_1786730373990.webp?w=480&auto=format%2Ccompress&fit=max)
_1786730373990.webp?w=480&auto=format%2Ccompress&fit=max)
ಮೇಷ: ಕೆಲಸದಲ್ಲಿ ಹೊಸ ಜವಾಬ್ದಾರಿ ಸಿಗಲಿದೆೆ. ವ್ಯಾಪಾರದಲ್ಲಿ ಲಾಭದ ಪ್ರಮಾಣ ಹೆಚ್ಚಾಗಲಿದೆ. ಕಲಾತ್ಮಕ ಚಟುವಟಿಕೆಗೆ ಪೋ›ತ್ಸಾಹ. ಶುಭಸಂಖ್ಯೆ: 5
ವೃಷಭ: ಸಹೋದ್ಯೋಗಿಗಳ ಜತೆ ಭಿನ್ನಾಭಿಪ್ರಾಯ ಮೂಡದಂತೆ ಎಚ್ಚರಿಕೆ ವಹಿಸಿ. ಹಣಕಾಸಿನ ವ್ಯವಹಾರದಲ್ಲಿ ಜಾಗರೂಕರಾಗಿರಿ.ಶುಭಸಂಖ್ಯೆ:1
ಮಿಥುನ: ಉದ್ಯೋಗದಲ್ಲಿ ಬಡ್ತಿಯ ಯೋಗವಿದೆ. ರಫ್ತು-ಆಮದು ವ್ಯವಹಾರದವರಿಗೆ ಆರ್ಥಿಕ ಬೆಳವಣಿಗೆ. ಬರವಣಿಗೆಯಲ್ಲಿ ಯಶಸ್ಸು. ಶುಭಸಂಖ್ಯೆ:5
ಕಟಕ: ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ. ಹೊಸ ಹೂಡಿಕೆಗೆ ಸೂಕ್ತ ದಿನವಲ್ಲ. ನಟನಾ ಕ್ಷೇತ್ರದಲ್ಲಿ ಇರುವವರಿಗೆ ಸಮಾಜದಲ್ಲಿ ಸನ್ಮಾನ. ಶುಭಸಂಖ್ಯೆ:7
ಸಿಂಹ: ಕಚೇರಿಯಲ್ಲಿ ಪ್ರಭಾವ ಹೆಚ್ಚಲಿದೆ. ಪಾಲುದಾರಿಕೆ ವ್ಯಾಪಾರದಲ್ಲಿ ಲಾಭದ ಸಾಧ್ಯತೆ. ಚಿತ್ರ, ಶಿಲ್ಪಕಲೆಯವರಿಗೆ ಬೇಡಿಕೆ ಹೆಚ್ಚಲಿದೆ. ಶುಭಸಂಖ್ಯೆ: 3
ಕನ್ಯಾ: ವಿದೇಶಿ ವ್ಯವಹಾರಗಳಲ್ಲಿ ಪ್ರಗತಿ. ಐಟಿ ಉದ್ಯೋಗಿಗಳಿಗೆ ದೂರ ಪ್ರಯಾಣದ ಸೂಚನೆ. ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಿರಿ. ಶುಭಸಂಖ್ಯೆ:2
ತುಲಾ: ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಹಳೆಯ ಬಾಕಿ ಬರಲಿದೆ. ಕೆಲಸದಲ್ಲಿ ಸಮಾಧಾನ. ಫ್ಯಾಷನ್ ಡಿಸೈನಿಂಗ್ ಕ್ಷೇತ್ರದಲ್ಲಿ ಬೇಡಿಕೆ. ಶುಭಸಂಖ್ಯೆ: 5
ವೃಶ್ಚಿಕ: ಕೆಲಸದ ಸ್ಥಳದಲ್ಲಿ ಹಿತ ಶತ್ರುಗಳ ಬಗ್ಗೆ ಎಚ್ಚರ. ವ್ಯಾಪಾರದಲ್ಲಿ ಹೊಸ ಯೋಜನೆಗಳನ್ನು ಜಾರಿಗೆ ತರಲು ಇದು ಸರಿಯಾದ ಸಮಯ.ಶುಭಸಂಖ್ಯೆ: 3
ಧನಸ್ಸು: ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಮಾನಸಿಕ ಸಿದ್ಧತೆ ಮಾಡಿಕೊಳ್ಳಿ. ಸ್ವಂತ ಉದ್ಯಮ ಆರಂಭಿಸುವವರಿಗೆ ಶುಭದಿನ.ಶುಭಸಂಖ್ಯೆ: 2
ಮಕರ: ಹಿರಿಯ ಅಧಿಕಾರಿಗಳ ಜತೆಯಲ್ಲಿ ಚರ್ಚೆ. ಕಬ್ಬಿಣ ಮತ್ತು ಕಟ್ಟಡ ಸಾಮಗ್ರಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ. ನಾಟಕ ರಂಗದವರಿಗೆ ಒಳ್ಳೆಯ ದಿನ. ಶುಭಸಂಖ್ಯೆ: 4
ಕುಂಭ: ಹೊಸ ಆಲೋಚನೆಗಳು ಜಯ ತರಲಿವೆ. ಆರ್ಥಿಕವಾಗಿ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಡಿಜಿಟಲ್ ಕಲೆ ಪರಿಣಿತರಿಗೆ ಬೇಡಿಕೆ. ಶುಭಸಂಖ್ಯೆ: 9
ಮೀನ: ಗುರುಬಲದಿಂದಾಗಿ ಎಲ್ಲಾ ಕ್ಷೇತ್ರದಲ್ಲೂ ಯಶಸ್ಸು ಸಿಗಲಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ಸಂತಸದ ದಿನ. ಶುಭಸಂಖ್ಯೆ: 3