ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಲಾಭ

ನಿತ್ಯಭವಿಷ್ಯ
ನಿತ್ಯಭವಿಷ್ಯ
Published on

ಮೇಷ: ಉನ್ನತ ಸ್ಥಾನಮಾನ ಸಿಗಲಿದೆ. ಪರರ ಆಸ್ತಿ ಕಲಹದ ಮಧ್ಯಸ್ಥಿಕೆ ವಹಿಸುವಿರಿ. ದೈವಿಕ ಚಿಂತನೆ. ಗುರು ಹಿರಿಯರಲ್ಲಿ ಭಕ್ತಿ ಪ್ರದರ್ಶನ. ಶುಭಸಂಖ್ಯೆ: 9

ವೃಷಭ: ನೌಕರಿಯಲ್ಲಿ ಬಡ್ತಿ ಸಿಗಲಿದೆ. ಕೈಹಾಕಿದ ಕೆಲಸಗಳಲ್ಲಿ ಯಶಸ್ಸು. ಸುಖ ಭೋಜನ. ಬಂಧುಗಳಿಂದ ಆರ್ಥಿಕ ಸಹಾಯ ಸಿಗಲಿದೆ. ಶುಭಸಂಖ್ಯೆ: 3

ಮಿಥುನ: ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವಿರಿ. ಷೇರು ವ್ಯವಹಾರಗಳಲ್ಲಿ ಉತ್ತಮ ಆದಾಯ ಬರಲಿದೆ. ಚಂಚಲ ಮನಸ್ಸು. ಶುಭಸಂಖ್ಯೆ: 2

ಕಟಕ: ಗುತ್ತಿಗೆ ಕೆಲಸಗಾರರಿಗೆ ಅನುಕೂಲ. ತಾಯಿಯ ಆರೋಗ್ಯ ಚೇತರಿಕೆ. ಮಹಿಳೆಯರಿಗೆ ಭಾಗ್ಯ ವೃದ್ಧಿ. ಬಂಧುಗಳೊಂದಿಗೆ ಪ್ರಯಾಣ. ಶುಭಸಂಖ್ಯೆ: 8

ಸಿಂಹ: ಕೊಟ್ಟ ಕೆಲಸವನ್ನ ತಾಳ್ಮೆಯಿಂದ ನಿಭಾಯಿಸಿ. ಹೊಸ ವ್ಯಕ್ತಿಗಳ ಪರಿಚಯ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಲಾಭ ಗಳಿಸುವಿರಿ. ಶುಭಸಂಖ್ಯೆ: 4

ಕನ್ಯಾ: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭ. ಮನೆಯಲ್ಲಿ ತಾಳ್ಮೆ ಅಗತ್ಯ. ಕೃಷಿಕರಿಗೆ ಆಕಸ್ಮಿಕ ಲಾಭ. ಆಸ್ತಿ ವಿಚಾರ ಬಗೆಹರಿಯಲಿದೆ. ಶುಭಸಂಖ್ಯೆ: 1

ತುಲಾ: ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಹೊಸ ಜವಾಬ್ದಾರಿ. ಆರ್ಥಿಕ ಸಂಕಷ್ಟ ಪರಿಹಾರ. ಉನ್ನತ ವಿದ್ಯಾಭ್ಯಾಸದ ಕನಸಿನ ಸಾಕಾರ. ಶುಭಸಂಖ್ಯೆ: 9

ವೃಶ್ಚಿಕ: ಮಿತ್ರರಿಂದ ಆರ್ಥಿಕ ಸಹಾಯ. ಆಲಸ್ಯ ಮನೋಭಾವದಿಂದ ಅವಕಾಶ ಕಳೆದುಕೊಳ್ಳುವಿರಿ. ಹೊಸ ವಾಹನ ಖರೀದಿಸುವಿರಿ. ಶುಭಸಂಖ್ಯೆ: 6

ಧನಸ್ಸು: ಆಡುವ ಮಾತಿನ ಮೇಲೆ ನಿಗಾ ಇರಲಿ. ಮಗನ ವಿವಾಹಕ್ಕೆ ಸಂಬಂಧಿಸಿದ ಪ್ರಯತ್ನ ಸಫಲವಾಗಲಿದೆ. ಗೃಹ ನಿರ್ಮಾಣಕ್ಕೆ ಚಾಲನೆ. ಶುಭಸಂಖ್ಯೆ: 7

ಮಕರ: ವ್ಯವಹಾರದಲ್ಲಿ ಅಭಿವೃದ್ಧಿ. ಪ್ರಮುಖ ನಿರ್ಧಾರ ತೆಗೆದುಕೊಳ್ಳುವಲ್ಲಿ ಆಪ್ತರ ಸಲಹೆ. ಸ್ವಉದ್ಯೋಗಿ ಮಹಿಳೆಯರಿಗೆ ಸಾಧಾರಣ ಫಲ. ಶುಭಸಂಖ್ಯೆ: 7

ಕುಂಭ: ಅನಗತ್ಯ ಖರ್ಚಿಗೆ ಅವಕಾಶ ಕೊಡಬೇಡಿ. ವಿರೋಧಿಗಳನ್ನು ನಿಗ್ರಹಿಸುವಿರಿ. ತಾಂತ್ರಿಕ ಪದವೀಧರರಿಗೆ ಉದ್ಯೋಗ ಸಿಗಲಿದೆ. ಶುಭಸಂಖ್ಯೆ: 7

ಮೀನ: ಸತತ ಪ್ರಯತ್ನದಿಂದ ಕಾರ್ಯ ಸಫಲ. ನಂಬಿಕಸ್ಥ ಉದ್ಯೋಗಿಗಳಿಂದ ಲಾಭ. ಋಣವಿಮೋಚನೆ. ಅನವಶ್ಯಕ ವಿಷಯ ಬೇಡ.ಶುಭಸಂಖ್ಯೆ: 7

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net