ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಆದಾಯದಲ್ಲಿ ವೃದ್ಧಿ

ನಿತ್ಯಭವಿಷ್ಯ
ನಿತ್ಯಭವಿಷ್ಯ
Published on

ಮೇಷ: ಕಲಾವಿದರಿಗೆ ಅವಕಾಶ ಬರಲಿದೆ. ಬ್ಯಾಂಕ್ ವ್ಯವಹಾರದಲ್ಲಿ ಪ್ರಗತಿ. ವಿದ್ಯಾರ್ಥಿಗಳು ಆತ್ಮ ವಿಶ್ವಾಸದಿಂದ ಮುಂದುವರಿಯಿರಿ. ಶುಭಸಂಖ್ಯೆ: 3

ವೃಷಭ: ಆದಾಯದಲ್ಲಿ ವೃದ್ಧಿಯಾಗುವುದು. ಮೇಲಧಿಕಾರಿಗಳಿಂದ ಪ್ರಶಂಸೆ. ಕಟ್ಟಡಗಳ ಸಾಮಗ್ರಿಗಳ ವ್ಯಾಪಾರದಲ್ಲಿ ಲಾಭವಾಗಲಿದೆ. ಶುಭಸಂಖ್ಯೆ: 7

ಮಿಥುನ: ವಿದೇಶಿ ಸಂವಹನದಿಂದ ಹಣ ಗಳಿಸುವಿರಿ. ಕರಕುಶಲ ಕರ್ವಿುಗಳಿಗೆ ಬೇಡಿಕೆ ಹೆಚ್ಚಲಿದೆ. ಜಾಣ ಸ್ಪರ್ಧೆಗಳಲ್ಲಿ ವಿಜೇತರಾಗುವಿರಿ. ಶುಭಸಂಖ್ಯೆ: 6

ಕಟಕ: ಅವಿವಾಹಿತರಿಗೆ ಬಹುದಿನಗಳ ನಂತರ ವಿವಾಹ ಸಿದ್ದಿ. ರಾಜಕಾರಣಿಗಳ ಕನಸು ನನಸು. ಹಿರಿಯರ ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ: 3

ಸಿಂಹ: ಸಾರ್ವಜನಿಕವಾಗಿ ಗೌರವ, ಸನ್ಮಾನಗಳು ಸಿಗಲಿವೆ. ಸೋಲಾರ್ ಸಂಬಂಧಿ ವ್ಯವಹಾರದಲ್ಲಿ ಲಾಭ. ಅಡಿಕೆ ಕೃಷಿಯಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 3

ಕನ್ಯಾ: ಕೆಲಸದ ತಲ್ಲಿನತೆಯಿಂದ ಪ್ರಗತಿ. ಹಣದ ವ್ಯವಹಾರದಲ್ಲಿ ಎಚ್ಚರ. ಕಳ್ಳತನ ಸಂಭವ. ಮಹಿಳೆಯರು ಸ್ಥಿರತೆಯನ್ನು ಕಾಯ್ದುಕೊಳ್ಳಿ. ಶುಭಸಂಖ್ಯೆ: 9

ತುಲಾ: ಗಾಯಕರು, ವಾದಕರು ಮಾನಸಿಕ ಸಮತೋಲನ ಕಾಯ್ದುಕೊಳ್ಳಿ. ಗೃಹ ನಿರ್ವಣದಲ್ಲಿ ಗೊಂದಲ. ಧಾರ್ವಿುಕ ಚಟುವಟಿಕೆ. ಶುಭಸಂಖ್ಯೆ:3

ವೃಶ್ಚಿಕ: ಕೈಗೊಂಡ ಕೆಲಸಗಳು ಯಶಸ್ವಿಯಾಗಲಿವೆ. ಕಿರುಚಿತ್ರ ನಿರ್ದೇಶಕರಿಗೆ ಹೊಸ ಅವಕಾಶ. ಆಹಾರ ಧಾನ್ಯಗಳ ಮಾರಾಟದಲ್ಲಿ ಲಾಭ. ಶುಭಸಂಖ್ಯೆ:8

ಧನಸ್ಸು: ದೂರ ಪ್ರಯಾಣದಿಂದ ಲಾಭ. ಹಣಕಾಸು ಪರಿಸ್ಥಿತಿ ಸುಧಾರಿಸಲಿದೆ. ಕುಟುಂಬ ಸದಸ್ಯರೊಂದಿಗೆ ಅನ್ಯೋನ್ಯತೆ ಇರಲಿದೆ. ಶುಭಸಂಖ್ಯೆ: 5

ಮಕರ: ವಿದ್ಯಾರ್ಥಿಗಳ ಕಠಿಣ ಪರಿಶ್ರಮಕ್ಕೆ ಯಶಸ್ಸು ಸಿಗಲಿದೆ. ಹೊಸ ಜವಾಬ್ದಾರಿ ಹೆಗಲೇರಲಿದೆ. ತಾಂತ್ರಿಕ ಪದವೀಧರರಿಗೆ ಶುಭ ಸುದ್ದಿ. ಶುಭಸಂಖ್ಯೆ:6

ಕುಂಭ: ಕೊಟ್ಟ ಹಣ ತಿರುಗಿ ಬರಲಿದೆ. ಸಿಹಿ ತಿನಿಸುಗಳ ವ್ಯಾಪಾರದಲ್ಲಿ ಆದಾಯ ವೃದ್ಧಿ. ದಾಂಪತ್ಯದಲ್ಲಿದ್ದ ಮನಸ್ತಾಪ ಕೊನೆಗೊಳ್ಳಲಿದೆ.ಶುಭಸಂಖ್ಯೆ: 6

ಮೀನ: ಕುಂಠಿತಗೊಂಡ ಆರ್ಥಿಕ ಚಟುವಟಿಕೆ ಆರಂಭವಾಗಲಿದೆ. ಆರೋಗ್ಯ ಸಮಸ್ಯೆ ಪರಿಹಾರ. ಸಿದ್ದ ಉಡುಪು ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 4

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net