಾವಿದರಿಗೆ ವಿನೂತನ ಅವಕಾಶ. ಉದ್ಯೋಗದಲ್ಲಿ ವಿಶೇಷ ಲಾಭ. ಬಂಧುಗಳ ಭೇಟಿ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 7
ಮಿಥುನ: ಆತ್ಮಾವಲೋಕನ ಮಾಡಿಕೊಳ್ಳಿ. ಮುಂದೆ ಎದುರಾಗುವ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಬಹುದು. ತಾಳ್ಮೆ ಇರಲಿ. ಶುಭಸಂಖ್ಯೆ: 3
ಕಟಕ: ಕೃಷಿಕರಿಗೆ ವಿಶೇಷ ಲಾಭವಾಗುವುದು. ಮೋಸ ಹೋಗುವ ಸಾಧ್ಯತೆಗಳಿವೆ ಎಚ್ಚರದಿಂದಿರಿ. ವಿಶೇಷ ಅತಿಥಿಯ ಆಗಮನ ಸಾಧ್ಯತೆ. ಶುಭಸಂಖ್ಯೆ: 7
ಸಿಂಹ: ಆರೋಗ್ಯ ಸಮಸ್ಯೆ ಸ್ವಲ್ಪಮಟ್ಟಿಗೆ ಶಮನ. ಆಹಾರದ ಕಡೆ ವಿಶೇಷ ನಿಗಾ ಇರಲಿ. ತಂದೆ-ತಾಯಿಯ ಸಲಹೆ ಪಡೆದುಕೊಳ್ಳಿ. ಶುಭಸಂಖ್ಯೆ: 1
ಕನ್ಯಾ: ನಿಮ್ಮ ಯೋಚನೆ ಸಾಕಾರಗೊಳ್ಳಲು ಇಷ್ಟ ದೇವರನ್ನು ಪ್ರಾರ್ಥಿಸಿ. ಗಾಯಕರಿಗೆ ವಿಶೇಷ ಅವಕಾಶ. ಸ್ನೇಹಿತರಿಂದ ಅವಮಾನ. ಶುಭಸಂಖ್ಯೆ: 6
ತುಲಾ: ನಿರ್ಧಾರ ತೆಗೆದುಕೊಳ್ಳುವಲ್ಲಿ ದ್ವಂದ್ವ ಎದುರಾಗಬಹುದು. ಕುಟುಂಬದ ಸಲಹೆಯನ್ನು ಪಡೆದುಕೊಳ್ಳಿ. ದಿನಾಂತ್ಯದಲ್ಲಿ ಸಂತಸ. ಶುಭಸಂಖ್ಯೆ: 4
ವೃಶ್ಚಿಕ: ಬಾಳಸಂಗಾತಿಯೊಂದಿಗೆ ವ್ಯವಧಾನದಿಂದ ನಡೆದುಕೊಳ್ಳಿ. ಹೊಸ ವಾಹನ ಖರೀದಿಗೆ ನಿರ್ಧಾರ. ಮಕ್ಕಳ ಬಗ್ಗೆ ಗಮನವಿರಲಿ. ಶುಭಸಂಖ್ಯೆ: 5
ಧನಸ್ಸು: ಭೂ ವಿವಾದಕ್ಕೆ ಸಂಬಂಧಪಟ್ಟಂತೆ ಮಹತ್ವದ ನಿರ್ಧಾರ. ಮಾತಿನಿಂದ ಶತ್ರುಗಳು ಸೃಷ್ಟಿಯಾಗುತ್ತಾರೆ. ಕುಟುಂಬದಲ್ಲಿ ಕಿರಿ-ಕಿರಿ. ಶುಭಸಂಖ್ಯೆ: 4
ಮಕರ: ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಮೆಚ್ಚುಗೆ. ವೃತ್ತಿ ಜೀವನದಲ್ಲಿ ಬಡ್ತಿ ಸಿಗಬಹುದು. ತಾಯಿಯ ಆಶೀರ್ವಾದ ಪಡೆಯಿರಿ. ಶುಭಸಂಖ್ಯೆ: 7
ಕುಂಭ: ವಿವಾಹ ಅಪೇಕ್ಷುಗಳಿಗೆ ಸಂಗಾತಿ ನಿಗದಿಯಾಗಿ ಸಮಾಧಾನ. ತಂದೆ ತಾಯಿಯ ಮಾತನ್ನು ಧಿಕ್ಕರಿಸ ಬೇಡಿ. ಖರೀದಿಯಲ್ಲಿ ಮೋಸ. ಶುಭಸಂಖ್ಯೆ: 8
ಮೀನ: ವಂಚಕರು ಮೋಸ ಮಾಡಬಹುದು, ಎಚ್ಚರದಿಂದಿರಿ. ಯಾವುದೇ ವಿಷಯದಲ್ಲಿ ದುಡುಕಬೇಡಿ. ಆಕಸ್ಮಿಕ ಧನಲಾಭ ಸಾಧ್ಯತೆ. ಶುಭಸಂಖ್ಯೆ: 9